ಸೋಮವಾರ, ಮಾರ್ಚ್ 8, 2021
22 °C
ಕನಕರ ಕರ್ಮಭೂಮಿ ಕಾಗಿನೆಲೆಯಲ್ಲಿ ಬೆಳಗಿದ ಜ್ಯೋತಿ, ಜಿಲ್ಲೆಯಾದ್ಯಂತ ಸಂಚಾರ

ಕನಕ ಸದ್ಭಾವನಾ ಜ್ಯೋತಿ ರಥ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕ ಸದ್ಭಾವನಾ ಜ್ಯೋತಿ ರಥ ಯಾತ್ರೆ

ಹಾವೇರಿ/ಶಿಗ್ಗಾವಿ/ಬ್ಯಾಡಗಿ: ‘ಭಕ್ತ ಕನಕ ದಾಸರ 528ನೇ ಕನಕ ಜಯಂತ್ಯುತ್ಸವದ ಕನಕ ಸದ್ಭಾವನ ಜ್ಯೋತಿ ರಥ ಯಾತ್ರೆ’ಯು ಸೋಮವಾರ ಕನಕರ ಹುಟ್ಟೂರಾದ ಶಿಗ್ಗಾವಿ ತಾಲ್ಲೂಕಿನ ಬಾಡಾದಲ್ಲಿ ಆರಂಭಗೊಂಡು, ಹಾವೇರಿ ಮೂಲಕ ಹಾದು ಬಂದು, ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯ ಕನಕ ಗುರುಪೀಠದಲ್ಲಿ ಜ್ಯೋತಿ ಬೆಳಗುವ ಮೂಲಕ ಅದ್ದೂರಿಯಾಗಿ ಆರಂಭ ಗೊಂಡಿತು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು, ಭಕ್ತರ ನಡುವೆ ಸಾಗಿತು.ಬಾಡ: ಶಿಗ್ಗಾವಿ ತಾಲ್ಲೂಕಿನ ಕನಕನ ಬಾಡ ಗ್ರಾಮದಲ್ಲಿ ಸೋಮವಾರ ರಥ ಯಾತ್ರೆಗೆ ಚಾಲನೆ ನೀಡಲಾಯಿತು. ಕನಕರ ಮೂಲ ದೇವಸ್ಥಾನದಲ್ಲಿ ಹೂ, ಹಣ್ಣು, ಕಾಯಿಗಳಿಂದ ವಿಶೇಷ ಪೂಜೆ ನಡೆದ ಬಳಿಕ ಕುಂಭಮೇಳ, ಝಾಂಜ ಮೇಳ, ಭಜನೆ, ಡೊಳ್ಳು, ಮೇಳ ಸೇರಿದಂತೆ ವಿವಿಧ ವಾದ್ಯ ವೈಭವದೊಂದಿಗೆ ಆರಂಭವಾಯಿತು.ರಥಯಾತ್ರೆಗೆ ಚಾಲನೆ ನೀಡಿದ ತಿಂಥಣಿ ಸಿದ್ಧರಾಮಾನಂದ ಸ್ವಾಮೀಜಿ ಮಾತನಾಡಿ, ‘ಇಂದಿನ ಕಲುಷಿತ ವಾತಾವರಣದಲ್ಲಿ ಸಹಿಷ್ಣುತೆ, ಶಾಂತಿ, ನೆಮ್ಮದಿ ಮೂಡಿಸುವ ಉದ್ದೇಶದಿಂದ ರಥಯಾತ್ರೆ ನಡೆಯುತ್ತಿದೆ. ಕನಕರ ಆಸೆಯಂತೆ  ಜಾತಿ, ಮತಗಳ ಕಂದಕ ದೂರ ಮಾಡಿ, ಎಲ್ಲ ಮಾನವರು ಒಗ್ಗೂಡಬೇಕಾಗಿದೆ’ ಎಂದರುಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘ಕನಕದಾಸರ ಆದರ್ಶ ತತ್ವಪದಗಳನ್ನು ಪ್ರಚಾರ ಪಡಿಸುವುದೇ ಯಾತ್ರೆಯ ಉದ್ದೇಶ’ ಎಂದರು.ಹಾವೇರಿ: ರಥ ಯಾತ್ರೆ ಗುಡ್ಡದ ಚನ್ನಾಪುರ, ಬಂಕಾಪುರ ಮಾರ್ಗವಾಗಿ ಹಾವೇರಿಗೆ ಬಂತು. ಹಾವೇರಿ ಪ್ರವೇಶಿಸುವ ಜಿ.ಎಚ್‌ ಕಾಲೇಜು ಮುಂಭಾಗದಲ್ಲಿ ಸಕಲ ವೈಭವದಿಂದ ಸ್ವಾಗತಿಸಲಾಯಿತು. ಬಳಿಕ ಕನಕ ಅಭಿಮಾನಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಯಾತ್ರೆಯು ಬಳಿಕ ಚಿಕ್ಕಲಿಂಗದ ಹಳ್ಳಿ ಮಾರ್ಗವಾಗಿ ಕನಕದಾಸರ ಕರ್ಮಭೂಮಿ ಕಾಗಿನೆಲೆಗೆ ತರಳಿತು.ಕಾಗಿನೆಲೆ: ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಸೋಮವಾರ ಸಂಜೆ ಅದ್ದೂರಿ ಸ್ವಾಗತ ನೀಡಲಾಯಿತು. ಸದ್ಭಾವನಾ ರಥ ಯಾತ್ರೆಗೆ ಹಿರೇಲಿಂಗದಹಳ್ಳಿ, ಚಿಕ್ಕಲಿಂಗದಹಳ್ಳಿ, ಕನಕಾಪುರ ಗ್ರಾಮಗಳ ಜನ, ಕನಕ ಗುರು ಪೀಠದ ಅರ್ಚಕ ರೇವಣಸಿದ್ದಪ್ಪ ಮತ್ತತರರು ಅದ್ಧೂರಿ ಸ್ವಾಗತ ನೀಡಿದರು. ಕಾಗಿನೆಲೆಯ ಕನಕ ಮಂಟಪದ ಎದುರಿಗೆ ಸಕಲ ವಾದ್ಯ ವೈಭವಗಳಿಂದ ಸ್ವಾಗತ ಕೋರಲಾಯಿತು. ಜ್ಯೋತಿಯನ್ನು ಬೆಳಗಲಾಯಿತು. ರಥ ಯಾತ್ರೆಯು ಬಳಿಕ ರಾಣೆಬೆನ್ನೂರು ಮೂಲಕ ಹರಿಹರ, ದಾವಣಗೆರೆ, ಹೊನ್ನಾಳಿ, ಶಿವಮೊಗ್ಗ, ಬೀರೂರು, ಕಡೂರ, ಅರಸೀಕೆರೆ, ಹಾಸನ, ಸಕಲೇಶಪುರ, ಮಂಗಳೂರು ಮಾರ್ಗವಾಗಿ ಇದೇ 28 ರಂದು ಕೃಷ್ಣನ ನೆಲೆವೀಡಾದ ಉಡುಪಿಗೆ ತಲುಪಲಿದೆ.ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯ ಘಟಕದ ಸಹ ಕಾರ್ಯದರ್ಶಿ ಜಯರಾಮ, ಭಾಗ್ಯಮ್ಮ, ಶ್ರೀಕಾಂತ, ಭೀರಪ್ಪ ಸಣ್ಣತಮ್ಮಣ್ಣವರ, ಪುರಸಭೆ ಸದಸ್ಯ ಸತೀಶ ಆಲದಕಟ್ಟಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಷಣ್ಮುಖ ಕಾಳಣ್ಣವರ, ಗುರುನಗೌಡ ಪಾಟೀಲ, ಜಗದೀಶ ಸಿದ್ದಣ್ಣವರ, ನಿಂಗಪ್ಪ ಹೋದಾಲಿ, ಮಲ್ಲಪ್ಪ ಕಟಗಿ, ಡಿ.ಎನ್‌.ಕೂಡಲ, ಬಾಡದ, ಬಿ.ಎನ್‌.ಕಟಗಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಚಂದ್ರಶೇಖರ ಮುದುಕಣ್ಣನವರ, ಪ್ರಧಾನ ಕಾರ್ಯದರ್ಶಿ ಮಾಲತೇಶ ಬಣಕಾರ, ಎಂ.ಜಿ. ಶಿವಾನೂಭವಿಮಠ, ನಗರಸಭೆ ಸದಸ್ಯ ಹನುಮಂತಪ್ಪ ಶರಸೂರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌.ಎಫ್.ಎನ್‌ ಗಾಜೀಗೌಡ್ರ ಮತ್ತಿತರರ ಪ್ರಮುಖರು ಇದ್ದರು.* ‘ಕುಲ ಕುಲ ಎಂದು ಹೊಡೆದಾಡ ದಿರಿ...’ ಎಂದು ಕನಕರು ಅಂದು ಸಾರಿದ ಸಂದೇಶವು ಅಸಹಿಷ್ಣುತೆ ಸಂದರ್ಭದಲ್ಲಿ ಪ್ರಸ್ತುತ. ಅವರ ತತ್ವಗಳು ಐಕ್ಯತೆಯ ಮಂತ್ರವಾಗಿದೆ

ಸಿದ್ದರಾಮಾನಂದ ಸ್ವಾಮೀಜಿ

ಕನಕ ಗುರುಪೀಠ, ತಿಂಥಣಿ ಮಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.