ಕನ್ನಡಕದಲ್ಲಿ ಫ್ಯಾಷನ್

7

ಕನ್ನಡಕದಲ್ಲಿ ಫ್ಯಾಷನ್

Published:
Updated:
ಕನ್ನಡಕದಲ್ಲಿ ಫ್ಯಾಷನ್

ಫಾಸಿಲ್ ಇಂಡಿಯಾ ಈಗ ಕನ್ನಡಕಗಳ ನೂತನ ಶ್ರೇಣಿಯನ್ನು ಕೋರಮಂಗಲದ ಟೈಟಾನ್ ಐಪ್ಲಸ್ ಸ್ಟೋರ್‌ನಲ್ಲಿ ಅನಾವರಣಗೊಳಿಸಿದೆ.

ಸರಳ ಆದರೂ ಫ್ಯಾಶನೇಬಲ್ ವರ್ಣಮಯ ರಿಮ್, ಜಾಮೆಟ್ರಿಕ್ ಶೇಪ್, ಪಾಯಿಂಟ್ ತುದಿಗಳ  ವೈವಿಧ್ಯಮಯ ಕನ್ನಡಕಗಳು ಆಕರ್ಷಕವಾಗಿವೆ.ಗಾಢ ಬಣ್ಣಗಳ ಜತೆಗೆ ಬೋಲ್ಡ್ ವಿನ್ಯಾಸಗಳು, ರೆಕ್ಟಾಂಗಲ್ ಮತ್ತು ರಿಮ್‌ಲೆಸ್ ಶೈಲಿಯ ಸಣ್ಣ ಮತ್ತು ನಿಖರ ಫ್ರೇಮ್‌ಗಳ ಪುರುಷರ ಸಂಗ್ರಹದಲ್ಲಿ ಕಪ್ಪು, ಕಡುಕಂದು, ದಟ್ಟ ಹಸಿರಿನ ವೈವಿಧ್ಯ, ನೀಲಿ ಮತ್ತು ಬಿಳಿ ಕಲರ್ ಪ್ಯಾಲೆಟ್‌ಗಳನ್ನು ಬಳಸಲಾಗಿದೆ.ಮಹಿಳೆಯರ ಸಂಗ್ರಹದಲ್ಲಿ ಮೆಟಲ್ ಮತ್ತು ಪ್ಲಾಸ್ಟಿಕ್ ಫ್ರೇಮ್‌ಗಳಲ್ಲಿ ದಟ್ಟ ವರ್ಣದ ಫಿನಿಶಿಂಗ್ ಇದೆ. ರೆಕ್ಟಾಂಗುಲರ್, ಓವಲ್ ಮತ್ತು ಜಾಮೆಟ್ರಿಕ್ ಆಕಾರಗಳನ್ನು ಹೊಂದಿದೆ.ಹದಿ ವಯಸ್ಕರು ಪ್ರಕಾಶಮಯ ಬಣ್ಣ ಮತ್ತು ಸ್ಟೈಲಿಶ್ ಡಿಸೈನ್, ಹಸಿರು, ನೀಲಿ, ಕಿತ್ತಳೆ, ಬಿಳಿ ಹಾಗೂ ಕೆಂಪು ಬಣ್ಣದ ತೆಳು ರೆಕ್ಟಾಂಗಲ್ ಫ್ರೇಮ್‌ಗಳಲ್ಲಿ ಆಯ್ಕೆ ಮಾಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry