ಕನ್ನಡ ನುಡಿ ತೇರಿಗೆ ಅದ್ದೂರಿ ಸ್ವಾಗತ

7

ಕನ್ನಡ ನುಡಿ ತೇರಿಗೆ ಅದ್ದೂರಿ ಸ್ವಾಗತ

Published:
Updated:
ಕನ್ನಡ ನುಡಿ ತೇರಿಗೆ ಅದ್ದೂರಿ ಸ್ವಾಗತ

ಇಂಡಿ: ವಿಜಾಪುರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥ ಗುರುವಾರ ತಾಲ್ಲೂಕಿನ ಅಗಸನಾಳ ಗ್ರಾಮಕ್ಕೆ ಆಗಮಿಸಿದ ಕನ್ನಡ ನುಡಿ ತೇರಿಗೆ ಶಾಸಕರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ನುಡಿ ತೇರಿಗೆ ಶಾಸಕ ಸಾರ್ವಭೌಮ ಬಗಲಿ ಪೂಜೆ ಸಲ್ಲಿಸಿ, ಕನ್ನಡ ಧ್ವಜ ಬೀಸುವುದರ ಮೂಲಕ ಇಂಡಿ ತಾಲ್ಲೂಕಿನಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು.ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆ ಮತ್ತು ಕನ್ನಡದ ಮಹಾನ್ ವ್ಯಕ್ತಿಗಳನ್ನು ಪರಿಚಯಿಸುವುದಕ್ಕಾಗಿ ನುಡಿ ತೇರಿನ ಮೆರವಣಿಗೆ ಅಗತ್ಯವಾಗಿದೆ. ಕನ್ನಡ ಭಾಷಾಭಿಮಾನ ಬೆಳೆಸಲು ಇಂತಹ ಸಮ್ಮೇಳನಗಳು ಅಗತ್ಯವಾಗಿವೆ ಎಂದು ಹೇಳಿದರು.ಕನ್ನಡ ನಮ್ಮ ಉಸಿರಾಗಬೇಕು ಮತ್ತು ಸಂಪೂರ್ಣ ಆಡಳಿತದ ಭಾಷೆಯಾಗಬೇಕು. ಆಗ ಮಾತ್ರ ನಮ್ಮ ಜನತೆಗೆ ಭಾಷಾಭಿಮಾನ ಬೆಳೆಯುತ್ತದೆ ಎಂದರು. ಜಿಲ್ಲಾ ಪಂಚಾಯತಿ ಸದಸ್ಯ ಗುರನಗೌಡ ಪಾಟೀಲ ಮಾತನಾಡಿ ಫೆಬ್ರುವರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಸಮ್ಮಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಶಾಲಾ ಮಕ್ಕಳು ಬಸವೇಶ್ವರ, ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧೀಜಿಯವರ ಪೋಷಾಕು ಧರಿಸಿ  ಪ್ರಚಾರದ ಮೆರವಣಿಗೆಯ ಗಮನ ಸೆಳೆದರು. ಇನ್ನೂ ಹಲವರು ಮಾತನಾಡಿ ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು, ಕನ್ನಡದ ಸಂಸ್ಕೃತಿಯನ್ನು ಎಲ್ಲರ ಮನೆ ಮನೆಗಳಲ್ಲಿ ಮತ್ತು ಮನಗಳಲ್ಲಿ ತುಂಬಬೇಕು ಎಂದರು.ಅದ್ದೂರಿ ಮೆರವಣಿಗೆಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ, ಕಾಂತು ಇಂಡಿ, ಉಪ ಕಂದಾಯ ವಿಭಾಗಾಧಿಕಾರಿ ಶಿವಕುಮಾರ, ತಹಶೀಲ್ದಾರ್ ಡಾ, ಸಿದ್ದು ಹುಲ್ಲೊಳ್ಳಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗುರನಗೌಡ ಪಾಟೀಲ, ಹಾಲುಮತ ಸಮಾಜದ ಅಧ್ಯಕ್ಷ ಜೆಟ್ಟೆಪ್ಪ ರವಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಹತ್ತಳ್ಳಿ ಮತ್ತು ಜೆ.ಟಿ. ತಳಕೇರಿ, ಸರಕಾರಿ ನೌಕರರ ಸಮಘದ ಮಾಜಿ ಅಧ್ಯಕ್ಷ ಅಂಬಣ್ಣ ಸುಣಗಾರ, ಜಿ.ಜಿ. ಬರ ಡೋಲ, ಎಂ.ಪಿ. ಭೈರಜಿ, ಪ್ರೊ,ಎ.ಪಿ. ಕಾಗವಾ ಡಕರ, ಸಿದ್ದು ಡಂಗಾ, ಎಂ.ಎ. ಪಾಟೀಲ ಮತ್ತು ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸ್ದ್ದಿದರು. ಮೆರವಣಿಗೆ ಯು ಅಗಸನಾಳದಿಂದ ಹೋರ್ತಿ ಮೂಲಕ ಸಾಗಿತು.

ಗಡಿನಾಡಲ್ಲಿ ಹರಡಿದ ಕನ್ನಡದ ಕಂಪುಚಡಚಣ: ಗುಮ್ಮಟ ನಗರಿ ವಿಜಾಪುರದಲ್ಲಿ ಜರುಗಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗೃತಿಗಾಗಿ ಚಡಚಣ ಪಟ್ಟಣಕ್ಕೆ ನುಡಿ ತೇರು ಗುರುವಾರ ಆಗಮಿಸಿದಾಗ ಪಟ್ಟಣದ ಎಲ್ಲೆಡೆ ಕನ್ನಡದ ಕಂಪು ಹರಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಟ್ಟಣಕ್ಕೆ ತೇರು ಆಗಮಿಸುತ್ತಿದ್ದಂತೆ, ಮಹಾದ್ವಾರದಲ್ಲಿ ಕಾದು ನಿಂತ ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜೈಕಾರ ಹಾಕಿ ನುಡಿ ತೇರನ್ನು ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry