ಕಣ ಭೌತ ವಿಜ್ಞಾನಿಗಳಿಗೆ ನೊಬೆಲ್

7

ಕಣ ಭೌತ ವಿಜ್ಞಾನಿಗಳಿಗೆ ನೊಬೆಲ್

Published:
Updated:

ಸ್ಟಾಕ್‌ಹೋಮ್(ಐಎಎನ್‌ಎಸ್): ಕಣ ಭೌತಶಾಸ್ತ್ರ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗಾಗಿ ಫ್ರಾನ್ಸ್‌ನ ಸರ್ಗೈ ಹಾರೊಚ್ ಮತ್ತು ಅಮೆರಿಕದ ಡೇವಿಡ್ ಜೆ ವಿನ್‌ಲೆಂಡ್ ಅವರು 2012ನೇ ಸಾಲಿನ `ಭೌತವಿಜ್ಞಾನ ನೊಬೆಲ್ ಪುರಸ್ಕಾರ~ಕ್ಕೆ ಆಯ್ಕೆಯಾಗಿದ್ದಾರೆ.ಈ ಇಬ್ಬರು ವಿಜ್ಞಾನಿಗಳು ಸಂಶೋಧನೆ ನಡೆಸಿರುವ ಕಣ ಭೌತಶಾಸ್ತ್ರ(ಕ್ವಾಂಟಮ್) ಮುಂದೊಂದು ದಿನ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ತೀರ್ಪುಗಾರರು ತಿಳಿಸಿದ್ದಾರೆ.ಸರ್ಗೈ  ಮತ್ತು ವಿನ್‌ಲೆಂಡ್ ಕೈಗೊಂಡಿರುವ ಸಂಶೋಧನೆಯ ಮೊದಲ ಹೆಜ್ಜೆ `ಕಣ ಭೌತಶಾಸ್ತ್ರದ ಸಿದ್ಧಾಂತದ ಮೇಲೆ ಸೂಪರ್ ಫಾಸ್ಟ್ ಕಂಪ್ಯೂಟರ್‌ನಂತಹ ಹೊಸ ಕಂಪ್ಯೂಟರ್ ನಿರ್ಮಿಸುವುದಾಗಿದೆ. ಹೀಗೆ ತಯಾರಾಗುವ ಕಣ ಗಣಕಯಂತ್ರ (ಕ್ವಾಂಟಮ್ ಕಂಪ್ಯೂಟರ್) ಭವಿಷ್ಯದ ದಿನಗಳ ಜೀವನ ಶೈಲಿಯನ್ನೇ ಬದಲಾಯಿಸುತ್ತವೆ~ ಎಂದು ನೊಬೆಲ್ ಪುರಸ್ಕಾರ ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.ಶಾಲೆಯಿಂದ ವಜಾಗೊಂಡಿದ್ದ ನೊಬೆಲ್ ವಿಜ್ಞಾನಿ

ಲಂಡನ್(ಐಎಎನ್‌ಎಸ್):
`ನನಗೆ ವಿಜ್ಞಾನಿಯಾಗಬೇಕೆಂಬ ಬಯಕೆಯಿದೆ~ ಎಂದು ಹೇಳಿದ್ದಕ್ಕೆ ನನ್ನ ಶಿಕ್ಷಕಿ `ಇದೊಂದು ಹಾಸ್ಯಾಸ್ಪದ ಗುರಿ~ ಎಂದು ಅಣಕಿಸಿದ್ದಲ್ಲದೇ, ನನ್ನನ್ನು ಶಾಲೆಯಿಂದಲೇ ಹೊರ ಹಾಕಿದ್ದರು.. !ಸೋಮವಾರವಷ್ಟೇ ವೈದ್ಯಕೀಯ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾದ ಅಮೆರಿಕದ ವಿಜ್ಞಾನಿ ಜಾನ್ ಗುರ್ಡೊನ್, ತಮ್ಮ ಶಾಲಾ ದಿನಗಳನ್ನು `ಸುದ್ದಿಗಾರರೊಂದಿಗೆ~ ಹೀಗೆ ಹಂಚಿಕೊಂಡರು.  ಗುರ್ಡೊನ್ ಬಗ್ಗೆ, ಶಿಕ್ಷಕ ಈಟನ್ , `15ನೇ ವಯಸ್ಸಿನಲ್ಲಿ ಗುರ್ಡೊನ್ ಬೆಳವಣಿಗೆ ಗಮನಿಸಿದಾಗ ಆತ ಪ್ರತಿಷ್ಠಿತ ವಿಜ್ಞಾನಿಯಾಗುತ್ತಾನೆ ಎಂದು ಅನ್ನಿಸಿಯೇ ಇರಲಿಲ್ಲ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry