ಕತಾರ್-ಬೆಂಗಳೂರು ವಿಮಾನ ಸಾಮರ್ಥ್ಯ ಹೆಚ್ಚಳ

7

ಕತಾರ್-ಬೆಂಗಳೂರು ವಿಮಾನ ಸಾಮರ್ಥ್ಯ ಹೆಚ್ಚಳ

Published:
Updated:

ದುಬೈ (ಪಿಟಿಐ): ಕತಾರ್ ಏರ್‌ಲೈನ್ಸ್ ವಿಶ್ವದಾದ್ಯಂತ ತನ್ನ ವಿಮಾನಯಾನ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದ್ದು, ಕತಾರ್- ಬೆಂಗಳೂರು ನಡುವಿನ ವಿಮಾನ ಸೇವೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಿದ್ಧತೆ ನಡೆಸಿದೆ.ವಿಮಾನಯಾನ ಸೇವೆ ವಿಸ್ತರಣೆಯು ಮಾರ್ಚ್‌ನಿಂದ ಹಂತ ಹಂತವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಕತಾರ್ ಏರ್‌ಲೈನ್ಸ್ ತಿಳಿಸಿದೆ.ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಮತ್ತು ಸಂಸ್ಥೆಗೆ ಹೆಚ್ಚುವರಿ ವಿಮಾನಗಳು ಪೂರೈಕೆಯಾದ ಹಿನ್ನೆಲೆಯಲ್ಲಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.ಬೆಂಗಳೂರು ಮಾರ್ಗದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಿ ಒಂದು ವರ್ಷದ ಆಚರಣೆ ಸಲುವಾಗಿ ಏರ್‌ಬಸ್ ಎ320ಯನ್ನು ಏರ್‌ಬಸ್ ಎ330 ಸಾಮರ್ಥ್ಯದ ವಿಮಾನಕ್ಕೆ ಹೆಚ್ಚಿಸಲಾಗುತ್ತಿದೆ.ವಿಮಾನಯಾನ ಸೌಲಭ್ಯ ವಿಸ್ತರಣೆಯಲ್ಲಿ ವಾರದಲ್ಲಿ ಹೆಚ್ಚುವರಿಯಾಗಿ ಮೂರು ವಿಮಾನಗಳು ಕ್ವಾಲಾಲಂಪುರ ಮಾರ್ಗದಲ್ಲಿ ಸಂಚರಿಸಲಿವೆ.  ಈ ಮಾರ್ಗದಲ್ಲಿ ಪ್ರತಿನಿತ್ಯದ ವಿಮಾನ ಸೇವೆಯನ್ನು ದ್ವಿಗುಣಗೊಳಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry