ಶುಕ್ರವಾರ, ಜೂನ್ 18, 2021
24 °C

ಕನಕಾಚಲಪತಿಯ ಸಂಭ್ರಮದ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ದಕ್ಷಿಣ ಭಾರತದಲ್ಲಿಯೆ ಅತಿ ಎತ್ತರದ ತೇರು ಎಂಬ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯ ಕನಕಗಿರಿಯ ಐತಿಹಾಸಿಕ ಪ್ರಸಿದ್ಧಿ ಕನಕಾಚಲಪತಿಯ ಮಹಾ ರಥೋತ್ಸವ ಬುಧವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬಡವರ ಮತ್ತು ಎರಡನೇಯ ತಿರುಪತಿ ಎಂದೇ ಕರೆಸಿಕೊಂಡಿರುವ ಇಲ್ಲಿನ ಕನಕಾಚಲಪತಿ ರಥೋತ್ಸವಕ್ಕೆ ರಾಜ್ಯವಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಬೆಳಿಗ್ಗೆ ಲಕ್ಷ್ಮೀ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾವತಿ, ರಥಾಂಗ ಬಲಿ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ರಾಜ್ಯದ ವಿವಿಧ ಕಡೆಯಿಂದ ಬಂದ ಭಕ್ತರು ನೈವೇದ್ಯ ಮಾಡಿ ತಲೆಮಂಡೆ ನೀಡಿ, ದೀಡ ನಮಸ್ಕಾರ ಹಾಕಿ ಸೇವೆ ಸಲ್ಲಿಸಿದರು.ವಿವಿಧ ಸಮಾಜದ ಬಾಂಧವರು, ಸಂಘಟನೆಗಳು ರಥೋತ್ಸವಕ್ಕೆ ಬೃಹತ್ ಪ್ರಮಾಣದ ಹೂವಿನ ಹಾರ, ಬಾಂಡೆ ಸಾಮಾಗ್ರಿಗಳನ್ನು ಸಲ್ಲಿಸಿ ಹರಕೆ ತೀರಿಸಿದರು. ತಳಿರು ತೋರಣ, ಬೃಹತ್ ಗೊಂಬೆ ಮತ್ತು ಬಾರಿ ಗಾತ್ರದ ಹೂವಿನ ಹಾರ, ಧ್ವಜಗಳಿಂದ ರಥವನ್ನು ಶೃಂಗರಿಸಲಾಗಿತ್ತು.ರಾಜಬೀದಿಯಲ್ಲಿ ರಥವನ್ನು ಎಳೆದಾಗ ನೆರೆದ ಅಪಾರ ಭಕ್ತ ಸಮೂಹ ಭಕ್ತಿ-ಬಾವದಿಂದ ಸಂಭ್ರಮಿಸಿತು.

ರಾಜಬೀದಿಯಲ್ಲಿ ನೆರೆದ ಜನತೆ ಬಾಳೆ ಹಣ್ಣು, ಉತ್ತುತಿ, ಟೆಂಗಿನಕಾಯಿ, ಹೂವುಗಳನ್ನು ತೇರಿನೆಡೆ ಎಸೆದು ಭಕ್ತಿ ಸಮರ್ಪಿಸಿದರು.ಭಾಜಾ ಭಜಂತ್ರಿ, ತಾಷಾ ಮೇಳ, ಭಜನೆ, ಇತರೆ ವಾದ್ಯ ಮೇಳಗಳ ನಾದ ರಥೋತ್ಸವಕ್ಕೆ ಕಳೆ ತಂದವು. ಬ್ರಾಹ್ಮಣ ಸಮಾಜದ ವೇದಮಂತ್ರಗಳ ಘೋಷಣೆ, ಭಕ್ತರ ಕೇಕೆ, ಸೀಳೆ ಮುಗಿಲು   ಮುಟ್ಟಿತ್ತು. ಭಕ್ತರು ಕನಕಾಚಪತಿಯನ್ನು ಸ್ಮರಣೆ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.