ಕತ್ತಲೆಯಲ್ಲಿ ಮುಳುಗಿದ ಬಡಾವಣೆ

7
ಮುರಿದು ಬಿದ್ದ ವಿದ್ಯುತ್ ಕಂಬಗಳು

ಕತ್ತಲೆಯಲ್ಲಿ ಮುಳುಗಿದ ಬಡಾವಣೆ

Published:
Updated:

ದೇವನಹಳ್ಳಿ: ಪಟ್ಟಣದ ಮರಳು ಬಾಗಿಲು ಬಡಾವಣೆಯಲ್ಲಿ ಸೋಮವಾರ ರಾತ್ರಿ 11 ಗಂಟೆ ವೇಳೆಯಲ್ಲಿ ನೀಲಗಿರಿ ಮರದ ರಂಬೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ 2 ವಿದ್ಯುತ್ ಕಂಬಗಳು ಮನೆಯ ಮೇಲೆ ಉರುಳಿ ಬಿದ್ದು ಇಡೀ ರಾತ್ರಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ಮರಳುಬಾಗಿಲು ಬಡಾವಣೆಯ ಮುಖ್ಯರಸ್ತೆಯಲ್ಲೇ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ರಂಬೆ ಬಿದ್ದ ರಭಸಕ್ಕೆ ಅನತಿ ದೂರದಲ್ಲಿದ್ದ ವಿದ್ಯುತ್ ಪರಿವರ್ತಕವು ಭಾರಿ ಶಬ್ದ ಉಂಟು ಮಾಡಿತು. ಇದರಿಂದ ಸಮೀಪದ ನಿವಾಸಿಗಳು ಭಯಭೀತರಾದರು ಎಂದು ಸ್ಥಳೀಯ ಲಕ್ಷ್ಮಿನಾರಾಯಣ್ ತಿಳಿಸಿದರು.ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಬೆಳಿಗ್ಗೆಯಿಂದಲೇ ಜನ ಜಂಗುಳಿ ಇತ್ತು.  ಹಳೆ ಬಸ್ ನಿಲ್ದಾಣಕ್ಕೆ ಬಡಾವಣೆ ಸಮೀಪದಲ್ಲೇ ಇರುವುದರಿಂದ ಕಡಲೇಕಾಯಿ ಪರಿಷೆಗೆ ಈ ರಸ್ತೆಯ ಮೂಲಕವೂ ಭಕ್ತರು ಹೋಗು ಬರುತ್ತಿದ್ದರು. ಆದರೆ ಯಾರೂ ಇಲ್ಲದಾಗ ಈ ಅವಘಢ ಸಂಭವಿಸಿದೆ. ಯಾವುದೇ ತೊಂದರೆ ಎದುರಾಗಿಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎ.ರವೀಂದ್ರ ಹೇಳಿದರು.ಬೆಸ್ಕಾಂ ನಿರ್ಲಕ್ಷ್ಯ ಆರೋಪ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಲ್ಪಿಸಿರುವ ವಿದ್ಯುತ್ ಮಾರ್ಗದಲ್ಲಿ ಅನೇಕ ಮರಗಳಿವೆ. ಅವುಗಳ ರೆಂಬೆಗಳು ವಿದ್ಯುತ್ ತಂತಿಗಳ ಮೇಲೆ ಹರಡಿಕೊಂಡಿವೆ. ಇವುಗಳಿಂದ ಅಪಾಯದ ಅರಿವಿದ್ದರೂ ಬೆಸ್ಕಾಂ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ ಎಂದು ಬಡಾವಣೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry