ಕನ್ನಡ ನಮ್ಮ ಅಸ್ತಿತ್ವದ ಕುರುಹು: ಮಂಜಯ್ಯ

7

ಕನ್ನಡ ನಮ್ಮ ಅಸ್ತಿತ್ವದ ಕುರುಹು: ಮಂಜಯ್ಯ

Published:
Updated:

ಆಲೂರು: ಕನ್ನಡ ಕೇವಲ ಭಾಷೆಯಲ್ಲ, ಅದು ಒಂದು ಸಂಸ್ಕೃತಿ, ಒಂದು ಪರಂಪರೆ ಮತ್ತು ನಮ್ಮ ಅಸ್ತಿತ್ವದ ಕುರುಹು. ಅದನ್ನು ಮೈಗೂಡಿಸಿಕೊಂಡು ಕನ್ನಡತನವನ್ನು ಉಳಿಸಿ ಬೆಳೆಸಬೇಕು ಎಂದು ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಕೆ. ಮಂಜಯ್ಯ ಹೇಳಿದರು.ಖಾಲಿಮೊಹಲ್ಲಾ ಅಬ್ದುಲ್ ಖುದ್ದೂಸ್ ಸ್ನೇಕ್ ಬಾಬು ಅವರ ಮನೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮನೆಗೊಂದು ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾಷೆ ಅತ್ಯಂತ ಪ್ರಾಚೀನವಾದುದು. ಇದು ಒಂದು ಜನಾಂಗದ ಭಾಷೆಯಲ್ಲ, ಕಲಿಕೆಗೆ ಸಾಕಷ್ಟು ಸೌಲಭ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿರಿಯ ಎಂಜಿನಿಯರ್‌ ವೆಂಕಟೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ವೀರಭದ್ರಸ್ವಾಮಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಶುದ್ದೀನ್, ಹಾಜಿ ಅಬ್ದುಲ್ ವಹಾಬ್, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಸ್ನೇಕ್ ಬಾಬು ಹಾಜರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ನೀಡಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಎ.ಟಿ. ಮಲ್ಲೇಶ್ ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಲಲಿತಮ್ಮ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry