`ಕನಕ ಆದರ್ಶ ಮೆಲುಕು ಹಾಕಿ'

7

`ಕನಕ ಆದರ್ಶ ಮೆಲುಕು ಹಾಕಿ'

Published:
Updated:

ಮಹದೇವಪುರ: `ಕನಕದಾಸರ ಆದರ್ಶ ಮಾರ್ಗದ ಸೂತ್ರಗಳನ್ನು ಪದೇ ಪದೇ ಮೆಲುಕು ಹಾಕಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ' ಎಂದು ವರ್ತೂರು ವಾರ್ಡ್ ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ಅಭಿಪ್ರಾಯಪಟ್ಟರು.

ಕ್ಷೇತ್ರದ ಗುಂಜೂರು ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 525ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಇತ್ತೀಚಿನ ದಿನಗಳಲ್ಲಿ ಟಿ.ವಿ ಹಾಗೂ ಸಿನಿಮಾಗಳ ಪ್ರಭಾವದಿಂದ ದಾಸರ ಕೀರ್ತನ, ಗಾಯನ ನಮ್ಮಿಂದ ದೂರವಾಗುತ್ತಿವೆ.'

`ಆದರೂ, ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚುತ್ತಿರುವುದು ಶ್ಲಾಘನೀಯ' ಎಂದರು.

ರಾಜ್ಯ ಕುರುಬರ ಸಂಘದ ಖಜಾಂಚಿ ಆರ್.ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry