ಕತಾರ್ ಓಪನ್: ಸಾನಿಯಾ- ಎಲೆನಾಗೆ ಸೋಲು
ದೋಹಾ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಇಲ್ಲಿ ನಡೆಯುತ್ತಿರುವ ಕತಾರ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಿಂದ ಹೊರಬಿದ್ದಿದ್ದಾರೆ.
ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಾನಿಯಾ-ವೆಸ್ನಿನಾ ಜೋಡಿ 4-6, 4-6ರಲ್ಲಿ ವೇರಾ ದಶೆವಿನಾ ಹಾಗೂ ಶಹರಾ ಪೀರ್ ಎದುರು ಪರಾಭವಗೊಂಡಿತು. ಈ ಗೆಲುವಿಗಾಗಿ ಶ್ರೇಯಾಂಕ ರಹಿತ ಆಟಗಾರ್ತಿಯರಾದ ದಶೆವಿನಾ ಹಾಗೂ ಶಹರಾ 72 ನಿಮಿಷ ತೆಗೆದುಕೊಂಡರು.
ಆದರೆ ಸಾನಿಯಾ ಈ ಟೂರ್ನಿಯ ಸಿಂಗಲ್ಸ್ನಲ್ಲಿ ಆಡುತ್ತಿಲ್ಲ. ಕಳೆದ ವಾರ ಆಸ್ಟ್ರೇಲಿಯಾದ ಅನಾಸ್ತೇಸಿಯಾ ರೋಡಿಯೊನೊವ ಜೊತೆಗೂಡಿ ಆಡಿದ್ದ ಅವರು ಪಟ್ಟಾಯ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ನಲ್ಲಿ ಚಾಂಪಿಯನ್ ಆಗಿದ್ದರು.
ಬರಹ ಇಷ್ಟವಾಯಿತೆ?
0
0
0
0
0