ಬುಧವಾರ, ಏಪ್ರಿಲ್ 21, 2021
30 °C

ಕತ್ತಿಕಲ್ಲಾಂಬದೇವಿ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿ ಕಬ್ಬಳದಲ್ಲಿ ಗುರುವಾರ ಗ್ರಾಮದೇವತೆ ಕತ್ತಿಕಲ್ಲಾಂಬದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಡಿ ಉತ್ಸವ ನಡೆಯಿತು.ಗ್ರಾಮದ ಹೆಬ್ಬಾಗಿಲಿನಲ್ಲಿ ಸಂಜೆ ಗ್ರಾಮದೇವತೆ ಕತ್ತಿಕಲ್ಲಾಂಬದೇವಿ, ಮತ್ತೂರು ತಿರುಮಲೇಶ್ವರ, ಹೊಸಹಟ್ಟಿ ಆಂಜನೇಯಸ್ವಾಮಿ ಹಾಗೂ ಬೊಮಮೇನಹಳ್ಳಿ  ಕರಿಯಮ್ಮ ದೇವರುಗಳ ಸಮಕ್ಷಮದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಸಿಡಿ ಬಂಡಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ಹೊರವಲಯದಲ್ಲಿರುವ ಜಾಲಿಯಮ್ಮ ದೇವಾಯಲದ ಬಯಲಿನಲ್ಲಿರುವ ಕಟ್ಟೆಬಳಿಗೆ ಎಳೆದು ತರಲಾಯಿತು.ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದನಂತರ ನಂತರ ಸಿಡಿ ಕಂಬಕ್ಕೆ ದೇವಿಯಿಂದ ನಿಯೋಜಿತನಾದ ವ್ಯಕ್ತಿಯನ್ನು ಸಿಡಿಮರಕ್ಕೆ ಕಟ್ಟಲಾಯಿತು. ಅಲ್ಲಿಂದ ಮತ್ತೆ ಸಿಡಿ ಬಂಡಿಯನ್ನು ಜಾಲಿಯಮ್ಮ ದೇವಿ ದೇವಾಲಯದ ಮುಂಭಾಗಕ್ಕೆ ಎಳೆತಂದು ಸಿಡಿ ಮರವನ್ನು ಸುತ್ತಿಸಿ ಮತ್ತೆ ಗ್ರಾಮ ವಾಪಸು ತರಲಾಯಿತು.

 

ಸಿಡಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರು ಸಿಡಿ ಮರಕ್ಕೆ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ಕೆಲವು ಭಕ್ತರು ಎತ್ತಿನ ಬಂಡಿಯಲ್ಲಿ ಪಾನಕ ತಂದು ಭಕ್ತರಿಗೆ ವಿತರಿಸಿದರು.ಬೆಳಿಗಿನ ಜಾವ ದೇವಿ ನಡೆದ ಕತ್ತಿಕಲ್ಲಾಂಬ ದೇವಿ ರಥೋತ್ಸವದಲ್ಲಿಯೂ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.