ಸೋಮವಾರ, ಜೂನ್ 21, 2021
29 °C

ಕನಕಗಿರಿ: ಬಿಸಿಲಲ್ಲಿ ಬಸವಳಿದ ಕಾಮಟರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಮಾ. 23ರಂದು ಇತಿಹಾಸ ಪ್ರಸಿದ್ಧ ಕನಕಾಚಲಪತಿ ಮಹಾ ರಥೋ­ತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ನಿಮಿತ್ತ ಪ್ರತಿನಿತ್ಯದ ಕಾರ್ಯಕ್ರಮ ಆರಂಭ­ಗೊಂಡಿದ್ದು, ಪುಷ್ಪ ಮಂಟ­ಪ­ರೋಹಣ ಹೊತ್ತುಕೊಂಡು ರಾಜಬೀದಿ­ಯಲ್ಲಿ ತೆರಳಲು ಕಾಮಟರು (ತೇರಿನ ಕೆಲಸಗಾರರು) ಹಿಂದೇಟು ಹಾಕಿದ ಘಟನೆ ಭಾನುವಾರ ಇಲ್ಲಿ ನಡೆಯಿತು. ಉಚ್ಛಾಯ, ರಥೋತ್ಸವದಲ್ಲಿ ಚಪ್ಪ­ಲಿ­ಗಳನ್ನು ಧರಿಸುವುದಿಲ್ಲ. ಬರಿಗಾಲಿನಲ್ಲಿ ಭಾಗವಹಿಸುತ್ತೇವೆ, ಪ್ರತಿ ದಿನ ಮಧ್ಯಾಹ್ನ ಉಚ್ಛಾಯಗಳನ್ನು ಹೊತ್ತುಕೊಂಡು ಎರಡು ಕಿ.ಮೀ.  ಉದ್ದ ಬರಿಗಾಲಿ­ನಲ್ಲಿಯೇ  ನಡೆದುಕೊಂಡು  ಹೋಗ­ಬೇಕು. ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ತಿಳಿಸಿದಂತೆ ಉಚ್ಛಾಯ ತೆರಳು ರಾಜಬೀದಿಯಲ್ಲಿ ಟ್ಯಾಂಕರ್ ಮೂಲಕ ನೀರು ಹರಿಸಿ ರಸ್ತೆ ತಪ್ಪು ಮಾಡಿಸುವ ಕೆಲಸವಾಗಿಲ್ಲ ಹೀಗಾಗಿ ಉಚ್ಛಾಯವನ್ನು ದೇವಸ್ಥಾನ ಸುತ್ತ ಮಾತ್ರ ಪ್ರದಕ್ಷಿಣೆ ಹಾಕಿ ಕೈ ಬಿಡುತ್ತೇವೆ ಎಂದು ತೇರಿನ ಕೆಲಸಗಾರರು ಪಟ್ಟು ಹಿಡಿದು ಕುಳಿತರು.ಈ ಸಮಯದಲ್ಲಿ ಮಾತನಾಡಿದ ತೇರಿನ ಕೆಲಸಗಾರರಾದ ಶರಣಬಸವ­ರೆಡ್ಡಿ ಹುಲಿಹೈದರ, ಕನಕರೆಡ್ಡಿ ಮಹಲ­ಮನಿ, ಸೋಮಪ್ಪ ಕಮ್ಮಾರ ಅಧಿಕಾರಿ­-ಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ರಾಜ­ಬೀದಿಯಲ್ಲಿ  ಬಿಸಿಲಿನ ಪ್ರಖರತೆ ಲೆಕ್ಕಿಸದೆ ನಡೆದುಕೊಂಡು ಹೋಗಬೇಕಾಗಿದೆ ಎಂದು ದೂರಿದರು.ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ  ಪ್ರತಿ ವರ್ಷ  ಅಧಿಕಾರಿಗಳು, ಜನಪ್ರತಿನಿ­ಧಿ­ಗಳು, ಗಣ್ಯರು ಸೌಲಭ್ಯ ಒದಗಿಸುವ ಕುರಿತು   ಭರವಸೆ ಮಾತ್ರ ನೀಡುತ್ತಾರೆ, ಆಮೇಲೆ ಈ ಕಡೆಗೆ ಮುಖ ಸಹ ತಿರುಗಿಸಿ ನೋಡುವುದಿಲ್ಲ,  ಜಾತ್ರಾ ಮಹೋತ್ಸ­ವದಲ್ಲಿ ಪ್ರಮುಖ ಪಾತ್ರ ವಹಿಸುವ ನಮ್ಮ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಕೆಲಸಗಾರರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ರಾಜಬೀದಿಯಲ್ಲಿರುವ  ಜನರು ಸಹ  ಉಸುಕು, ಕಸಕಡ್ಡಿಗಳನ್ನು ರಸ್ತೆಯಲ್ಲಿಯೆ  ಎಲ್ಲೆಡೆ ಬಿಸಾಕಿದ್ದಾರೆ,  ಹೊಲಸು ತುಳಿದುಕೊಂಡು ಹೆಗಲ ಮೇಲೆ ಭಾರವಾದ ಉಚ್ಛಾಯ ಹೊತ್ತು ದೇವಸ್ಥಾನ ಪ್ರವೇಶಿಸುವಂತ ಸ್ಥಿತಿ ಇಲ್ಲಿದೆ ಎಂದು ಅವರು ದೂರಿದರು.ಮಧ್ಯೆ ಪ್ರವೇಶಿಸಿದ  ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಅರ್ಚಕರು ತೇರಿನ ಕೆಲಸಗಾರರ ಮನವೊಲಿಸಿ ಉಚ್ಛಾಯ ವಿಷಯದಲ್ಲಿ ಸಂಪ್ರದಾಯ ಮುಂದುವರಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ  ಸುಡುವ ಬಿಸಿಲಿನಲ್ಲಿಯೆ ಬವಳಿದ ಕೆಲಸಗಾರರು ಸೋಮವಾರದಿಂದ ನೀರು ಹರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು. ದೇವಸ್ಥಾನ ಸಮಿತಿ ಅಧ್ಯಕ್ಷ ಯಮನೂರಪ್ಪ ಬೇಕರಿ, ಕೀರ್ತಿ ಸೋನಿ, ಅರ್ಚಕರಾದ ಅನಂತಕೃಷ್ಣ, ವಿಜಯಪ್ರಸಾದ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.