ಮಂಗಳವಾರ, ಏಪ್ರಿಲ್ 13, 2021
23 °C

ಕನ್ನಡಿಯೇ, ಇವರಲ್ಲಿ ಅತಿ ದೊಡ್ಡ ರಾಣಿಯನ್ನು ತೋರಿಸು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ 360 ಅದೃಷ್ಟಶಾಲಿ ಡಿಸ್ನಿ ಪ್ರಿನ್ಸೆಸ್ ಅಭಿಮಾನಿಗಳಿಗೆ ಅಂದು ಕನಸು ನನಸಾದ ದಿನ. ನಗರದಲ್ಲಿ ನಡೆದ ಮೊದಲ ಡಿಸ್ನಿ ಪ್ರಿನ್ಸೆಸ್ ಅಕಾಡೆಮಿ ಕಾರ್ಯಕ್ರಮದಲ್ಲಿ 360ಕ್ಕೂ ಹೆಚ್ಚು ಅಭಿಮಾನಿಗಳಿಗೆ ಅಲಂಕರಣ, ನೃತ್ಯ ತರಬೇತಿ, ಟೆರ‌್ರಾ ರೂಪಿಸುವಿಕೆ ಕುರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ. ಇದರ ಜೊತೆಗೆ ಜನಪ್ರಿಯ ಡಿಸ್ನಿ ಪ್ರಿನ್ಸೆಸ್‌ಗಳಾದ ಸಿಂಡ್ರೆಲಾ, ಸ್ನೋ ವೈಟ್, ರಪುನ್‌ಜೆಲ್ ಅವರನ್ನು ಭೇಟಿ ಮಾಡುವ ದಿವಿನಾದ ಕ್ಷಣಗಳು ಸಿಕ್ಕವು. ಡಿಸ್ನಿ ಪ್ರಿನ್ಸೆಸ್ ವಿಶ್ವಾದ್ಯಂತ ಇರುವ ಬಾಲಕಿಯರಿಗೆ ವಿಶ್ವದರ್ಜೆಯ ಮನರಂಜನೆ, ಜೀವನಶೈಲಿ ಉತ್ಪನ್ನಗಳನ್ನು ಒದಗಿಸುವ ಮುಖೇನ ಅವರಿಗೆಲ್ಲಾ `ಪ್ರಿನ್ಸೆಸ್~ ಅನುಭವ ನೀಡುತ್ತಾ ಬರುತ್ತಿದೆ. ನಗರದಲ್ಲಿರುವ ಡಿಸ್ನಿ ಪ್ರಿನ್ಸೆನ್ಸ್ ಅಕಾಡೆಮಿಯು ವಿವಿಧ ನಮೂನೆಯ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಿಗೆ ಸಂತಸ ಮೂಡಿಸಿತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರತಿ ಬಾಲಕಿಗೂ ಡಿಸ್ನಿ ಪ್ರಿನ್ಸೆಸ್ ಉಡುಪುಗಳನ್ನು ಪಡೆಯುವ ಅವಕಾಶ ಸಿಕ್ಕಿತು.ಡಿಸ್ನಿ ಅಕಾಡೆಮಿಯ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಅವರ ತಾಯಂದಿರಿಗೆ ಸಕಾರಾತ್ಮಕ ಮೌಲ್ಯಗಳು, ಪ್ರಾಮಾಣಿಕತೆ, ಬುದ್ಧಿಮತ್ತೆ, ಸೌಹಾರ್ದತೆ ಹಾಗೂ ಸೌಂದರ್ಯ ಕುರಿತು ಮಾಹಿತಿ ನೀಡಲಾಯಿತು. ಪ್ರತಿ ಬಾಲಕಿಯರು ಬಯಸುವ ಡಿಸ್ನಿ ಪ್ರಿನ್ಸೆನ್ಸ್‌ಗಳಾದ ಸಿಂಡ್ರೆಲಾ, ಸ್ನೋವೈಟ್ ಮತ್ತು ರಪುನ್‌ಜೆಲ್ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳವ ಕೂಡ ಮಕ್ಕಳಿಗೆ ಸಿಕ್ಕಿತು.ಡಿಸ್ನಿ ಪ್ರಿನ್ಸೆಸ್ ಅಕಾಡೆಮಿಯು ಪ್ರತಿ ನಗರದಲ್ಲಿ ಮೂರರಂತೆ ಒಟ್ಟು 15 ಕಾರ್ಯಕ್ರಮಗಳನ್ನು ನಡೆಸಲಿದೆ.  ಬೆಂಗಳೂರಿನ ಮಕ್ಕಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅದ್ಭುತ ಮನರಂಜನೆ ನೀಡಿದ ಬಳಿಕ ಡಿಸ್ನಿ ಪ್ರಿನ್ಸೆಸ್ ಅಕಾಡೆಮಿ ಹೈದರಾಬಾದ್‌ಗೆ ತೆರಳಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.