ಮಂಗಳವಾರ, ಮೇ 24, 2022
31 °C

ಕನ್ನಡ ಪ್ರೇಮ ಮೆರೆದ ಜಪಾನ್ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಪಾನ್‌ನ ಮಾಹಿತಿ ತಂತ್ರಜ್ಞಾನ ಉದ್ಯಮದ ದೈತ್ಯ ಸಂಸ್ಥೆ `ಅಪೋಲೊ ಜಪಾನ್~ನ ನಿರ್ದೇಶಕಿ ಇಕಿಕೊ ಕಿಶಿಗಾಮಿ ಶುಕ್ರವಾರ ಕನ್ನಡದಲ್ಲೇ ಮಾತು ಆರಂಭಿಸಿ ಭಾರಿ ಚಪ್ಪಾಳೆ ಗಿಟ್ಟಿಸಿದರು.ಮಾಹಿತಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆ ಕುರಿತ ಚರ್ಚಾಗೋಷ್ಠಿಯಲ್ಲಿ ಕಿಶಿಗಾಮಿ ಭಾಗವಹಿಸಿದ್ದರು. ಉತ್ಪನ್ನಗಳಿಗೆ ಗುರುತು ನೀಡಲು ತಮ್ಮ ಕಂಪೆನಿ ಆವಿಷ್ಕರಿಸಿರುವ `ಸ್ಕ್ರೀನ್ ಕೋಡ್~ ಎಂಬ ವಿಶಿಷ್ಟ ತಂತ್ರಜ್ಞಾನ ಕುರಿತು ಮಾಹಿತಿ ನೀಡಿದರು. `ನಮಸ್ಕಾರ, ನನ್ನ ಹೆಸರು ಇಕಿಕೊ ಕಿಶಿಗಾಮಿ~ ಎಂದು ಕನ್ನಡದಲ್ಲಿ ಅವರು ನುಡಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು,ಜಪಾನ್ ಉದ್ಯಮಿ ಬೆಂಗಳೂರಿಗೆ ಬಂದ ಎರಡೇ ದಿನದಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿದ್ದು ಅಚ್ಚರಿಗೆ ಕಾರಣವಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.