ಕನಕಗಿರಿ: ಪೋಲಿಸ್ ಠಾಣೆ ಕಟ್ಟಡ ಉದ್ಘಾಟನೆ

7

ಕನಕಗಿರಿ: ಪೋಲಿಸ್ ಠಾಣೆ ಕಟ್ಟಡ ಉದ್ಘಾಟನೆ

Published:
Updated:
ಕನಕಗಿರಿ: ಪೋಲಿಸ್ ಠಾಣೆ ಕಟ್ಟಡ ಉದ್ಘಾಟನೆ

ಕನಕಗಿರಿ: ಇಲ್ಲಿನ ವಾಲ್ಮೀಕಿ ವೃತ್ತದ ಪರಿಸರದಲ್ಲಿ ನಿರ್ಮಿಸಿರುವ ನೂತನ ಪೋಲಿಸ್ ಠಾಣೆಯ ನೂತನ ಕಟ್ಟಡವನ್ನು ಶಾಸಕ ಶಿವರಾಜ ತಂಗಡಗಿ ಈಚೆಗೆ ಉದ್ಘಾಟಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಡಿವೈಎಸ್‌ಪಿ ಬಿ. ಬಸವರಾಜ, ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ, ಮಾಜಿ ಸದಸ್ಯ ಹನುಮೇಶ ನಾಯಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ, ಸದಸ್ಯರಾದ ಹೊನ್ನೂರುಸಾಬ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ಆಂಜನೇಯ, ಗ್ರಾಮೀಣ ವೃತ್ತ ನಿರೀಕ್ಷಕ ರುದ್ರೇಶ ಉಜ್ಜನ್‌ಕೊಪ್ಪ, ಪಿಎಸ್‌ಐ ಎಚ್. ಬಿ. ನರಸಿಂಗಪ್ಪ ಹಾಜರಿದ್ದರು. 

ಕಟ್ಟಡ ನಿರ್ಮಾಣವಾಗಿ ವರ್ಷಗಳೆ ಉರುಳಿದ್ದರೂ ಉದ್ಘಾಟನೆ ಮಾತ್ರ ನೆನಗುದಿಗೆ ಬಿದ್ದಿತು. `ಪೊಲೀಸ್ ಠಾಣೆ'ಯ ಉದ್ಘಾಟನೆಯ ವಿಳಂಬ ಕುರಿತು ಈಚೆಗೆ `ಪ್ರಜಾವಾಣಿ'ಯಲ್ಲಿ ವರದಿ ಪ್ರಕಟಿಸಿ ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry