ಕದ್ದರೆಂದು

7

ಕದ್ದರೆಂದು

Published:
Updated:
ಕದ್ದರೆಂದು

ಅವರು ನಮ್ಮ ಪಾಲಿನ

ರೊಟ್ಟಿ ಕದ್ದರೆಂದು

ನಾವು ದೂರುವುದು ಬೇಡ.

ಅವರ ಹೊಟ್ಟೆ ತಣ್ಣಗಿರಲಿ-

ನಮ್ಮ ಹೊಟ್ಟೆಗಳಿಗೆ ತಣ್ಣೀರು

ಸಮಾಧಾನ ಹೇಳಬಲ್ಲುದು

ಅವರು ನಮ್ಮ ರಾತ್ರಿಯ

ನಿದ್ದೆ ಕದ್ದರೆಂದು

ನಾವು ಹಲುಬುವುದು ಬೇಡ.

ಅವರು ನ್ದ್ದಿದೆಯಿಂದ

ಎಚ್ಚರಾಗದಿರಲಿ-

ಈ ನಿದ್ರಾಹೀನ ರಾತ್ರಿಗಳಲ್ಲಿ

ನಕ್ಷತ್ರಗಳು ನಮ್ಮ ಜೊತೆಗಿರುತ್ತವೆ.

ಅವರು ನಮ್ಮ ತುಟಿಯ

ಮೇಲಿನ ನಗೆಯ ಕದ್ದರೆಂದು

ನಾವು ದುಃಖಿಸುವುದು ಬೇಡ.

ಅವರು ಸದಾ ಮಂದಸ್ಮಿತರಾಗಿರಲಿ

ನಾವು ಇಡೀ ಜಗತ್ತಿನ ಕಣ್ಣೀರಿಗೆ

ಬೊಗಸೆಯಾಗೋಣ.

ಅವರು ನಮ್ಮ ರೊಟ್ಟಿ, ನಿದ್ರೆ

ಮತ್ತು ನಗೆಯನ್ನು ಕದ್ದದ್ದಕ್ಕೆ

ಒಂದು ಸಲ ನಾವು ಆ ಮೇಲಿನವನ

ಅದಾಲತ್ತಿನಲ್ಲಿ ನ್ಯಾಯ ಕೇಳೋಣ.

ಆದರೆ, ಸದ್ಯದ ಸ್ಥಿತಿ ಹೇಗಿದೆ

ನೋಡು,

ಅವರು ಕದಿಯ ಬೇಕೆಂದರೂ

ನಮ್ಮ ಬಳಿ ಏನೂ ಉಳಿದಿಲ್ಲ!

ಅವರು ನಮ್ಮಷ್ಟೇ ನಿರುಪಾಯರಾದ

ಬಗ್ಗೆ ನನಗೆ ಖೇದವಿದೆ(ವಿಭಾ (1977-2004) ರ ಕವನ ಸಂಕಲನ

`ಜೀವ ಮಿಡಿತದ ಸದ್ದು~ವಿನಿಂದ ಆರಿಸಿಕೊಂಡಿರುವ ಕವಿತೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry