ಕನಸಿಗೆ ಬಂದ ಹುಲಿ

7

ಕನಸಿಗೆ ಬಂದ ಹುಲಿ

Published:
Updated:
ಕನಸಿಗೆ ಬಂದ ಹುಲಿ

ಚಂದ ಪದ್ಯ

ಪುಟ್ಟ:  ರಾತ್ರಿ ಒಂದು ಕನಸು ಕಂಡೆ

ಅಮ್ಮ ಕೇಳು, ಹೇಳುವೆ

ಹುಲಿಯ ಕಂಡೆ ಕನಸಿನಲ್ಲಿ

ಕೇಳು ಅಮ್ಮ ಸ್ವಲ್ಪವೇ

ಅಮ್ಮ: ಮೃಗಾಲಯಕ್ಕೆ ಹೋದೆಯೇನೊ

ಕನಸಿನಲ್ಲಿ ಒಬ್ಬನೇ?

ಹೇಗೆ ಇತ್ತು ಕಂಡ ಹುಲಿಯು

ಹೇಳೊ ಪುಟ್ಟ ಬೇಗನೆ

ಪುಟ್ಟ: ದಾರಿಯಲ್ಲಿ ಕಂಡೆ ಅಮ್ಮ

ಪಟ್ಟೆ ಪಟ್ಟೆ ಹುಲಿಯನು!

ನನ್ನ ಎದುರೆ ಬರುತ್ತಿತ್ತು

ನೋಡುತ್ತಿತ್ತು ನನ್ನನ್ನು!

ಅಮ್ಮ: ದಾಟಿ ಮುಂದೆ ಹೋಯಿತೇನು

ನೀನು `ಹಲೋ~ ಅಂದೆಯಾ?

ಹುಲಿಯು ಬಂತು ಎಂದು ಅಲ್ಲೆ

ಮರಕೆ ಹತ್ತಿ ಕುಳಿತೆಯಾ?

ಪುಟ್ಟ: ದೊಡ್ಡ ಹುಲಿ ನನ್ನ ನೋಡಿ

ನಡೆಯಲಿಲ್ಲ, ನಿಂತಿತು!

ಎಲ್ಲ ಹಲ್ಲು ತೋರಿಸುತ್ತ

“ಘ್ರಾ” ಎಂದು ಕೂಗಿತು!

ಅಮ್ಮ: ಮೃಗಾಲಯದಿ ಹುಲಿಯ ನೋಡಿ

ಅದರ ಕನಸೆ ಬಿದ್ದಿದೆ

ನೀನು ಹೆದರಿಕೊಂಡೆ, ಗೊತ್ತು,

ಚಡ್ಡಿ ಒದ್ದೆಯಾಗಿದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry