ಭಾನುವಾರ, ಮೇ 16, 2021
28 °C

ಕನ್ನಡದಲ್ಲಿ ವಾದ: ಮಾನ್ಯವಾಗದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದಲ್ಲಿ ವಾದ ಮಂಡಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ಮುಂದೆ ಕೋರಿಕೊಂಡ ವ್ಯಕ್ತಿಯೊಬ್ಬರ ಮನವಿಯನ್ನು ಬುಧವಾರ ಪೀಠ ತಿರಸ್ಕರಿಸಿದೆ.`ಇಂಗ್ಲಿಷ್‌ನಲ್ಲಿ ವಾದಿಸುತ್ತೇನೆ.ಇಲ್ಲದೇ ಹೋದರೆ ವಕೀಲರನ್ನು ನೇಮಕ ಮಾಡುತ್ತೇನೆ~ ಎಂದು ಕೋರ್ಟ್‌ಗೆ 2000ನೇ ಸಾಲಿನಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದ ತುಮಕೂರಿನ ಆರ್‌ಕೆಜಿಎಂ ಮಹಾಸ್ವಾಮಿ ಕನ್ನಡದಲ್ಲಿ ವಾದ ಮಂಡಿಸಲು ಅನುಮತಿ ನೀಡುವಂತೆ ಬುಧವಾರ ಕೋರಿಕೊಂಡಾಗ ಇದಕ್ಕೆ ನ್ಯಾ. ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯಪೀಠ   ಸಮ್ಮತಿಸಲಿಲ್ಲ.ಹೈಕೋರ್ಟ್ ಭಾಷೆ ಇಂಗ್ಲಿಷ್ ಆಗಿರುವ ಹಿನ್ನೆಲೆಯಲ್ಲಿ ಈ ಭಾಷೆಯಲ್ಲಿಯೇ ವಾದ ಮಂಡಿಸುವಂತೆ ಅಥವಾ ವಕೀಲರನ್ನು ನೇಮಕ ಮಾಡುವಂತೆ ಪೀಠ ಆದೇಶಿಸಿತು. ಮುಖ್ಯ ನ್ಯಾಯಮೂರ್ತಿಗಳಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಅರ್ಜಿದಾರರು ಕೋರಿಕೊಂಡರು.

ಆದರೆ ಈ ವಾದ ಮಾನ್ಯವಾಗಲಿಲ್ಲ. ತುಮಕೂರಿನ ಭೂವಿವಾದಕ್ಕೆ ಸಂಬಂಧಿಸಿದಂತೆ 1999ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.