ಕನ್ನಡಕ್ಕೆ ಡಬ್ಬಿಂಗ್ ಬರಲಿ

7

ಕನ್ನಡಕ್ಕೆ ಡಬ್ಬಿಂಗ್ ಬರಲಿ

Published:
Updated:

ಕನ್ನಡಕ್ಕೆ ಡಬ್ಬಿಂಗ್ ಬರುವ ಕುರಿತು ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಸಮಿತಿ ವರದಿ ಸಲ್ಲಿಸಿದ್ದು, ಡಬ್ಬಿಂಗ್‌ ಪರ ಒಲವು ತೋರಿರುವುದು ಸ್ವಾಗತಾರ್ಹ. ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲಾ ಬಗೆಯ ಮನರಂಜನೆ ಸಿಗುವ ದಿನಗಳು ಆದಷ್ಟು ಬೇಗ ಬರುವಂತಾಗಲಿ.ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಕನ್ನಡ ಸಂಸ್ಕೃತಿ ಕೆಡುತ್ತದೆ ಎಂಬ ವಾದ­-ದಲ್ಲಿ ಹುರುಳಿಲ್ಲ.  ಮಚ್ಚು ಲಾಂಗು, ಅರೆನಗ್ನ ದೃಶ್ಯಗಳಿಂದ  ನಮ್ಮ ಸಂಸ್ಕೃತಿ ಕೆಡುವುದಿಲ್ಲವೇ? ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಅವರ ಸಂಸ್ಕೃತಿಯ ಪ್ರಭಾವಕ್ಕೆ ಕನ್ನಡಿಗರು ಒಳಗಾಗುತ್ತಾರೆ ಎಂಬುದು ಕೂಡ ಇನ್ನೊಂದು ಹುರುಳಿಲ್ಲದ ವಾದ.ಹಾಗಿದ್ದರೆ ರಿಮೇಕ್ ಚಿತ್ರಗಳು ಕೂಡ ಕನ್ನಡಕ್ಕೆ ಅಪಾಯಕಾರಿಯೇ ಆಗಿರಬೇಕಿತ್ತು. ಡಬ್ಬಿಂಗ್ ಚಿತ್ರವನ್ನು ನೋಡು­ವುದು ಬಿಡುವುದು ಹಣ ಕೊಟ್ಟು ಚಿತ್ರ ನೋಡುವ ಪ್ರೇಕ್ಷಕನ ವಿವೇಚನೆಗೆ ಬಿಟ್ಟ ವಿಚಾರ.  ಈ ಆಯ್ಕೆ­ಯನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಕನ್ನಡಕ್ಕೆ ಡಬ್ಬಿಂಗ್ ಅವಕಾಶ ಬೇಗ ಬರಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry