ಶನಿವಾರ, ಆಗಸ್ಟ್ 24, 2019
28 °C

ಕನಿಮೊಳಿ ಪ್ರಮಾಣ

Published:
Updated:

ನವದೆಹಲಿ (ಪಿಟಿಐ): ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಪುತ್ರಿ ಎಂ. ಕನಿಮೊಳಿ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಸಂಸತ್ತಿನ ಮೇಲ್ಮನೆಗೆ ಜೂನ್‌ನಲ್ಲಿ ಕನಿಮೊಳಿ ಪುನರಾಯ್ಕೆ ಆಗಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಕನಿಮೊಳಿಗೆ ಶುಭಾಶಯ ಕೋರಿದರು. ಮಾತೃಭಾಷೆ ತಮಿಳಿನಲ್ಲೇ ಕನಿಮೊಳಿ ಪ್ರಮಾಣ ವಚನ ಸ್ವೀಕರಿಸಿದ್ದು, ವಿಶೇಷವಾಗಿತ್ತು.

Post Comments (+)