ಬುಧವಾರ, ಜೂನ್ 16, 2021
22 °C

ಕನ್ನಡದಲ್ಲಿ ಗ್ರಾಹಕ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡುಗೆ ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್ ಮೇಲಿರುವ ಸುರಕ್ಷತೆ ಕುರಿತ ಮಾಹಿತಿ ಗ್ರಾಹಕರಿಗೆ ಬಹು ಮುಖ್ಯ. ಆದರೆ ಆ ಮಾಹಿತಿ ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿರುತ್ತದೆ.  ಸುರಕ್ಷತೆಯ ಕುರಿತ ಮಾಹಿತಿ ಕನ್ನಡದಲ್ಲೂಇರಬೇಕು.

 

ಇಂಗ್ಲಿಷ್, ಹಿಂದಿ ಬಾರದ ಲಕ್ಷಾಂತರ ಕನ್ನಡ ಭಾಷಿಕರಿಗೆ ಕನ್ನಡದಲ್ಲಿ ಮಾಹಿತಿ ಪಡೆಯುವುದು ಅವರ ಹಕ್ಕು.  ಕನ್ನಡ ಯಾಕೆ ಇಲ್ಲ ಅಂತ ಕೇಳಿದರೆ, ಅದಕ್ಕೆ ತಂತ್ರಜ್ಞಾನವು ಬೆಂಬಲ ನೀಡುವುದಿಲ್ಲ ಎಂಬ ಪೊಳ್ಳು ಮಾತುಗಳು ಕೇಳಿ ಬರುತ್ತವೆ. ಮುಂದುವರಿದ ದೇಶಗಳು ತಂತ್ರಜ್ಞಾನವನ್ನು ತಮ್ಮ ನುಡಿಗಳಿಗೆ ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಆದರೆ ಕರ್ನಾಟಕದಲ್ಲಿ ಬರೀ ನೆಪಗಳನ್ನು ಹೇಳುತ್ತಿದ್ದಾರೆ.ಇದರಲ್ಲಿ ಗ್ರಾಹಕರ ಹೊಣೆಯೂ ಇದೆ. ಕನ್ನಡದಲ್ಲಿ ಮಾಹಿತಿ ಪೂರೈಸುವಂತೆ ಕನ್ನಡ ಭಾಷಿಕ ಗ್ರಾಹಕರು ಒತ್ತಾಯಿಸಬೇಕು. ಸುಮ್ಮನಿದ್ದರೆ  ಮಾಹಿತಿ ಸಿಗುವುದಿಲ್ಲ. ಕೆಲವು ಕನ್ನಡಿಗರ ಒತ್ತಡಕ್ಕೆ ಅಲ್ಲಿಲ್ಲಿ ಮಾನ್ಯತೆ ಸಿಕ್ಕಿದೆ. ಸಿಟಿ ಬ್ಯಾಂಕ್ ಎ.ಟಿ.ಎಂಗಳಲ್ಲಿ ಕನ್ನಡ ಬಂದಿದೆ.ಹೆಚ್ಚು ಮಂದಿ ಕನ್ನಡಿಗರು ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಬೇಕು.  ಕರ್ನಾಟಕದಲ್ಲಿ ಯಾವುದೇ ಗ್ರಾಹಕ ಸೇವೆಗೆ ಸಂಬಂಧಿಸಿದ ಮಾಹಿತಿ ಕನ್ನಡದಲ್ಲಿ ಇರಬೇಕು ಎಂಬ ಕಾನೂನು ರೂಪಿಸಿ ಜಾರಿಗೆ ತರಬೇಕು. ಅದು ಸರ್ಕಾರದ ಹೊಣೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.