ಕನ್ನಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ

7

ಕನ್ನಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ

Published:
Updated:

ಬಳ್ಳಾರಿ: ಗಣಿನಾಡು ಎಂದು ಪ್ರಸಿದ್ಧವಾದ ಜಿಲ್ಲೆಯಲ್ಲಿ ಕನ್ನಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ನಾಯಕ ನಟ ಶಿವರಾಜ್‌ಕುಮಾರ್ ಇಂಗಿತ ವ್ಯಕ್ತಪಡಿಸಿದರು.ನಗರದ ಆದಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ಸೋಮವಾರ ಪೂಜೆ ಸಲ್ಲಿಸಿದ ನಂತರ ರಾಯಲ್ ವೃತ್ತದವರಿಗೆ ಮೆರವಣಿಗೆ ಮೂಲಕ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಅಪ್ಪನ(ಡಾ.ರಾಜ್) ಕಾಲದಿಂದಲೂ ನಮ್ಮ ಕುಟುಂಬಕ್ಕೆ ಬಳ್ಳಾರಿಯ ನಂಟು ಇದೆ. ಈ ಭಾಗದ ಕನ್ನಡ ಭಾಷಾಭಿಮಾನ ಹೆಚ್ಚಿಸಲು ಜಾತಿ, ಭಾಷೆ, ಪಕ್ಷಭೇದ ಮರೆತು ಶ್ರಮಿಸಲು ಬದ್ಧರಾಗುವೆ ಎಂದು ಅವರು ತಿಳಿಸಿದರು.ಜಿಲ್ಲೆಯ ಜನತೆ ಕನ್ನಡ ಭಾಷೆಯನ್ನು ಪ್ರೀತಿಸುವ ಜೊತೆಗೆ, ನೆರೆಯ ಆಂಧ್ರದ ಭಾಷೆಯನ್ನು ಗೌರವಿಸುವ ಔದಾರ್ಯ ಗುಣ ಬೆಳೆಸಿಕೊಂಡಿದ್ದಾರೆ. ಬದಲಾಗುತ್ತಿರುವ ಈ ದಿನಗಳಲ್ಲಿ ಜನರು ಭಾವನಾತ್ಮಕ ಚಿತ್ರಗಳಿಗೆ ಹೆಚ್ಚಿನ ಮಹತ್ವ ಇದೆ ಎಂದು ಅವರು ತಿಳಿಸಿದರು.ಎಲ್ಲ ವಯಸ್ಸಿನ ಜನರು ನೋಡಬಹುದಾದ ವಿಭಿನ್ನ ಅಭಿರುಚಿಯ ಮೈಲಾರಿ ಚಿತ್ರ. ತಪ್ಪದೇ ನೋಡಬೇಕು ಎಂದು  ಮನವಿ ಮಾಡಿದರು.

ಶಾಸಕ ಜಿ.ಸೋಮಶೇಖರರೆಡ್ಡಿ, ಕರುನಾಡು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಕೆ.ಬಸಪ್ಪ, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಮೈಲಾರಿ ಚಿತ್ರತಂಡವು ಉಪಸ್ಥಿತರಿದ್ದರು. ವಿಜಯಯಾತ್ರೆ

ಹೊಸಪೇಟೆ:
ಮೈಲಾರಿ ಚಿತ್ರದ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ವಿಜಯಯಾತ್ರೆ ಕೈಗೊಂಡಿರುವುದಾಗಿ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ತಿಳಿಸಿದರು.ಸೋಮವಾರ ಹೊಸಪೇಟೆಯ ಲಕ್ಷ್ಮೀಚಿತ್ರಮಂದಿರದಲ್ಲಿ  ಪ್ರೇಕ್ಷಕರನ್ನು ಭೇಟಿ ಮಾಡಿ  ಕುಶಲೋಪರಿ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹೈದರಾಬಾದ ಕರ್ನಾಟಕದ ಜನತೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ರಾಜ್ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಮ್ಮ ಕುಟುಂಬ ಚಿರರುಣಿ ಎಂದರು.ಮೊದಲ ಬಾರಿ ಕನ್ನಡ ಚಿತ್ರವೊಂದಕ್ಕೆ ಇಂತಹ ಪ್ರತಿಕ್ರಿಯೆ ದೊರೆತಿರುವುದು ಚಿತ್ರೋದ್ಯಮಕ್ಕೆ ಹೊಸ ಉತ್ಸಹ ನೀಡಿದಂತಾಗಿದೆ ಎಂದು ನಿರ್ದೇಶಕ ಚಂದ್ರು  ತಿಳಿಸಿದರು. ನಿರ್ವಾಪಕ ಗುರುಕಿರಣ ಮಾತನಾಡಿ ಕನ್ನಡಿಗರ ಇಂತಹ ಅಭಿಮಾನ ನಿರೀಕ್ಷಿಸಿರಲಿಲ್ಲ ಕನ್ನಡ ಚಿತ್ರನಿರ್ಮಾಪಕರಿಗೆ ಹೊಸ ಹುಮ್ಮಸು ತುಂಬಿದಂತಾಗಿದೆ ಎಂದರು.ಮೇರವಣಿಗೆ: ನಗರಕ್ಕೆ ಆಗಮಿಸಿದ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ, ನಿರ್ಮಾಪಕ ಗುರುಕಿರಣ ಮತ್ತು ನಿರ್ದೇಶಕ ಚಂದ್ರು ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಲಕ್ಷ್ಮೀ ಚಿತ್ರ ಮಂದಿರದವರೆಗೂ ಭವ್ಯ ಮೇರವಣಿಗೆ ನಡೆಸಲಾಯಿತು.  ಅಭಿಮಾನಿಗಳು ಜಯಘೋಷಗಳೊಂದಿಗೆ ಸಂಬ್ರಮದಲ್ಲಿ ಪಾಲ್ಗೊಂಡಿದ್ದರುನಾಯಕನಟನ ರಕ್ಷಣೆಗೆ ನಿಯೋಜಿಸಿದ್ದ ಪೊಲೀಸರು ಹರಸಾಹಸ ಪಡಬೇಕಾಯಿತು.  ನಂತರ ಲಕ್ಷ್ಮೀಚಿತ್ರಮಂದಿರದಲ್ಲಿ ಪ್ರೇಕ್ಷರೊಂದಿಗೆ ಕೆಲಕಾಲ ಚಿತ್ರವೀಕ್ಷಿಸಿದರು ನಂತರ ಬಳ್ಳಾರಿಗೆ ಪ್ರಯಾಣ ಬೆಳಸಿದರು. ಶಿವರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ಗೌಳಿ ತಿಪ್ಪೇಸ್ವಾಮಿ ಸೇರಿದಂತೆ ಇತರರು ಸಹಸ್ರಾರು ಅಭಿಮಾನಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry