ಗುರುವಾರ , ನವೆಂಬರ್ 21, 2019
21 °C

ಕನ್ನಡ ಪ್ರಶ್ನೆಪತ್ರಿಕೆ ಏಕಿಲ್ಲ?

Published:
Updated:

ಏ.13 ಮತ್ತು 14ರಂದು ನಡೆದ ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ  ಅಭ್ಯರ್ಥಿಗಳಿಗೆ ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲೂ ಉತ್ತರಿಸಲು ಅವಕಾಶ ಮಾಡಿಕೊಡಲಾಗಿತ್ತು. ಪ್ರಶ್ನೆ ಪತ್ರಿಕೆಯನ್ನು ಕೇವಲ ಆಂಗ್ಲ ಭಾಷೆಯಲ್ಲಿ ಕೊಟ್ಟಿರುವುದು. ಕನ್ನಡ ಮಾಧ್ಯಮದ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ತೀವ್ರ ಅಸಮಾಧಾನ ತಂದಿದೆ.ಕನ್ನಡವನ್ನು ಕಡೆಗಣಿಸಿ, ಆಂಗ್ಲಭಾಷೆಯಲ್ಲಿ ಪ್ರಶ್ನೆಪತ್ರಿಕೆ ನೀಡಿರುವುದು ವಿಷಾದನೀಯ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂಬ ಒತ್ತಾಸೆ ಇರುವ ಸಂದರ್ಭದಲ್ಲಿ ಹೀಗಾಗಬಾರದಿತ್ತು.

ಸದರಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕೇವಲ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಕನ್ನಡ ಭಾಷೆಯ ಪ್ರತಿಭಾವಂತ ಅಭ್ಯರ್ಥಿಗಳು ಸಹ ಪ್ರಶ್ನೆ ಪತ್ರಿಕೆಯನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಉತ್ತರ ಬರೆಯುವಲ್ಲಿ ಉಂಟಾದ ಕಾಲ ವಿಳಂಬದಿಂದ ಆಂಗ್ಲಭಾಷೆಯ ವಿದ್ಯಾರ್ಥಿಗಳಿಗೆ ಸಮವಾಗಿ ಪೈಪೋಟಿ ನೀಡಲು ಹಿನ್ನಡೆಯಾಗಿದೆ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವವರಾರು?

-ಪಾರ್ಥಲಿಂಗ ,ಚಿತ್ರದುರ್ಗ .

ಪ್ರತಿಕ್ರಿಯಿಸಿ (+)