ಭಾನುವಾರ, ಏಪ್ರಿಲ್ 11, 2021
32 °C

ಕನ್ನಡ ಅಂಕಿ ಬಳಕೆಗಾಗಿ ಜಾಗೃತಿ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಲೆಅಲೆಯಾಗಿ ಜನರು ಧಾವಿಸುತ್ತಿದ್ದರೆ, ಈ ಜನರಲೆಗೆ ಇನ್ನೊಂದು ಧ್ವನಿಯ ಅಲೆಯನ್ನು ತಲುಪಿಸಿದ್ದು ಧಾರವಾಡದ ಕ್ರಿಯಾಶೀಲ ಗೆಳೆಯರ ಬಳಗ.ಬೆಳಗಾವಿಗೆ ಆಗಮಿಸಿದ ಕನ್ನಡಿಗರಲ್ಲೆಲ್ಲ ಅವರದು ಒಂದೇ ಪ್ರಾರ್ಥನೆ; ವಿನಂತಿ; ಆಗ್ರಹ. ಕನ್ನಡ ಅಂಕಿಗಳನ್ನು ಬಳಸಬೇಕು ಎಂಬ ಸದುವಿನಯದ ಮನವಿಯೊಂದಿಗೆ, ಕಾರ್ ಏರಿ ಮೂರುದಿನಗಳ ಕಾಲ ನಗರ ಸುತ್ತಿದ ಗೆಳೆಯರು ಮರೆತೇ ಹೋಗುತ್ತಿರುವ ಕನ್ನಡ ಅಂಕಿಗಳನ್ನು ಪರಿಚಯಿಸಿದರು. ಸುಮಾರು ನಲವತ್ತೆಂಟು ಸಾವಿರ ರೂಪಾಯಿ ವೆಚ್ಚದಲ್ಲಿ ಚಿಕ್ಕ ಕಾರೊಂದನ್ನು  ಪ್ರಚಾರಕ್ಕೆ ಬಳಸಿಕೊಂಡಿರುವ ಧಾರವಾಡದ ಗೆಳೆಯರು, ವಾಹನದ ಮೇಲೆ ಭುವನೇಶ್ವರಿ ದೇವಿ ಚಿತ್ರವನ್ನು ತ್ರಿಕೋನಾಕಾರವಾಗಿ ನಿಲ್ಲಿಸಿ, ‘ಕನ್ನಡ ಅಂಕಿಗಾಗಿ ದುಡಿ; ನಿನ್ನ ಆಯುಷ್ಯದ ಅಂಕಿ ಇಮ್ಮಡಿ’ ಎಂದು ಬರೆದು ಸಾರ್ಥಕ್ಯ ಭಾವವನ್ನು ಬಿಂಬಿಸಿದ್ದಾರೆ.ಶಿವಕುಮಾರ ಮ್ಯಾಗೋಟಿ, ರವಿಕುಮಾರ ಗುಂಡಮಿ, ದೇವದಾಸ ಕಳಸದ, ಬಸವರಾಜ ಬೋರಣ್ಣವರ, ವಿಶ್ವನಾಥ ಹುಲ್ಲೂರ, ವಿಜಯ ಅಥಣಿ, ಜ್ಞಾನೇಶ್ವರ ಚೋಳಿನ, ನಿಂಗಪ್ಪ ಮಾಡಬಾಳು, ಚಳಗೇರಿ ಹಾಗೂ ಸ್ನೇಹಿತರ ಬಳಗ ಅಂಕಿ ಜಾಗೃತಿ ವಾಹನ ಯಾತ್ರೆ ಕೈಗೊಂಡಿದೆ.

ಪ್ರದೀಪ ಮೇಲಿನಮನಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.