`ಕನ್ನಡಿಗರು ಒಗ್ಗೂಡಿದರೆ ಯಶಸ್ಸು ಸಾಧ್ಯ'

ಶುಕ್ರವಾರ, ಜೂಲೈ 19, 2019
24 °C

`ಕನ್ನಡಿಗರು ಒಗ್ಗೂಡಿದರೆ ಯಶಸ್ಸು ಸಾಧ್ಯ'

Published:
Updated:

ಕೃಷ್ಣರಾಜಪೇಟೆ : ಕನ್ನಡ ನುಡಿ, ನೆಲ, ಜಲದ ವಿಷಯ ಬಂದಾಗ ಕನ್ನಡಿಗರು ಒಗ್ಗೂಡಿ ಮುನ್ನಡೆದರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ನಿಸ್ವಾರ್ಥಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸಿ.ಎಸ್. ಸುನಿಲ್ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್ ವಹಿಸಿದ್ದರು. ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್‌ಕುಮಾರ್ ಆಶಯ ನುಡಿಗಳಾಡಿದರು.ವೇದಿಕೆಯ ರಾಜ್ಯ ಉಪಾಧ್ಯಕ್ಷ ಜನಾರ್ಧನರೆಡ್ಡಿ, ಕನ್ನಡ ಉಪನ್ಯಾಸಕ ನಾಗೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಡಿ. ಹರೀಶ್, ಪುರಸಭೆ ಸದಸ್ಯ ಕೆ. ವಿನೋದ್, ಪುಟ್ಟಮ್ಮ ಚಿಕ್ಕೇಗೌಡ ನಾಗರಿಕ ಟ್ರಸ್ಟ್ ಕಾರ್ಯ ದರ್ಶಿ ಕೆ.ಸಿ.  ೇವಣ್ಣ, ರಾಜ್ಯ ಯುವ ಜೆಡಿಎಸ್ ಕಾರ್ಯದರ್ಶಿ ಎಸ್.ಆರ್. ದಿನೇಶ್, ಮುಖಂಡರಾದ ಮಲ್ಲೇನಹಳ್ಳಿ ಮೋಹನ್, ಚೌಡೇನಹಳ್ಳಿ ನಾಗರಾಜ್, ನಾರ್ಗೋನಹಳ್ಳಿ ಮಂಜುನಾಥ್, ಎಂ.ಸಿ. ಪ್ರವೀಣ್‌ಕುಮಾರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry