..ಕಥೆ ಡಬ್ಬಿಂಗ್ ಮುಕ್ತಾಯ

7

..ಕಥೆ ಡಬ್ಬಿಂಗ್ ಮುಕ್ತಾಯ

Published:
Updated:

`..ಕಥೆ~ ಡಬ್ಬಿಂಗ್ ಮುಕ್ತಾಯ

ಕೆ.ಆರ್.ಜಗದೀಶ್ ಕಥೆ, ಚಿತ್ರಕಥೆ, ನಿರ್ಮಾಣದ ಜೊತೆಗೆ ನಿರ್ದೇಶನದ ಹೊಣೆ ಹೊತ್ತಿರುವ ಚಿತ್ರ `ಸ್ಟೋರಿ- ಕಥೆ~. ರೇಣು ಸ್ಟುಡಿಯೋವಿನಲ್ಲಿ ಚಿತ್ರ ಡಬ್ಬಿಂಗ್ ಕಾರ್ಯ ಪೂರೈಸಿದೆ. ಚಿತ್ರದ ಛಾಯಾಗ್ರಹಣ ಸತೀಶ್ ಕುಮಾರ್, ಸಂಕಲನ ಹರೀಶ್ ಕೊಡ್ಪಾಡಿ, ಸಂಗೀತ ವಾಸು ದೀಕ್ಷಿತ್,  ಕಲೆ ಬಾಬುಖಾನ್, ನೃತ್ಯ ಹರಿಕೃಷ್ಣ ಅವರದ್ದು. ತಾರಾಗಣದಲ್ಲಿ ತಿಲಕ್ ಶೇಖರ್, ಪ್ರತಾಪ್ ನಾರಾಯಣ್, ನೇಹಾ ಪಾಟೀಲ್, ಪಾರ್ವತಿ ನಾಯರ್ ಮುಂತಾದವರಿದ್ದಾರೆ. 

ನಾದದ ಅಲೆಯಲ್ಲಿ `ಜನ್ಮ~

ಆನೇಕಲ್ ಬಾಲರಾಜ್ ನಿರ್ಮಾಣದ ಚಕ್ರವರ್ತಿ ನಿರ್ದೇಶನದ ಜನ್ಮ ಚಿತ್ರಕ್ಕೆ ಆಕಾಶ್ ಆಡಿಯೋ ಸ್ಟುಡಿಯೊದಲ್ಲಿ ಹಿನ್ನೆಲೆ ಸಂಗೀತ ಪೂರ್ಣಗೊಂಡಿತು.  ಛಾಯಾಗ್ರಹಣ ಜಗದೀಶ್ ವಾಲಿ, ಸಂಗೀತ ಅನೂಪ್ ಸೀಳಿನ್, ಸಂಕಲನ  ಕೆ.ಗಿರೀಶ್‌ಕುಮಾರ್, ಸಾಹಸ ಕೌರವ ವೆಂಕಟೇಶ್, ನೃತ್ಯ ಸದಾ ರಾಘವ ಅವರದು. ತಾರಾಗಣದಲ್ಲಿ ಸಂತೋಷ್, ಮೀನಾಕ್ಷಿ, ಸಿತಾರಾ, ಪೊನ್ನಾಬಲಂ, ತಲೈವಾಸಲ್ ವಿಜಯ್, ಅನುರಾಧ, ಬುಲೆಟ್ ಪ್ರಕಾಶ್ ಮುಂತಾದವರು ಅಭಿನಯಿಸಿದ್ದಾರೆ.

`ಇಷ್ಟಾರ್ಥ~ ಜೂಟಾಟ

ಬೆಂಗಳೂರಿನ ಗಣೇಶ ಮಂದಿರದ ಬಳಿ ಪ್ರೇಮಿಗಳನ್ನು ರೌಡಿಗಳು ಅಟ್ಟಿಸಿಕೊಂಡು ಬರುತ್ತಿದ್ದರು. ಇವರು ಇಷ್ಟೆಲ್ಲಾ ಮಾಡಿದ್ದು `ಇಷ್ಟಾರ್ಥ~ಕ್ಕಾಗಿ. ಮಲ್ಲಮ್ಮ ವಿ ಸುಬ್ರಮಣ್ಯ ನಿರ್ಮಿಸುತ್ತಿರುವ ಚಿತ್ರ `ಇಷ್ಟಾರ್ಥ~. ಪ್ರಾಣ್ ಚಿತ್ರದ ನಿರ್ದೇಶಕರು. ಸೆಲ್ವಂ ಛಾಯಾಗ್ರಹಣ , ಮಧುರ ಅವರ ಸಂಗೀತ , ಅಲ್ಟಿಮೆಟ್ ಶಿವು ಸಾಹಸ, ರಾಜೇಶ್ ಬ್ರಹ್ಮಾವರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ತಾರಾಗಣದಲ್ಲಿ ವಿಜಯ ಸುಬ್ರಮಣ್ಯ, ಶ್ರೀಪ್ರಿಯ ಬೋಪಯ್ಯ, ಸುಜಿತ್, ಕಿಲ್ಲರ್ ವೆಂಕಟೇಶ್, ರಮೇಶ್ ಪಂಡಿತ್, ಬ್ಯಾಂಕ್ ಜನಾರ್ದನ್, ಶಂಕರ್ ಅಶ್ವತ್, ಅಪೂರ್ವ, ಕೃಷ್ಣಾ, ಆದಿತ್ಯ, ಮೈಕೆಲ್ ಮಧು, ವಿಶ್ವನಾಥ್ ಮುಂತಾದವರಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry