ಕನ್ನಡಕದಲ್ಲೂ ಲಗ್ಷುರಿ

7

ಕನ್ನಡಕದಲ್ಲೂ ಲಗ್ಷುರಿ

Published:
Updated:
ಕನ್ನಡಕದಲ್ಲೂ ಲಗ್ಷುರಿ

ಕನ್ನಡಕ ಮತ್ತು ನೇತ್ರ ಆರೈಕೆ ಉತ್ಪನ್ನಗಳ ರಿಟೇಲ್ ಸರಣಿ ಜಿಕೆಬಿ ಆಪ್ಟಿಕಲ್ಸ್ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಮಳಿಗೆ ಆರಂಭಿಸಿದೆ. ರೂಪದರ್ಶಿ ಕೃಪಾಲಿನಿ ಸಿಂಗ್ ದನ್ನು ಉದ್ಘಾಟಿಸಿದರು. ಮಳಿಗೆಯ ತುಂಬ ಓಡಾಡಿ ವೈವಿಧ್ಯಮ ಕನ್ನಡಕಗಳನ್ನು ಧರಿಸಿ ಸಂತಸಪಟ್ಟರು.5 ದಶಕಗಳ ಇತಿಹಾಸ ಹೊಂದಿರುವ ಜಿಕೆಬಿ ಆಪ್ಟಿಕಲ್ಸ್, 2 ಸಾವಿರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ಸಂಸ್ಥೆಯ ಸ್ವಂತ ಉತ್ಪನ್ನಗಳ ಬ್ರಾಂಡ್‌ಗಳನ್ನು ಸಾದರಪಡಿಸುತ್ತಿದೆ. ಇದಲ್ಲದೆ ಲೆನ್ಸ್‌ಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳ ವಿಸ್ತಾರವಾದ ಸಂಗ್ರಹವನ್ನು ಹೊಂದಿದೆ.ಇನ್ಸೈರಾ, ಲೆಗಸ್ಸಿ, ಮಿಯಾಬಿ, ಹೈಗೇರ್ ಮತ್ತು ಸನ್‌ಡ್ರೈವ್ ಮುಂತಾದ ವಿಶ್ವಮಟ್ಟದ ಫ್ಯಾಷನ್ ಗ್ಲಾಸ್‌ಗಳು, ಡಿಸೈನರ್ ಬ್ರಾಂಡ್‌ಗಳಾದ ರೇಬಾನ್, ಮಾವೂಯ್‌ಜಿಮ್, ಎಸ್‌ಪ್ರಿಟ್, ಪೊಲಿಸ್, ಟಾಮಿ ಹಿಲ್‌ಫಿಗರ್, ಸ್ಟೆಪ್ಪರ್ಸ್‌, ಸೀಕೊ, ರಾಡೆನ್‌ಸ್ಟಾಕ್, ಹ್ಯೂಗೊ ಬಾಸ್, ಪ್ರಾಡಾ, ವರ್ಸೆಸ್, ಜಿಯಾರ್‌ಜಿಯೊ ಆರ್ಮಾನಿ, ಗುಕ್ಕಿ ಇತ್ಯಾದಿಗಳು ಇಲ್ಲಿವೆ.

 ಮಾತ್ರವಲ್ಲದೆ ಅಮೂಲ್ಯ ಹರಳುಗಳಿಂದ ಅಲಂಕೃತವಾದ ಪ್ರೀಮಿಯಮ್ ಬ್ರಾಂಡ್‌ಗಳಾದ (ಬೆಲೆ 15 ಸಾವಿರದಿಂದ 1.86 ಲಕ್ಷ ರೂ) ಬ್ವೆಲ್ಗರಿ, ಕಾರ್ಟಿಯರ್, ಪ್ರಾಡಾ, ಪೋರ್ಚ್ ಡಿಸೈನ್, ಮಾಂಟ್ ಬ್ಲಾಕ್ ಮುಂತಾದವು ವಿಸ್ತ್ರತ ಆಯ್ಕೆಯ ಅವಕಾಶ ನೀಡುತ್ತವೆ.ಇಲ್ಲಿ ಗ್ರಾಹಕರು ಕಣ್ಣಿನ ಆರೈಕೆ ವತ್ತಿಪರರ ಮಾರ್ಗದರ್ಶನದಡಿ ಕನ್ನಡಕ ಆರಿಸಿಕೊಳ್ಳಬಹುದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry