ಕನ್ನಡ ಅಧ್ಯಾಪಕರ ಕೊರತೆ-ಪಾಪು ಕಳವಳ

7

ಕನ್ನಡ ಅಧ್ಯಾಪಕರ ಕೊರತೆ-ಪಾಪು ಕಳವಳ

Published:
Updated:

ಧಾರವಾಡ: `ಕಳೆದ 20 ವರ್ಷಗಳಿಂದ ಕಾಲೇಜು ಹಂತದಲ್ಲಿ ಕನ್ನಡ ಅಧ್ಯಾಪಕರ ಕೊರತೆ ಇದೆ. ಕನ್ನಡ ಅಧ್ಯಾಪಕ ಹುದ್ದೆಗಳನ್ನು ನೇಮಕ ಮಾಡಲು ಸರ್ಕಾರ ಇಂದಿ ಗೂ ಮುಂದಾಗುತ್ತಿಲ್ಲ ಇದು ಹೀಗೆ ಮುಂದುವರಿದರೆ ಕನ್ನಡ ಉಳಿಸು ವುದು ಕೇವಲ ಕನಸಿನ ಮಾತಾ ಗುತ್ತದೆ” ಎಂದು ಡಾ. ಪಾಟೀಲ ಪುಟ್ಟಪ್ಪ ಕಳವಳ ವ್ಯಕ್ತಪಡಿಸಿದರು.ಶುಕ್ರವಾರ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋ ತ್ಸವ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಇಲ್ಲಿನ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ನುಡಿ ತೇರು ಜಾಗೃತಿ ಜಾಥಾ ಮತ್ತು ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕನ್ನಡ ಒಂದು ಪ್ರಾಚೀನ ಭಾಷೆ ಯಾಗಿದೆ. ಆರು ಸಾವಿರ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು ಇಂಥ ಭಾಷೆ ಯನ್ನು ಕಳೆದುಕೊಳ್ಳುತ್ತಿರುವ ನಮ್ಮಂಥ ಹುಚ್ಚರು ಯಾರೂ ಇಲ್ಲ. ಕನ್ನಡಕ್ಕೆ ವಿರೋಧಿ ಭಾಷೆ ಯಾವು ದೂ ಇಲ್ಲ.ಕೇವಲ ಅರ್ಧ ಇಂಗ್ಲಿಷ್ ಭಾಷೆಯನ್ನು ಕಲಿತು ಮಾತನಾಡು ವವರು ನಿಜವಾದ ಕನ್ನಡದ ವಿರೋಧಿ ಗಳಾಗಿದ್ದಾರೆ. ಇಂಗ್ಲಿಷ್ ಭಾಷೆ ಕನ್ನಡದ ಸಾರ್ವಭೌಮತ್ವವನ್ನು ಒಪ್ಪಿ ಕೊಂಡು ಬರಬೇಕೆ ಹೊರತು ಇಂಗ್ಲಿಷ್ ಸಾರ್ವಭೌಮತ್ವ ಪಡೆದು ಕೊಳ್ಳಲು ಬಿಡಬಾರದು~ ಎಂದು ಅವರು ಸಲಹೆ ನೀಡಿದರು.`ರಾಜ್ಯದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಶಿಕ್ಷಣದಲ್ಲಿ ಕನ್ನಡ ಸ್ಥಾನ ಮತ್ತು ಇಂಗ್ಲಿಷಿನ ಸ್ಥಾನ ಏನಿದೆ ಎಂಬುದು ಅವರಿಗೆ ಇದೂವರೆಗೂ ತಿಳಿದಿಲ್ಲ. ಇದನ್ನು ಅವರು ಸ್ಪಷ್ಟಪಡಿಸಬೇಕಾಗಿದೆ. ಕನ್ನಡವನ್ನು ನೆಲೆಯೂರಿ ನಿಲ್ಲುವಂತೆ ಮಾಡಬೇಕಾಗಿದೆ~ ಎಂದು ಅವರು ಕಿವಿಮಾತು ಹೇಳಿದರು.`ಕನ್ನಡ ನುಡಿ ತೇರು ಕಾರ್ಯಕ್ರಮ ಬೆಳಗಾವಿಯಲ್ಲಿ ಮತ್ತೊಮ್ಮೆ ನಡೆಯ ಬೇಕು. ಮಹಾರಾಷ್ಟ್ರ ಸರ್ಕಾರ ಗುಡ್ಡಾಪುರದಲ್ಲಿರುವ ಕನ್ನಡ ಶಾಲೆ ಗಳನ್ನು ಮುಚ್ಚಿ ಅಲ್ಲಿ ಮರಾಠಿ ಶಾಲೆಗಳನ್ನು ತೆರೆದು ರಾಕ್ಷಸ ಆಡಳಿತ ವನ್ನು ಮಾಡುತ್ತಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಭಾಷೆ ಒಂದೆ ಆಗಿತ್ತು. ಈ ಕುರಿತು ಗಡಿ ಪ್ರದೇಶ ಮತ್ತು ಭಾಷೆಯ ಬಗ್ಗೆ ಬಾಳಾ ಠಾಕ್ರೆ ಜೊತೆಗೆ ಚರ್ಚೆ ಮಾಡಲು ತಾವು ಸದಾ ಸಿದ್ಧ~ ಎಂದು ಅವರು ಘೋಷಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ಪಕ್ಷಭೇದವನ್ನು ಮರೆತು ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗಿದೆ. ಬೇರೆ ಭಾಷೆಗ ಳಿಂದ ನಮ್ಮ ಮಾತೃ ಭಾಷೆಯಾ ಗಿರುವ ಕನ್ನಡಕ್ಕೆ ಧಕ್ಕೆ ಬರದಂತೆ ಇತರ ಭಾಷೆಗಳನ್ನು ಸ್ವೀಕರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸದ ಪ್ರಹ್ಲಾದ ಜೋಶಿ, ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಕಡಿಮೆ ಆಗುತ್ತಿರುವುದರಿಂದ ಪಾಲ ಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಂಭೀರ ವಾದ ಚಿಂತನೆ ಯಾಗಬೇಕಿದೆ. 20 ವರ್ಷಗಳಿಂದ ಖಾಲಿ ಇರುವ ಕನ್ನಡ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ನಂತರ ಪ್ರೊ. ಜಿ.ಎಸ್.ಸಿದ್ಧ ಲಿಂಗಯ್ಯ ಹಳಗನ್ನಡದ ಕಾವ್ಯದಲ್ಲಿ ಪಂಪನ ವಿಶಿಷ್ಟತೆ ಹಾಗೂ ಡಾ. ಚಂದ್ರಶೇಖರ ನಂಗಲಿ ರನ್ನನ ಗದಾ ಯುದ್ಧ ಕುರಿತು ಉಪನ್ಯಾಸ ನೀಡಿದರು.ಕವಿವಿಯ ಪ್ರಭಾರಿ ಕುಲಪತಿ ಸಿ.ಜಿ. ಹುಸೇನಖಾನ್, ಡಾ. ಕೆ.ಆರ್. ದುರ್ಗಾದಾಸ, ಡಾ. ವಿಷ್ಣು ನಾಯ್ಕ, ಡಾ. ಮುರುಳೀಧರನ್, ಪದ್ಮಾ ಚಂದ್ರ ಶೇಖರ, ಡಾ. ಸಿ.ಯು. ಮಂಜುನಾಥ, ಪಾಲಿಕೆ ಸದಸ್ಯ ಶಿವು ಹಿರೇಮಠ, ಮತ್ತಿತರರು ವೇದಿಕೆಯಲ್ಲಿದ್ದರು.ಬಿ.ಡಿ. ಹಿರೇಗೌಡರ ಸ್ವಾಗತಿಸಿದರು. ನಾಗರಾಜ ಮೂರ್ತಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry