ಸೋಮವಾರ, ಆಗಸ್ಟ್ 26, 2019
28 °C

ಕತ್ತಲಲ್ಲೊಂದು ಹಣತೆ

Published:
Updated:

`ಆ  ಹಾದಿ'ಗೆ ಯಾರೂ ಮನಃಪೂರ್ವಕವಾಗಿ ಬರುವುದಿಲ್ಲ. ಬದುಕಿನ ಕೆಟ್ಟ ಗಳಿಗೆಯಲ್ಲಿ ಒತ್ತಡದಿಂದಲೋ, ಅನಿವಾರ್ಯ ಸ್ಥಿತಿಯಲ್ಲೋ ಬೇಡದ `ಆ ಹಾದಿ' ತುಳಿದುಬಿಟ್ಟಿರುತ್ತಾರೆ. ಅಂದಿನಿಂದ ಸಮಾಜದ ಕೆಟ್ಟ ದೃಷ್ಟಿಗೆ ತುತ್ತಾಗುತ್ತಾ, ಕಾಮುಕರಿಗೆ ಭೋಗದ ವಸ್ತುವಾಗುತ್ತಾ ಬರುವ ಲೈಂಗಿಕ ಕಾರ್ಯಕರ್ತೆಯರ ಬಾಳಿನಲ್ಲಿ ಬೆಳಕಿಗಿಂತ `ಕತ್ತಲೆ'ಯೇ ಹೆಚ್ಚು.ಇಷ್ಟಾದರೂ ಇದೇ ವೃತ್ತಿ ಏಕೆ ಎಂದರೆ, `ದಯಮಾಡಿ ನಮಗೆ ಒಂದು ಕೆಲಸ ಕೊಡಿಸಿ. ನಮಗೆಲ್ಲ ಸಾಕಾಗಿ ಹೋಗಿದೆ' ಎನ್ನುವುದು ಇವರಲ್ಲಿ ಬಹುತೇಕರು ಆಡುವ ಮಾತು. ಕೆಲವರು ವೃತ್ತಿಗೆ ಅಂತ್ಯ ಹಾಡಿ ಜೀವನ ಸಾಗಿಸುತ್ತಿದ್ದರೂ ವ್ಯವಸ್ಥೆ ಇವರನ್ನು ನೋಡುವ ರೀತಿಯೇ ಬೇರೆ. ಒಟ್ಟಿನಲ್ಲಿ ಇವರ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ. ಅದರಲ್ಲೂ ವಯಸ್ಸಿದ್ದಾಗ ಹೇಗೋ ನಡೆಯುತ್ತದೆ. ಆದರೆ ವಯಸ್ಸಾಗಿ ದೇಹ ಸೊಬಗು ಕಳೆದುಕೊಳ್ಳುತ್ತಾ ಬಂದಂತೆ, ಕರಾಳ ಭವಿಷ್ಯ ಧುತ್ತೆಂದು ಅವರ ಎದುರು ಬಂದು ನಿಲ್ಲುತ್ತದೆ.ಇದನ್ನು ನೆನೆದೇ, ತಾವು ಸಂಪಾದಿಸಿದ  ಹಣವನ್ನು ಕೂಡಿಡುವ ಪ್ರಯತ್ನವಾಗಿ ಧಾರವಾಡದ ಲೈಂಗಿಕ ಕಾರ್ಯಕರ್ತೆಯರು ವಿವಿಧೋದ್ದೇಶ ಸಹಕಾರಿ ಸಂಘವೊಂದನ್ನು ಸ್ಥಾಪಿಸಿಕೊಂಡಿದ್ದಾರೆ. ಏಷ್ಯಾದಲ್ಲೇ ಮೊದಲ ಬಾರಿಗೆ ಕೋಲ್ಕತ್ತಾದ ಸೋನಾಗಚ್ಚಿ ಪ್ರದೇಶದಲ್ಲಿ `ದುರ್ಬರ್' ಮಹಿಳಾ ಸಮನ್ವಯ ಸಂಘದ ಸದಸ್ಯರು ಸ್ಥಾಪಿಸಿಕೊಂಡಿರುವ `ಉಷಾ ಸಹಕಾರಿ ಸೊಸೈಟಿ'ಯಿಂದ ಪ್ರೇರಣೆ ಪಡೆದು, ಕಳೆದ ವರ್ಷದ ಜೂನ್‌ನಲ್ಲಿ ಈ ಸಹಕಾರಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಈ ಮಾದರಿಯಲ್ಲಿ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಎರಡನೇ ಸಹಕಾರಿ ಸಂಘ ಇದಾಗಿದೆ. ಲೈಂಗಿಕ ಕಾರ್ಯಕರ್ತೆಯರ ಮೊದಲ ಸಹಕಾರಿ ಸಂಘ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.391 ಸದಸ್ಯರು

ಅದೆಷ್ಟೋ ಮಹಿಳೆಯರಿಗೆ ವಿಳಾಸ ಮತ್ತು ಗುರುತಿನ ಚೀಟಿಯಿಲ್ಲದೆ ಸಹಕಾರಿ ಸಂಘದಲ್ಲಿ ಸದಸ್ಯತ್ವ ಪಡೆಯಲಾಗಿಲ್ಲ. ಇಂದಿಗೂ ಹಲವು ಮಹಿಳೆಯರು ವಾಸಿಸಲು ಸ್ವಂತ ಸೂರಿಲ್ಲದೇ ಬಸ್ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ಜೀವನ ದೂಡುತ್ತಿದ್ದಾರೆ. ಇಂಥ ಕ್ಲಿಷ್ಟ ಸಮಸ್ಯೆಗಳ ನಡುವೆಯೂ ಆರಂಭದಲ್ಲಿ 200 ಮಂದಿಯ ಸದಸ್ಯತ್ವದೊಂದಿಗೆ ಆರಂಭವಾದ ಈ ಸಂಘದಲ್ಲಿ ಸದ್ಯ 391 ಸದಸ್ಯರಿದ್ದಾರೆ. ಒಟ್ಟು ಷೇರುಗಳ ಸಂಖ್ಯೆ 1240 ಇದ್ದು, 2.48 ಲಕ್ಷ ಷೇರು ಹಣ ಸಂಗ್ರಹವಾಗಿದೆ. ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ   (ಕೆ.ಎಚ್.ಪಿ.ಟಿ.) ಒಂದು ಲಕ್ಷ ರೂಪಾಯಿ ನೆರವು ನೀಡಿದೆ.95 ಉಳಿತಾಯ ಖಾತೆಗಳಲ್ಲಿ 37 ಸಾವಿರ ರೂಪಾಯಿ ಇದ್ದು, 29 ಪಿಗ್ಮಿ ಖಾತೆಗಳಿಂದ 59 ಸಾವಿರ ರೂಪಾಯಿ ಸಂಗ್ರಹವಾಗಿದೆ. ಈ ಹಣಕ್ಕೆ ವಾರ್ಷಿಕವಾಗಿ ಶೇ 3ರಷ್ಟು ಬಡ್ಡಿ ನೀಡಲಾಗುತ್ತದೆ.

159 ಮಂದಿಗೆ ಸಾಲ

ತರಕಾರಿ, ಸೀರೆ ವ್ಯಾಪಾರ, ಮದುವೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ತಪಾಸಣೆ, ಮನೆಯ ಖರ್ಚು, ಮಕ್ಕಳ ಬಾಣಂತನ ಮತ್ತಿತರ ವೆಚ್ಚಗಳನ್ನು ಸರಿದೂಗಿಸಲು ಸದಸ್ಯೆಯರಿಗೆ ಸಾಲ ನೀಡಲಾಗುತ್ತಿದೆ. ಸಂಘದ ವತಿಯಿಂದ ಮೊದಲ ಬಾರಿಗೆ 2 ಸಾವಿರ ರೂಪಾಯಿಯಂತೆ ಎಂಟು ಮಂದಿಗೆ ಸಾಲ ನೀಡಲಾಗಿತ್ತು. ಹೀಗೆ ಸಾಲ ಪಡೆದ ಕೆಲವರು ಸಣ್ಣಪುಟ್ಟ ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಲೈಂಗಿಕ ಚಟುವಟಿಕೆಯಿಂದ ಹೊರಬಂದು, ಹೊಸ ಬದುಕಿಗೆ ನಾಂದಿ ಹಾಡುತ್ತಿದ್ದಾರೆ.ಇದುವರೆಗೆ ಸಂಘದ 159 ಸದಸ್ಯರಿಗೆ 6.12 ಲಕ್ಷ ರೂಪಾಯಿ ಸಾಲ ದೊರೆತಿದೆ. ಸುಮಾರು ಎರಡೂವರೆ ಲಕ್ಷದಷ್ಟು ಸಾಲ ಮರು ಪಾವತಿಯಾಗಿದ್ದು, ವಾರ್ಷಿಕ ಶೇ 18ರಂತೆ ಒಟ್ಟು 24,657 ರೂಪಾಯಿ ಬಡ್ಡಿ ಸಂಗ್ರಹವಾಗಿದೆ.ಇಷ್ಟು ಮಾತ್ರವಲ್ಲದೆ ಗುಂಪು ಸಾಲವನ್ನೂ ನೀಡಲಾಗುತ್ತಿದೆ. ಇದರಡಿ 9 ಸಂಘಗಳಿದ್ದು, ಒಟ್ಟು 47 ಸದಸ್ಯರಿದ್ದಾರೆ. ಸಂಘದಲ್ಲಿ ಸಾಲ ಪಡೆಯಬೇಕಾದರೆ ಅಲ್ಲಿ ಸದಸ್ಯರಾಗಿರುವವರು ಇಬ್ಬರಿಗೆ ಭದ್ರತೆ ನೀಡಬಹುದು. ಅಲ್ಲದೆ ಸಾಲ ಪಡೆದ ಈ ಇಬ್ಬರೂ ಮರುಪಾವತಿ ಮಾಡುವವರೆಗೆ ಭದ್ರತೆ ನೀಡಿದ ಮಹಿಳೆಗೆ ಸಾಲ ದೊರೆಯುವುದಿಲ್ಲ. ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡ 13 ಸದಸ್ಯರ ಆಡಳಿತ ಮಂಡಳಿ ಇದ್ದು, ಎಲ್ಲ ಪ್ರಮುಖ ನಿರ್ಧಾರಗಳನ್ನೂ ಅದೇ ತೆಗೆದುಕೊಳ್ಳುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾಷಿಣಿ (ಹೆಸರು ಬದಲಿಸಲಾಗಿದೆ) ಲೆಕ್ಕದ ಉಸ್ತುವಾರಿ ಹೊತ್ತಿದ್ದಾರೆ. ಪಿಯುಸಿ ನಂತರ 6 ತಿಂಗಳ ಡಿಪ್ಲೊಮಾ ಇನ್ ಕೊ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿರುವ ಅವರಿಗೆ ಮಾಸಿಕ ಸಂಬಳ ನೀಡಲಾಗುತ್ತಿದೆ.

ಇಣುಕಿದ ಭ್ರಷ್ಟರು

ಲೈಂಗಿಕ ಕಾರ್ಯಕರ್ತೆಯರು ಹೀಗೊಂದು ಸಹಕಾರಿ ಸಂಘ ಸ್ಥಾಪಿಸಿಕೊಳ್ಳಲು ಹೊರಟ ಸಂಗತಿ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದ ಕೆಲವು ಸರ್ಕಾರಿ ಅಧಿಕಾರಿಗಳು, ನಿಯಮಗಳ ಪ್ರಕಾರ ಲೈಂಗಿಕ ವೃತ್ತಿನಿರತರ ಹೆಸರಿನಲ್ಲಿ ಸಹಕಾರಿ ಸಂಘ ಸ್ಥಾಪಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು. ನಂತರ ಅಂತಹ ಸಂಘ ಸ್ಥಾಪನೆಗೆ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಎಂಟು ಸಾವಿರ ರೂಪಾಯಿ ನೀಡಿದರೆ ಮಾತ್ರ ಸಂಘ ಸ್ಥಾಪನೆಗೆ ಅನುಮತಿ ನೀಡುವುದಾಗಿ ತಾಕೀತು ಮಾಡಿದ್ದರು. ಆದರೆ ಇದ್ಯಾವುದಕ್ಕೂ ತಲೆಬಾಗದ ಈ ದಿಟ್ಟ ಮಹಿಳೆಯರು, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ (ಕೆ.ಎಚ್.ಪಿ.ಟಿ.) ಅಧಿಕಾರಿಗಳ ಸಹಾಯ ಪಡೆದು, ನಯಾ ಪೈಸೆ ಲಂಚವನ್ನೂ ನೀಡದೆ ಸಂಘ ಸ್ಥಾಪಿಸಿಕೊಂಡಿದ್ದಾರೆ.

ಸಾಲಗಾರರ ಒಡಲಾಳ

ಸಂಘದಿಂದ ಸಾಲ ಪಡೆದು ಸೀರೆ ಮತ್ತು ರವಿಕೆ ಪೀಸ್‌ಗಳನ್ನು ಮಾರಾಟ ಮಾಡುತ್ತಿರುವ ಅನಸೂಯಾ, ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. `ಮೊದಲು ತಿಂಗಳಿಗೆ ಶೇ 10ರಷ್ಟು ಬಡ್ಡಿ ಕಟ್ಟುತ್ತಿದ್ದೆ. ಈಗ ನಮ್ಮ ಸಂಘದಲ್ಲೇ ಸಾಲ ದೊರೆಯುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಎರಡು ಬಾರಿ ಐದು ಸಾವಿರ ರೂಪಾಯಿ ಸಾಲ ಪಡೆದಿದ್ದೇನೆ. ಸೀರೆ ವ್ಯಾಪಾರವೂ ಚೆನ್ನಾಗಿದೆ. ಅಕ್ಕಪಕ್ಕದ ಮನೆಯವರು, ಓಣಿಯ ಜನರೇ ನನ್ನ ಗಿರಾಕಿಗಳು. ಹಬ್ಬದ ಸಂದರ್ಭದಲ್ಲಿ ಹೆಚ್ಚು ಸೀರೆ ಮಾರಾಟವಾಗುತ್ತದೆ. ಕೆಲವೊಮ್ಮೆ ಹಿನ್ನಡೆಯೂ ಆಗಿದೆ. ಎಲ್ಲವೂ ಬದುಕಿನ ಭಾಗವಲ್ಲವೇ? ವ್ಯಾಪಾರ ವಿಸ್ತರಿಸುವ ಉದ್ದೇಶದಿಂದ ಈ ಬಾರಿ 15 ಸಾವಿರ ರೂಪಾಯಿ ಸಾಲ ಕೇಳಿದ್ದೇನೆ' ಎನ್ನುತ್ತಾರೆ.ಇದೇ ರೀತಿ 3 ಸಾವಿರ ರೂಪಾಯಿ ಸಾಲ ಪಡೆದಿರುವ ಶೈಲಾ, ರೊಟ್ಟಿ ವ್ಯಾಪಾರ ಮಾಡುತ್ತಿದ್ದಾರೆ. `ದಿನಕ್ಕೆ 100 ರೊಟ್ಟಿಗಳನ್ನು ಮಾರುತ್ತೇನೆ. ಇದರಿಂದ ನೂರು ರೂಪಾಯಿ ಲಾಭವಾಗುತ್ತದೆ. ಮೊದಲು ಸಾಲ ಪಡೆಯಲು ಚಿನ್ನಾಭರಣಗಳನ್ನು ಒತ್ತೆ ಇಡುತ್ತಿದ್ದೆ. ಈಗ ಅದರ ಅಗತ್ಯವೇ ಇಲ್ಲ' ಎನ್ನುತ್ತಾರೆ ಅವರು. ಇಷ್ಟು ಮಾತ್ರವಲ್ಲದೆ ಶೈಲಾ ಕಳೆದ 10 ವರ್ಷಗಳಿಂದ, ಲೈಂಗಿಕ ವೃತ್ತಿಯಲ್ಲಿ ತೊಡಗಿರುವವರಿಗೆ ತಾಯಿಯಾಗಿ, ಸಹೋದರಿಯಾಗಿ ಅವರ ಆರೋಗ್ಯದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಕೆ.ಎಚ್.ಪಿ.ಟಿ. ಗೌರವಧನ ನೀಡುತ್ತಿದೆ. ಮೈಸೂರು ಯುವ ದಸರಾ ಸಮಿತಿ 2010ರಲ್ಲಿ ಈ ಸೇವೆ ಪರಿಗಣಿಸಿ ಅವರನ್ನು ಗೌರವಿಸಿದೆ.ಕೆ.ಎಚ್.ಪಿ.ಟಿ.ಯೊಂದಿಗೆ ಕೆಲಸ ಮಾಡುತ್ತಿರುವ ಲಕ್ಷ್ಮಿ, ಸಂಘದಿಂದ ಐದು ಸಾವಿರ ರೂಪಾಯಿ ಸಾಲ ಪಡೆದು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಸಂಘದಿಂದ ಬಹಳಷ್ಟು ಒಳ್ಳೆಯದಾಗಿದೆ ಎನ್ನುವ ಅವರು, ವ್ಯಾಪಾರವನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಆಸೆ ಇಟ್ಟುಕೊಂಡಿದ್ದಾರೆ.95 ಉಳಿತಾಯ ಖಾತೆಗಳಲ್ಲಿ 37 ಸಾವಿರ ರೂಪಾಯಿ ಇದ್ದು, 29 ಪಿಗ್ಮಿ ಖಾತೆಗಳಿಂದ 59 ಸಾವಿರ ರೂಪಾಯಿ ಸಂಗ್ರಹವಾಗಿದೆ. ಈ ಹಣಕ್ಕೆ ವಾರ್ಷಿಕವಾಗಿ ಶೇ 3ರಷ್ಟು ಬಡ್ಡಿ ನೀಡಲಾಗುತ್ತದೆ.ಸಾಲದ ಆಸರೆ

ತರಕಾರಿ, ಸೀರೆ ವ್ಯಾಪಾರ, ಮದುವೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ತಪಾಸಣೆ, ಮನೆಯ ಖರ್ಚು, ಮಕ್ಕಳ ಬಾಣಂತನ ಮತ್ತಿತರ ವೆಚ್ಚ ಸರಿದೂಗಿಸಲು ಸದಸ್ಯೆಯರಿಗೆ ಸಾಲ ನೀಡಲಾಗುತ್ತಿದೆ. ಸಂಘದಿಂದ  ಮೊದಲ ಬಾರಿಗೆ 2 ಸಾವಿರ ರೂಪಾಯಿಯಂತೆ ಎಂಟು ಮಂದಿಗೆ ಸಾಲ ನೀಡಲಾಗಿತ್ತು. ಹೀಗೆ ಸಾಲ ಪಡೆದ ಕೆಲವರು ಸಣ್ಣಪುಟ್ಟ ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಲೈಂಗಿಕ ಚಟುವಟಿಕೆಯಿಂದ ಹೊರಬಂದು, ಹೊಸ ಬದುಕಿಗೆ ನಾಂದಿ ಹಾಡುತ್ತಿದ್ದಾರೆ.ಇದುವರೆಗೆ ಸಂಘದ 159 ಸದಸ್ಯರಿಗೆ 6.12 ಲಕ್ಷ ರೂಪಾಯಿ ಸಾಲ ದೊರೆತಿದೆ. ಸುಮಾರು ಎರಡೂವರೆ ಲಕ್ಷದಷ್ಟು ಸಾಲ ಮರು ಪಾವತಿಯಾಗಿದ್ದು, ವಾರ್ಷಿಕ ಶೇ 18ರಂತೆ ಒಟ್ಟು ರೂ 24,657 ಬಡ್ಡಿ ಸಂಗ್ರಹವಾಗಿದೆ.ಇಷ್ಟು ಮಾತ್ರವಲ್ಲದೆ ಗುಂಪು ಸಾಲವನ್ನೂ ನೀಡಲಾಗುತ್ತಿದೆ. ಇದರಡಿ 9 ಸಂಘಗಳಿದ್ದು, ಒಟ್ಟು 47 ಸದಸ್ಯರಿದ್ದಾರೆ. ಸಂಘದಲ್ಲಿ ಸಾಲ ಪಡೆಯಬೇಕಾದರೆ ಅಲ್ಲಿ ಸದಸ್ಯರಾಗಿರುವವರು ಇಬ್ಬರಿಗೆ ಭದ್ರತೆ ನೀಡಬಹುದು. ಅಲ್ಲದೆ ಸಾಲ ಪಡೆದ ಈ ಇಬ್ಬರೂ ಮರುಪಾವತಿ ಮಾಡುವವರೆಗೆ ಭದ್ರತೆ ನೀಡಿದ ಮಹಿಳೆಗೆ ಸಾಲ ದೊರೆಯುವುದಿಲ್ಲ. ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡ 13 ಸದಸ್ಯರ ಆಡಳಿತ ಮಂಡಳಿ ಇದ್ದು, ಎಲ್ಲ ಪ್ರಮುಖ ನಿರ್ಧಾರಗಳನ್ನೂ ಅದೇ ತೆಗೆದುಕೊಳ್ಳುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾಷಿಣಿ (ಹೆಸರು ಬದಲಿಸಲಾಗಿದೆ) ಲೆಕ್ಕದ ಉಸ್ತುವಾರಿ ಹೊತ್ತಿದ್ದಾರೆ. ಪಿಯುಸಿ ನಂತರ 6 ತಿಂಗಳ ಡಿಪ್ಲೊಮಾ ಇನ್ ಕೊ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿರುವ ಅವರಿಗೆ ಮಾಸಿಕ ಸಂಬಳ ನೀಡಲಾಗುತ್ತಿದೆ.ಇಣುಕಿದ ಭ್ರಷ್ಟರು

ಲೈಂಗಿಕ ಕಾರ್ಯಕರ್ತೆಯರು ಹೀಗೊಂದು ಸಹಕಾರಿ ಸಂಘ ಸ್ಥಾಪಿಸಿಕೊಳ್ಳಲು ಹೊರಟ ಸಂಗತಿ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದ ಕೆಲವು ಸರ್ಕಾರಿ ಅಧಿಕಾರಿಗಳು, ನಿಯಮಗಳ ಪ್ರಕಾರ ಲೈಂಗಿಕ ವೃತ್ತಿನಿರತರ ಹೆಸರಿನಲ್ಲಿ ಸಹಕಾರಿ ಸಂಘ ಸ್ಥಾಪಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು. ನಂತರ ಅಂತಹ ಸಂಘ ಸ್ಥಾಪನೆಗೆ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಎಂಟು ಸಾವಿರ ರೂಪಾಯಿ ನೀಡಿದರೆ ಮಾತ್ರ ಸಂಘ ಸ್ಥಾಪನೆಗೆ ಅನುಮತಿ ನೀಡುವುದಾಗಿ ತಾಕೀತು ಮಾಡಿದ್ದರು. ಆದರೆ ಇದ್ಯಾವುದಕ್ಕೂ ತಲೆಬಾಗದ ಈ ದಿಟ್ಟ ಮಹಿಳೆಯರು, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ (ಕೆ.ಎಚ್. ಪಿ.ಟಿ.) ಅಧಿಕಾರಿಗಳ ಸಹಾಯ ಪಡೆದು, ನಯಾ ಪೈಸೆ ಲಂಚವನ್ನೂ ನೀಡದೆ ಸಂಘ ಸ್ಥಾಪಿಸಿಕೊಂಡಿದ್ದಾರೆ.ಸಾಲಗಾರರ ಒಡಲಾಳ

ಸಂಘದಿಂದ ಸಾಲ ಪಡೆದು ಸೀರೆ ಮತ್ತು ರವಿಕೆ ಪೀಸ್‌ಗಳನ್ನು ಮಾರಾಟ ಮಾಡುತ್ತಿರುವ ಅನಸೂಯಾ, ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. `ಮೊದಲು ತಿಂಗಳಿಗೆ ಶೇ 10ರಷ್ಟು ಬಡ್ಡಿ ಕಟ್ಟುತ್ತಿದ್ದೆ. ಈಗ ನಮ್ಮ ಸಂಘದಲ್ಲೇ ಸಾಲ ದೊರೆಯುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಎರಡು ಬಾರಿ ಐದು ಸಾವಿರ ರೂಪಾಯಿ ಸಾಲ ಪಡೆದಿದ್ದೇನೆ. ಸೀರೆ ವ್ಯಾಪಾರವೂ ಚೆನ್ನಾಗಿದೆ. ಅಕ್ಕಪಕ್ಕದ ಮನೆಯವರು, ಓಣಿಯ ಜನರೇ ನನ್ನ ಗ್ರಾಹಕರು. ಹಬ್ಬದ ಸಂದರ್ಭದಲ್ಲಿ ಹೆಚ್ಚು ಸೀರೆ ಮಾರಾಟವಾಗುತ್ತದೆ. ಕೆಲವೊಮ್ಮೆ ಹಿನ್ನಡೆಯೂ ಆಗಿದೆ. ಎಲ್ಲವೂ ಬದುಕಿನ ಭಾಗವಲ್ಲವೇ? ವ್ಯಾಪಾರ ವಿಸ್ತರಣೆಗಾಗಿ ಈ ಬಾರಿ 15 ಸಾವಿರ ರೂಪಾಯಿ ಸಾಲ ಕೇಳಿದ್ದೇನೆ' ಎನ್ನುತ್ತಾರೆ.ಇದೇ ರೀತಿ 3 ಸಾವಿರ ರೂಪಾಯಿ ಸಾಲ ಪಡೆದಿರುವ ಶೈಲಾ, ರೊಟ್ಟಿ ವ್ಯಾಪಾರ ಮಾಡುತ್ತಿದ್ದಾರೆ. `ದಿನಕ್ಕೆ 100 ರೊಟ್ಟಿಗಳನ್ನು ಮಾರುತ್ತೇನೆ. ಇದರಿಂದ ನೂರು ರೂಪಾಯಿ ಲಾಭವಾಗುತ್ತದೆ. ಮೊದಲು ಸಾಲ ಪಡೆಯಲು ಚಿನ್ನಾಭರಣಗಳನ್ನು ಒತ್ತೆ ಇಡುತ್ತಿದ್ದೆ. ಈಗ ಅದರ ಅಗತ್ಯವೇ ಇಲ್ಲ' ಎನ್ನುತ್ತಾರೆ ಅವರು. ಇಷ್ಟು ಮಾತ್ರವಲ್ಲದೆ ಶೈಲಾ ಕಳೆದ 10 ವರ್ಷಗಳಿಂದ, ಲೈಂಗಿಕ ವೃತ್ತಿಯಲ್ಲಿ ತೊಡಗಿರುವವರಿಗೆ ತಾಯಿಯಾಗಿ, ಸಹೋದರಿಯಾಗಿ ಅವರ ಆರೋಗ್ಯದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಕೆ.ಎಚ್.ಪಿ.ಟಿ. ಗೌರವಧನ ನೀಡುತ್ತಿದೆ. ಮೈಸೂರು ಯುವ ದಸರಾ ಸಮಿತಿ 2010ರಲ್ಲಿ ಈ ಸೇವೆ ಪರಿಗಣಿಸಿ ಅವರನ್ನು ಗೌರವಿಸಿದೆ.ಕೆ.ಎಚ್.ಪಿ.ಟಿ.ಯೊಂದಿಗೆ ಕೆಲಸ ಮಾಡುತ್ತಿರುವ ಲಕ್ಷ್ಮಿ, ಸಂಘದಿಂದ ಸಾಲ ಪಡೆದು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಸಂಘದಿಂದ ಸಾಕಷ್ಟು ಒಳ್ಳೆಯದಾಗಿದೆ ಎನ್ನುವ ಅವರು, ವ್ಯಾಪಾರವನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಆಸೆ ಇಟ್ಟುಕೊಂಡಿದ್ದಾರೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ 70ರಷ್ಟು ಲೈಂಗಿಕ ಕಾರ್ಯಕರ್ತೆಯರು ಥಳಿತಕ್ಕೆ ಒಳಗಾಗುತ್ತಿದ್ದಾರೆ.  ಶೇ 80ರಷ್ಟು ಮಂದಿಯನ್ನು ಯಾವುದೇ ಆಧಾರವಿಲ್ಲದೇ ಬಂಧಿಸಲಾಗುತ್ತಿದೆ.`ಮುಕ್ತ'ರಾಗದವರು

ಧಾರವಾಡದಲ್ಲಿ ಲೈಂಗಿಕ ಕಾರ್ಯಕರ್ತೆಯರು ಸಹಕಾರಿ ಸಂಘ ಸ್ಥಾಪಿಸಿಕೊಳ್ಳುವ ಮುನ್ನವೇ, ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂತಹದ್ದೊಂದು ಸಂಘ ಅಸ್ತಿತ್ವಕ್ಕೆ ಬಂದಿದೆ. ನಾನಾ ಕಾರಣಕ್ಕೆ ಪರ ಊರುಗಳಿಂದ ಬಂದು ರಾಜಧಾನಿಯ ಕತ್ತಲ ಕೂಪವನ್ನು ಸೇರಿ ಹೋಗಿದ್ದ ಸಾವಿರಾರು ನೊಂದ ಮಹಿಳೆಯರಿಗೆ ಈ ಸಂಘ ದಾರಿದೀಪವಾಗಿದೆ.ಆದರೂ, ಸಂಘದ ಬಹುತೇಕ ಸದಸ್ಯರಲ್ಲಿ ಸಮಾಜವನ್ನು ನೇರವಾಗಿ ಎದುರಿಸುವ ಮನೋಬಲ ಇನ್ನೂ ಗಟ್ಟಿಗೊಂಡಿಲ್ಲ. ಹೀಗಾಗಿ ಪ್ರಚಾರದಿಂದ ದೂರವೇ ಉಳಿಯಬಯಸುವ ಹಲವು ಸದಸ್ಯರು, ಸಂಘದ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ.26 ಸಾವಿರದಷ್ಟು ಬೃಹತ್ ಸಂಖ್ಯೆಯ ಸದಸ್ಯರನ್ನು ಒಳಗೊಂಡಿರುವ ಈ ಸಹಕಾರಿ ಸಂಘದ ವಾರ್ಷಿಕ ವಹಿವಾಟು ಸುಮಾರು 5 ಕೋಟಿ ರೂಪಾಯಿ! ಮಹಿಳಾ ಸಂಘಟನೆಯೊಂದರ ನೇತೃತ್ವದಡಿ ಶಿವಾಜಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘಕ್ಕೆ, ಉತ್ತಮ ನಿರ್ವಹಣೆಗಾಗಿ `ರಾಷ್ಟ್ರೀಯ ಪ್ರಶಸ್ತಿ'ಯೂ ಲಭ್ಯವಾಗಿದೆ.ಹುಂಡಿಗಾಗಿ ಹಣ

ಕೋಟಿ ಕೋಟಿ ಹಣ ಇಟ್ಟುಕೊಂಡಿದ್ದರೂ ಒಂದು ಬಿಡಿಗಾಸನ್ನೂ ಸಮಾಜ ಸೇವೆಗೆ ಇಡುವ ಚಿಂತನೆಯನ್ನೇ ಮಾಡದ ಅದೆಷ್ಟೋ ಹೃದಯ   ಹೀನರ ನಡುವೆ, ಧಾರವಾಡದ ಲೈಂಗಿಕ  ಕಾರ್ಯಕರ್ತೆಯರು ವಿಭಿನ್ನವಾಗಿ ಕಾಣಿಸುತ್ತಾರೆ. ಇದಕ್ಕೆ ಸಾಕ್ಷಿ ಅವರು ಹುಂಡಿ ಮೂಲಕ ಸಂಗ್ರಹಿಸಿರುವ ಹಣ.ಹೌದು, ಕಳೆದ ಒಂದು ವರ್ಷದಲ್ಲಿ 8,800 ರೂಪಾಯಿ ಸಂಗ್ರಹಿಸಿರುವ ಈ ಮಹಿಳೆಯರು, ಅದನ್ನು 15 ಅತ್ಯಂತ ಬಡ ಲೈಂಗಿಕ ವೃತ್ತಿಪರರ  ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಅರ್ಜಿಯನ್ನೂ ಆಹ್ವಾನಿಸಿದ್ದು ಈಗಾಗಲೇ 40 ಅರ್ಜಿಗಳು ಬಂದಿವೆ.`ಲೈಂಗಿಕ ವೃತ್ತಿನಿರತರಲ್ಲಿ ಅಂತರ್ಗತವಾಗಿರುವ ಕೀಳರಿಮೆಯನ್ನು ತೊಡೆದು ಹಾಕುವುದು, ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶ ನಮ್ಮದು' ಎನ್ನುತ್ತಾರೆ ಕೆ.ಎಚ್.ಪಿ.ಟಿ.ಯ ಪ್ರಾದೇಶಿಕ ವ್ಯವಸ್ಥಾಪಕಿ ದೀಪಾ ರೋಸ್.ಈ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿರುವ ದೀಪಾ ಅವರಿಗೆ, ಸಂಸ್ಥೆಯ ಸಮುದಾಯ ಸಂಘಟನೆ ವಿಭಾಗದ ಮೇಲ್ವಿಚಾರಕ ಶಿವಾನಂದ ಪಾಟೀಲ್, ಎಚ್.ಐ.ವಿ. ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ `ಸ್ಪ್ಯಾಡ್' ಸಂಸ್ಥೆಯ ಅಧಿಕಾರಿ ರಾಜೇಶ್ ಡಿಸೋಜಾ ಸೇರಿದಂತೆ ಹಲವು ಮಂದಿ ಸಹಕಾರ ನೀಡುತ್ತಿದ್ದಾರೆ.`ಬೆಳಕು' ತಂದ ಸಂಘ

ಲೈಂಗಿಕ ವೃತ್ತಿನಿರತರು ಬಹುತೇಕ ಸಂದರ್ಭಗಳಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಲೈಂಗಿಕ ತೃಪ್ತಿ ಪಡೆದ ನಂತರ ಹಣ ನೀಡದಿರುವುದು. ಕೆಲವು ವಿಚಿತ್ರ ಕಾಮುಕರು ಈ ಮಹಿಳೆಯರಿಗೆ ಸಿಗರೇಟಿನಿಂದ ಸುಡುತ್ತಾರೆ, ಅವರ ಹಣ, ಚಿನ್ನಾಭರಣ ದೋಚು ತ್ತಾರೆ. ಇಂಥ ಪೈಶಾಚಿಕ ಕೃತ್ಯಗಳ ಜೊತೆಗೆ, ಯೋನಿಯೊಳಕ್ಕೆ ಕೈ ಹಾಕುವವರು, ಪತ್ನಿಯೊಂದಿಗೆ ಎಷ್ಟು ಕೆಳ ಮಟ್ಟದಲ್ಲಿ ವರ್ತಿಸಲು ಸಾಧ್ಯವಿಲ್ಲವೋ ಅಷ್ಟು ಹೀನ ಮಟ್ಟಕ್ಕೆ ಇಳಿಯುವವರೂ ಇದ್ದಾರೆ ಎಂಬುದು ಕಾರ್ಯಕರ್ತೆಯರ ನೋವಿನ ನುಡಿ.ಇಂತಹ ದೌರ್ಜನ್ಯ ತಡೆಯಲು ಇವರೆಲ್ಲ ಧಾರವಾಡದಲ್ಲಿ `ಬೆಳಕು ಸ್ವಸಹಾಯ ಸಂಘ' ಕಟ್ಟಿಕೊಂಡಿದ್ದಾರೆ. 2008ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಂಘ, ಲೈಂಗಿಕ ವೃತ್ತಿಪರರ ಮೇಲೆ ಕುಟುಂಬ, ಪತಿ, ಆಪ್ತ ಸಂಗಾತಿ, ತಲೆಹಿಡುಕರು (ಪಿಂಪ್), ಗೂಂಡಾಗಳು, ಗಿರಾಕಿಗಳು, ಪೊಲೀಸರ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿದೆ. ಕಾರ್ಯಕರ್ತೆಯರ ಯಾತನೆಯನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಈ ಸ್ವಸಹಾಯ ಸಂಘವೇ ಮುಂದೆ, ಆರ್ಥಿಕ ಸಬಲತೆ ಸಾಧಿಸುವ ಸಹಕಾರಿ ಸಂಘ ಸ್ಥಾಪನೆಗೆ ನಾಂದಿ ಹಾಡಿದ್ದು.

Post Comments (+)