ಗುರುವಾರ , ಅಕ್ಟೋಬರ್ 17, 2019
21 °C

ಕತೆಗಳು ವಾಸ್ತವಕ್ಕೆ ಹತ್ತಿರವಾಗಿರಲಿ: ನರಗುಂದ

Published:
Updated:

ಬೆಳಗಾವಿ: ನಗರದ ಕನ್ನಡ ಸಾಹಿತ್ಯ ವಿಶ್ವಸ್ತ ಮಂಡಳಿ ಹಾಗೂ ಜೆ.ಎನ್. ಎಂ.ಸಿ ಕನ್ನಡ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ  ಎಸ್.ಎಂ.ಕುಲಕರ್ಣಿ, ಆರ್.ಎಸ್. ಹನಮಣ್ಣವರ ದತ್ತಿ ಕಾರ್ಯಕ್ರಮದಲ್ಲಿ ಕಥೆ ಹೇಳುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಯಾಗಿದ್ದ ಎಂ.ಡಿ. ನರಗುಂದ ಮಾತನಾಡಿ, ಸತ್ಯದಿಂದ ದೂರವಾದ ಕತೆಗಳಿಗಿಂತ ವಾಸ್ತವಕ್ಕೆ ಹತ್ತಿರವಾದ ಕತೆಗಳಿರಬೇಕು. ಅಂತಹ ಕತೆಗಳು ಮನಪರಿವರ್ತನೆಗೆ ಕಾರಣವಾಗುತ್ತದೆ ಎಂದು ಹೇಳಿದರು.

`ಸಾಧನೆ, ತ್ಯಾಗ ಮಾಡಿದವರ ಕತೆಗಳು ನಮ್ಮ ಬದುಕಿಗೆ ಪೂರಕವಾಗುತ್ತವೆ. ಅವುಗಳು ಇತರರಿಗೆ ಪ್ರೇರಣೆಯಾಗುತ್ತವೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಇಂಚಲ ಮಾತನಾಡಿ, ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪಾಲಕರೂ ಇದಕ್ಕೆ ಸೂಕ್ತ ಪ್ರೊತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.ಒಂದರಿಂದ ನಾಲ್ಕನೇ ವರ್ಗ ವಿಭಾಗದಲ್ಲಿ ಲಕ್ಷ್ಮಿ ಬೊಳನ್ನವರ (ಪ್ರಥಮ), ಪ್ರೀತಿ ರೊಡಬಸವಣ್ಣವರ (ದ್ವಿತೀಯ), ಚಂದ್ರಿಕಾ(ತೃತಿಯ) ಬಹುಮಾನ ಗೆದ್ದುಕೊಂಡಿದ್ದಾರೆ. ಐದರಿಂದ ಏಳನೇ ವರ್ಗದ ವಿಭಾಗದಲ್ಲಿ  ಸಿ.ಡಿ.ರಕ್ಷಿತಾ (ಪ್ರಥಮ), ಸೀಮಾ ಕುಂಬಾರ (ದ್ವಿತೀಯ) ಹಾಗೂ ಪ್ರೀತಿ ಜಡಪ್ಪನವರ (ತೃತಿಯ) ಬಹುಮಾನ ಪಡೆದುಕೊಂಡಿದ್ದಾರೆ.ನಿರ್ಣಾಯಕರಾಗಿ ಶಿ.ಗು.ಕುಸುಗಲ್, ಬಿ.ಎಸ್.ಜಗಾಪೂರ, ಎಂ.ಎಸ್.ಹಿರೇಮಠ, ಸುನಂದಾ ಮುಳೆ ಆಗಮಿಸಿದ್ದರು. ಎಸ್.ಸಿ.ಪಾಟೀಲ ಬಹುಮಾನ ವಿತರಿಸಿದರು. ವಿ.ವಿ.ಹಡಗಿನಾಳ ನಿರೂಪಿಸಿದರು.

 

Post Comments (+)