ಕನಿಮೊಳಿ ಜಾಮೀನು ಅರ್ಜಿ ಸುಪ್ರೀಂನಿಂದ ತಿರಸ್ಕೃತ

ಬುಧವಾರ, ಜೂಲೈ 24, 2019
28 °C

ಕನಿಮೊಳಿ ಜಾಮೀನು ಅರ್ಜಿ ಸುಪ್ರೀಂನಿಂದ ತಿರಸ್ಕೃತ

Published:
Updated:

ನವದೆಹಲಿ (ಐಎಎನ್ಎಸ್): ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರಿ ಕನಿಮೊಳಿ ಹಾಗೂ ಕಲೈಞ್ಙರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾ ಮಾಡಿತು. ಇದರಿಂದಾಗಿ ಕನಿಮೊಳಿ ಅವರಿಗಿದ್ದ ಕೊನೆಯ ಆಶಾದೀಪವು ನಂದಿದಂತಾಯಿತು.

ಜಿ.ಎಸ್. ಸಿಂಘ್ವಿ, ಮತ್ತು ಬಿ.ಎಸ್.ಚೌಹಾಣ್ ಅವರಿದ್ದ ನ್ಯಾಯಪೀಠವು ಜಾಮೀನು ಅರ್ಜಿಯನ್ನು ಸಾರಸಗಟಾಗಿ ತಿರಸ್ಕರಿಸಿತಲ್ಲದೆ ವಿಚಾರಣಾ ನ್ಯಾಯಾಲಯದಲ್ಲಿ 2ಜಿ ಸ್ಪೆಕ್ಟ್ರಂ ಹಗರಣದ ಆರೋಪಪಟ್ಟಿಯನ್ನು ಸಿಬಿಐ ಸಲ್ಲಿಸಿದ ನಂತರ ಜಾಮೀನಿಗಾಗಿ ಅಲ್ಲಿಯೇ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿತು.

ಕನಿಮೊಳಿ ಅವರಿಗೆ ಇದರಿಂದಾಗಿ ತೀವ್ರ ಹಿನ್ನಡೆಯಾಗಿದ್ದು, ವಿಚಾರಣಾ ನ್ಯಾಯಾಲಯವು ಆರೋಪಪಟ್ಟಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವವರೆಗೂ ಸೆರೆಮನೆಯಲ್ಲೇ ಇರಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry