ಸೋಮವಾರ, ಮೇ 17, 2021
25 °C

ಕನಿಷ್ಠ ಕೂಲಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಎಲ್ಲ ಅಸಂಘಟಿತ ಕಾರ್ಮಿಕರಿಗೂ ಮಾಸಿಕ ಕನಿಷ್ಠ ರೂ. 10 ಸಾವಿರ ಕೂಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿದ ಧರಣಿ ನಡೆಸಿದರು.

ಸಿಐಟಿಯು ನೇತೃತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. 2009ರಲ್ಲಿ ಬಿಜೆಪಿ ಸರ್ಕಾರವು ಹೋರಾಟಗಾರರ ಮೇಲೆ ಪೊಲೀಸ್ ದಾಳಿ ನಡೆಸಿತು. ನಂತರದ ದಿನಗಳಲ್ಲಿ ಸಿಐಟಿಯು ಮುಖಂಡರ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದ ಸರ್ಕಾರ ಮಾತುಕತೆಗೆ ಆಹ್ವಾನಿಸದೇ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಯಾವುದೇ ಉದ್ಯೋಗ ದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾನ್ಯ ತ್ರಿಪಕ್ಷಿಯ ಪ್ರಾತಿನಿಧ್ಯ ಒಳಗೊಂಡು ರಚನೆ ಮಾಡಿದೆ. ಆದರೂ ವರ್ಷಗಟ್ಟಲೆ ಸಮಿತಿಯ ಸಭೆ ಕರೆಯದೆ ಅನ್ಯಾಯ ಮಾಡಲಾಗಿದೆ. ತೀವ್ರ ಒತ್ತಡಗಳ ನಂತರ ಸಭೆ ಕರೆದಿದ್ದರೂ ಯಾವುದೇ ತೀರ್ಮಾನ ಕೈಗೊಳ್ಳಲು ಮುಂದಾಗಿಲ್ಲ.

 

ಕಾರ್ಮಿಕ ರಿಗೆ ಕಿರುಕುಳ ನೀಡುವ ದಿಶೆಯಲ್ಲಿ ಕಾರ್ಮಿಕ ಸಂಘಗಳ ನೋಂದಣಿಯನ್ನು ಮಾಡಲು ಕಿರುಕುಳ ನೀಡಲಾಗುತ್ತದೆ ಎಂದು ದೂರಿದರು. ರಸ್ತೆ ತಡೆ ನಡೆಸಿ ಧರಣಿ ಕುಳಿತವರನ್ನು ಪೊಲೀಸರು ಬಲ ಪ್ರಯೋಗಿಸಿ ಚೆದುರಿಸಿದರು.ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಇನ್ನಿತರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.