ಶನಿವಾರ, ಮೇ 8, 2021
26 °C

ಕನಕಾಚಲಪತಿಯ ಹಣ ಎಣಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧಿ ಕನಕಾಚಲಪತಿ ದೇವಸ್ಥಾನದಲ್ಲಿರುವ ಭಕ್ತರ ಕಾಣಿಕೆ ಪೆಟ್ಟಿಗೆಗಳನ್ನು ಗುರುವಾರ ತೆಗೆದು ಹಣ ಎಣಿಕೆ ಮಾಡಲಾಯಿತು.ದೇವಸ್ಥಾನ ಸಮಿತಿ ಕಾರ್ಯದರ್ಶಿಯೂ ಆಗಿರುವ ಗಂಗಾವತಿ ತಹಸೀಲ್ದಾರ ಗಂಗಪ್ಪ ಅವರ ಸಮ್ಮುಖದಲ್ಲಿ ಈ ಕಾರ್ಯ ನಡೆಯಿತು.

ಏಪ್ರಿಲ್ 2ರಂದು ನಡೆದ ಕನಕಾಚಲಪತಿ ಜಾತ್ರಾ ಮಹೋತ್ಸದ ಕಾಣಿಕೆ ಹಣ ಎಣಿಕೆ ಮಾಡಿದ ನಂತರ ಭಕ್ತರು ಎರಡು ತಿಂಗಳಲ್ಲಿ ಒಟ್ಟು ರೂ 3,50,330 ಹಣವನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿ ಭಕ್ತಿ ಸಮರ್ಪಿಸಿದ್ದಾರೆ ಎಂದು ತಹಸೀಲ್ದಾರ ಗಂಗಪ್ಪ ತಿಳಿಸಿದರು.ಉಪ ತಹಸೀಲ್ದಾರ ಶಿವಕುಮಾರ, ದೇವಸ್ಥಾನದ ಆಡಳಿತಾಧಿಕಾರಿ ಎಸ್. ಆರ್. ಕುಲಕರ್ಣಿ, ಶಿರಸ್ತೇದಾರ ಗುರುರಾಜ ಕುಲಕರ್ಣಿ, ಕಂದಾಯ ನಿರೀಕ್ಷಕರಾದ ಮಹೇಶ, ಗುಂಡಪ್ಪ ತೆಗ್ಗಿನಮನಿ, ಬಸವರಾಜ ಅಂಗಡಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರಾದ ದುರ್ಗಾದಾಸ ಯಾದವ, ಯಮನೂರಪ್ಪ ಸೂಡಿ, ಕರಬಸಪ್ಪ ಉಡುಮಕಲ್, ರವಿಶಂಕರ ಪಾಟೀಲ, ಸುಜಾತ ಕಡಿ ಪ್ರಮುಖರಾದ ಕೊಟ್ರೇಶ ಮಡಿವಾಳರ, ಯಂಕೋಬರೆಡ್ಡಿ, ಜಯತೀರ್ಥ ಕಳ್ಳಿ, ನಬೀಸಾಬ ಸೂಳೇಕಲ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.