ಶುಕ್ರವಾರ, ಫೆಬ್ರವರಿ 26, 2021
29 °C

ಕನಸಿನ ಬೆಳೆಯ ತೆಗೆಯುತ್ತೆ

ಕೃಷ್ಣಮೂರ್ತಿ ಬಿಳಿಗೆರೆ Updated:

ಅಕ್ಷರ ಗಾತ್ರ : | |

ಕನಸಿನ ಬೆಳೆಯ ತೆಗೆಯುತ್ತೆ

ಪುಟ್ಟ ಕಾಲು ಏನ್ ಮಾಡುತ್ತೆ

ಭೂಮಿಗೆ ಹೆಜ್ಜೆಯ ಮುತ್ತನು ಕೊಟ್ಟು

ಪ್ರೀತಿಯ ಗುರುತು ಮಾಡುತ್ತೆ

ಪುಟ್ಟ ಕೈ ಏನ್ ಮಾಡುತ್ತೆ

ಕಣ್ಣಿನ ಕಪ್ಪು ಬಣ್ಣ ಬಳಸಿ

ಹಸಿವಿನ ಚಿತ್ರ ಬರೆಯುತ್ತೆ

ಪುಟ್ಟ ಕಣ್ಣು ಏನ್ ಮಾಡುತ್ತೆ

ನಿದ್ದೆ ಮಾಡಿ ಮಾಡಿ ಮಾಡಿ

ಕನಸಿನ ಬೆಳೆಯ ತೆಗೆಯುತ್ತೆ

ಪುಟ್ಟ ತಲೆ ಏನ್ ಮಾಡುತ್ತೆ

ಯೋಚನೆ ಮಾಡಿ ಮಾಡಿ ಮಾಡಿ

ದೇಹವ ಕೆಲಸಕೆ ಹಚ್ಚುತ್ತೆ

ಕೃಷ್ಣಮೂರ್ತಿ ಬಿಳಿಗೆರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.