ಕನಿಮೊಳಿಗೆ ಬಿಡುಗಡೆ ಭಾಗ್ಯ?

7

ಕನಿಮೊಳಿಗೆ ಬಿಡುಗಡೆ ಭಾಗ್ಯ?

Published:
Updated:

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ವಿವಾದದಲ್ಲಿ ಸುಮಾರು 6 ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರಕುವ ನಿರೀಕ್ಷೆ ಇದೆ.ಇದೇ 17ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರ ಮುಂದೆ ಬರಲಿದೆ. ಈ ಸಂದರ್ಭದಲ್ಲಿ ಜಾಮೀನಿಗೆ ವಿರೋಧ ವ್ಯಕ್ತಪಡಿಸದಿರಲು ಸಿಬಿಐ ನಿರ್ಧರಿಸಿದೆ. ಸಿನಿಯುಗ್ ಫಿಲ್ಮ್ಸ್ ಸಂಸ್ಥಾಪಕ ಕರೀಂ ಮೊರಾನಿ ಹಾಗೂ ರಿಲಯನ್ಸ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರ ಪಿಪರಾ ಅವರೂ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಪಡೆಯುವ ನಿರೀಕ್ಷೆ ಇದೆ. ಇದಕ್ಕೂ ಸಿಬಿಐ ತಕರಾರು ಮಾಡುವುದಿಲ್ಲ ಎಂದು ತನಿಖಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry