ಗುರುವಾರ , ಜನವರಿ 30, 2020
20 °C

ಕದಂ ಚಾಂಪಿಯನ್, ನೀಲಮ್ಮ ಹ್ಯಾಟ್ರಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವೇಗದ ಓಟಗಾರ್ತಿ ನೀಲಮ್ಮ ಹೇರೂರ್ `ಹ್ಯಾಟ್ರಿಕ್~ ಮತ್ತು ಸುರೇಶ್ ಕದಂ ಎರಡನೇ ಬಾರಿ ವೈಯಕ್ತಿಕ ಚಾಂಪಿಯನ್, ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್)ಪಡೆಗೆ ಸಮಗ್ರ, ಗುರಿ `ಪ್ರವೀಣ~ ಎಸ್ಪಿ, ರಿವಾಲ್ವರ್ `ಭೂಷಣ~ ಎಎಸ್ಪಿ, ಶಟಲ್‌ನಲ್ಲಿ ಚಂದ್ರಶೇಖರ, ಹಗ್ಗ ಜಗ್ಗಿದ ಗ್ರಾಮೀಣ ವಿಭಾಗ...ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ ಎರಡು ದಿನಗಳ `ಗುಲ್ಬರ್ಗ ಜಿಲ್ಲಾ ಪೊಲೀಸ್ ವಾರ್ಷಿಕ  ಕ್ರೀಡಾಕೂಟ-2011~ರ  ಮುಖ್ಯಾಂಶಗಳು.`ಬಿ~ ವಿಭಾಗದ ರೋಜಾ ಪೊಲೀಸ್ ಠಾಣೆಯ ನೀಲಮ್ಮ ಹೇರೂರ್ 100 ಮೀ., 200 ಮೀ., 400 ಮೀ., ದೂರಜಿಗಿತ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು. ಸತತ ಹ್ಯಾಟ್ರಿಕ್ (2009, 2010 ಹಾಗೂ 2011) ಸಾಧನೆ ಮಾಡಿದರು. ಇದೇ ಠಾಣೆಯ ಸುರೇಶ್ ಕದಂ 100 ಮೀ., 200 ಮೀ., 400 ಮೀ., ದೂರಜಿಗಿತ, 4*400 ರಿಲೇಯಲ್ಲಿ ಪ್ರಥಮ ಪಡೆಯುವ ಮೂಲಕ ಸತತ ಎರಡನೇ ಬಾರಿ (2010,2011)ವೈಯಕ್ತಿಕ ಚಾಂಪಿಯನ್ ಪಟ್ಟ ಮುಡಿಗೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸುವ ಮೂಲಕ  ಸಮಗ್ರ ಪ್ರಶಸ್ತಿಯನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿತು. ಶೂಟಿಂಗ್(ಎಸ್ಪಿ ವಿಭಾಗ)ನಲ್ಲಿ ಎಸ್ಪಿ ಪ್ರವೀಣ್ ಮಧುಕರ್ ಪವಾರ್ ಪ್ರಥಮ ಹಾಗೂ ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ದ್ವಿತೀಯ ಸ್ಥಾನ ಪಡೆದರು. ಕಳೆದ ಬಾರಿ ಎಸ್ಪಿ ಬಿ.ಎ.ಪದ್ಮನಯನ ಪ್ರಥಮ ಸ್ಥಾನ ಪಡೆದಿದ್ದರು.ಸಮಾರಂಭ: ಬಳಿಕ ನಡೆದ ಸಮಾರಂಭದಲ್ಲಿ ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ವಜೀರ್ ಅಹ್ಮದ್ ಅತಿಥಿಯಾಗಿ ಪಾಲ್ಗೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್ ಸ್ವಾಗತಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾಶೀನಾಥ ತಳಕೇರಿ ವಂದಿಸಿದರು. ಡಿವೈಎಸ್ಪಿ ಎ.ಡಿ.ಬಸವಣ್ಣವರ್, ತಿಮ್ಮಪ್ಪ, ಪ್ರವೀಣ್ ನಜ್ಜೂರ, ಭೂಷಣ ಬೊಸರೆ ಇದ್ದರು. ಬ್ಯಾಂಡ್ ನಿನಾದ, ಆಕರ್ಷಕ ಪಥಸಂಚಲನ, ಸಿಡಿಮದ್ದು ಪ್ರದರ್ಶನ, ಸಂಗೀತ, ಅಧಿಕಾರಿಗಳ ಕರಾಡತನ ಹಾಗೂ ಕ್ರೀಡಾಪಟುಗಳ ಉದ್ಘೋಷಗಳ ನಡುವೆ ಚಾಂಪಿಯನ್ ತಂಡ, ಸ್ಪರ್ಧಿಗಳು ಸಂಭ್ರಮಿಸಿದರು. ದಯಾನಂದ್ ಉದ್ಘೋಷಕರಾಗಿ ನಿರ್ವಹಿಸಿದರು.ಉಳಿದಂತೆ ವಿವರಗಳು ಇಂತಿವೆ: (ಸ್ಪರ್ಧೆ-ಪ್ರಥಮ, ದ್ವಿತೀಯ)

ಪುರುಷರ ವಿಭಾಗ: 100ಮೀ.- ಸುರೇಶ್ ಕದಂ, ಅರುಣ್ ಕುಮಾರ್, 200ಮೀ.- ಸುರೇಶ್ ಕದಂ, ರಾಜೇಂದ್ರ ಕುಮಾರ್, 400ಮೀ.-ಸುರೇಶ್ ಕದಂ, ಅರುಣ್ ಕುಮಾರ್, ಎತ್ತರ ಜಿಗಿತ-ಸುನೀಲ್ ಬಿ.ಆರ್., ಮಲ್ಲಿಕಾರ್ಜುನ ಎಚ್., ದೂರಜಿಗಿತ-ಸುರೇಶ್ ಕದಂ, ಸುನೀಲ್, ಡಿಸ್ಕಸ್ ಎಸೆತ-ಲಕ್ಷ್ಮಣ, ಸಿದ್ದು, ಡಿಸ್ಕಸ್ ಎಸೆತ (ಸಿಪಿಐ/ಪಿಐ)-ಇ.ಎಸ್.ವೀರಭದ್ರಪ್ಪ, ರಾಜಣ್ಣ ಡಿ.ಜಿ., ಗುಂಡೆಸೆತ-ಅಂಬರೀಶ್, ಲಕ್ಷ್ಮಣ, ಗುಂಡೆಸೆತ (ಪಿಎಸ್‌ಐ)-ವಿನಾಯಕ, ಮಂಜುನಾಥ ಎಸ್.ಕೆ., ಗುಂಡೆಸೆತ (ಸಿಪಿಐ/ಪಿಐ) ಕೆ.ಬಸವರಾಜ್, ರಾಜಣ್ಣ,  ಶಟಲ್ ಸಿಂಗಲ್ಸ್-ಬಿ.ಪಿ.ಚಂದ್ರಶೇಖರ್, ವಿನಾಯಕ, ಡಬಲ್ಸ್-ತಿಮ್ಮಪ್ಪ ಎಚ್ ಮತ್ತು ಬಿ.ಪಿ.ಚಂದ್ರಶೇಖರ್, ಪಿಎಸ್‌ಐ ಸೇಡಂ ಮತ್ತು ಪಿಎಸ್‌ಐ ಅಫಜಲಪುರ, ಶೂಟಿಂಗ್ (ಡಿಎಸ್ಪಿ) ಭೂಷಣ ಜಿ.ಬೊರಸೆ, ಪವನ್ ನಜ್ಜೂರ್, ಶೂಟಿಂಗ್(ಸಿಪಿಐ/ಪಿಐ)-ಡಿ.ಜಿ.ರಾಜಣ್ಣ, ಟಿ.ಎಚ್.ಕರಿಕಾಲ್, ಶೂಟಿಂಗ್ (ಪಿಎಸ್‌ಐ)-ವಿನಾಯಕ, ಕೇದಾರನಾಥ, ರೈಫಲ್ ಗುರಿ (ಡಿಎಸ್ಪಿ)-ಭೂಷಣ ಜಿ. ಬೊರಸೆ, ಎಚ್.ತಿಮ್ಮಪ್ಪ, ರೈಫಲ್ ಶೂಟಿಂಗ್ (ಸಿಪಿಐ/ಪಿಐ)-ಜೆ.ಎಚ್.ಇನಾಂದಾರ್, ಡಿ.ಜಿ.ರಾಜಣ್ಣ, ರೈಫಲ್ ಶೂಟಿಂಗ್ (ಪಿಎಸ್‌ಐ)-ನವೀನ್ ಜಳ್ಕಿ, ವಿನಯಕುಮಾರ್, ರೈಫಲ್‌ಶೂಟಿಂಗ್ (ಪೊಲೀಸ್ ಸಿಬ್ಬಂದಿ)-ಮಹಾದೇವ, ಮನೋಹರ, ಹ್ಯಾಮರ್ ಎಸೆತ- ಅಮ್ರಾಯ ಡಿ., ಲಕ್ಷ್ಮಣ,  4*400 ಮೀ. ರಿಲೇ-ಬಿ.ವಿಭಾಗ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, 4*100 ಮೀ. ರಿಲೇ-ಜಿಲ್ಲಾ ಸಶಸ್ತ್ರ ಮೀಸಲು ವಿಭಾಗ, ಬಿ. ವಿಭಾಗ, ವಾಲಿಬಾಲ್-ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಚಿಂಚೋಳಿ ವಿಭಾಗ, ಕಬಡ್ಡಿ-ಬಿ ವಿಭಾಗ, ಆಳಂದ ವಿಭಾಗ, ಹಗ್ಗ ಜಗ್ಗಾಟ-ಗ್ರಾಮೀಣವಿಭಾಗ, ಚಿಂಚೋಳಿ ವಿಭಾಗ

ಕಚೇರಿ ಸಿಬ್ಬಂದಿಗಾಗಿ ನಡೆದ ಸ್ಪರ್ಧೆಗಳು: 100 ಮೀ.(45ವರ್ಷದ ಕೆಳಗೆ)-ರಮೇಶ್ ಎನ್.ಕೆ., ಬಸವರಾಜ್ ರತ್ಕಲ್, 100ಮೀ. (45ರ ಮೇಲ್ಪಟ್ಟು)-ದತ್ತಾತ್ರಯ, ಸತ್ಯಕುಮಾರ್ ಬಂಡಕ್, ಗುಂಡೆಸೆತ (45ವರ್ಷದ ಕೆಳಗೆ )-ಬಸವರಾಜ ರತ್ಕಲ್, ವಿಜಯಕುಮಾರ್, ಗುಂಡೆಸೆತ (45ರ ಮೇಲೆ)-ಚಂದ್ರಶೇಖರ, ದತ್ತಾತ್ರಯ

ಮಹಿಳಾ ವಿಭಾಗ: 100 ಮೀ.-ನೀಲಮ್ಮ, ರೇಣುಕಾ, 200 ಮೀ.- ನೀಲಮ್ಮ, ಗುಬ್ಬಚ್ಚಿ, 400 ಮೀ.-ನೀಲಮ್ಮ, ಗುಬ್ಬಚ್ಚಿ, ಎತ್ತರಜಿಗಿತ-ನೀಲಮ್ಮ, ಗೌರಮ್ಮ, ದೂರಜಿಗಿತ-ನೀಲಮ್ಮ, ಗುಬ್ಬಚ್ಚಿ, ಡಿಸ್ಕಸ್ ಎಸೆತ-ಗುಬ್ಬಚ್ಚಿ, ಮಂಜುಳಾ, ಗುಂಡೆಸೆತ-ಸುಧಾ, ಗುಬ್ಬಚ್ಚಿ, ರೈಫಲ್ ಶೂಟಿಂಗ್-ಪ್ರಿಯಾಂಕ, ಶಾರದಾ, ಹ್ಯಾಮರ್ ಎಸೆತ-ಸುಧಾ, ಗುಬ್ಬಚ್ಚಿ,

ಕಚೇರಿ ಮಹಿಳಾ ಸಿಬ್ಬಂದಿಗಾಗಿ: 50 ಮೀ.ಓಟ-ರೇಣುಕಾ, ಸಂತೋಷಿ, ಗುಂಡೆಸೆತ-ಅನ್ನಪೂರ್ಣ, ರೇಣುಕಾ

ಪ್ರತಿಕ್ರಿಯಿಸಿ (+)