ಕನ್ನಡ ಕಲಿತು ಮಾತನಾಡಲು ಸಲಹೆ

7

ಕನ್ನಡ ಕಲಿತು ಮಾತನಾಡಲು ಸಲಹೆ

Published:
Updated:

ಬೆಂಗಳೂರು: ವಿದ್ಯಾರಣ್ಯಪುರ ರಾಮಚಂದ್ರಾಪುರದ ಬ್ಲೂಮ್ ಫೀಲ್ಡ್ ಗಾರ್ಡನ್ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಆಶ್ರಯದಲ್ಲಿ ಕನ್ನಡಿಗರು ಹಾಗೂ ಇತರ ರಾಜ್ಯಗಳ ನಿವಾಸಿಗಳು ಜೊತೆಯಾಗಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಿದರು.ಉದ್ಯಮಿ ಮಾಧವನ್ ಕಾರ್ಯಕ್ರಮ ಉದ್ಘಾಟಿಸಿ ನಾಡಿನ ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಸೋಸಿಯೇಶನ್‌ನ ಸದಸ್ಯ ನಾರಾಯಣ ಗೌಡ ಮಾತನಾಡಿ, `ರಾಜ್ಯದಲ್ಲಿ ನೆಲೆಸಿರುವ ಇತರ ಭಾಷೆಗಳ ಜನರು ಕನ್ನಡ ಕಲಿತು ಕನ್ನಡಿಗರೊಂದಿಗೆ ಸ್ನೇಹ ಭಾವದಿಂದ ಇರಬೇಕು' ಎಂದು ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry