ಕನ್ನಡ ಬದುಕುವ ಭಾಷೆಯಾಗಬೇಕು

7

ಕನ್ನಡ ಬದುಕುವ ಭಾಷೆಯಾಗಬೇಕು

Published:
Updated:
ಕನ್ನಡ ಬದುಕುವ ಭಾಷೆಯಾಗಬೇಕು

ಗುಲ್ಬರ್ಗ: ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಈ ತ್ರಿಕರಣಗಳಿಂದ ನಮ್ಮ ಆಚಾರ, ವಿಚಾರ, ಆಹಾರ, ವಿಹಾರ, ಉಡುಗೆ, ತೊಡುಗೆಗಳು ಪರಕೀಯವೆನಿಸಿ  ಕನ್ನಡದ ಬದುಕು-ಭಾಷೆ ನಲುಗಿ ಹೋಗುವಂತಾಗಿದೆ ಎಂದು ಗುಲ್ಬರ್ಗ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಡಿ.ಕೆ. ಚಿಕ್ಕತಿಮ್ಮಯ್ಯ ಅಭಿಪ್ರಾಯಪಟ್ಟರು.ಕನ್ನಡ ಅಧ್ಯಾಪಕರ ಸಂಘ, ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಬುಧವಾರ ಕಾಲೇಜು ಸಭಾಂಗಣದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ: ಪ್ರಸ್ತುತತೆ ಎಂಬ ವಿಷಯ ಕುರಿತು ಆಯೋಜಿಸಿದ್ದ ಕಮ್ಮಟಕ್ಕೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಎಲ್ಲರೂ ಹಣದ ಹಿಂದೆ ಬಿದ್ದಿರುವುದರಿಂದ ಕುಟುಂಬದಲ್ಲಿ  ವಿಘಟನೆ, ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತಿದೆ. ಇಂಥ ಸಂದರ್ಭದಲ್ಲಿ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ವೈದ್ಯಕೀಯ, ವಾಣಿಜ್ಯ, ವಿಜ್ಞಾನ, ನಿರ್ವಹಣೆ, ಕಾನೂನು ಶಾಸ್ತ್ರಗಳನ್ನು ಕನ್ನಡದಲ್ಲಿ ದೊರೆಯುವ ವ್ಯವಸ್ಥೆಯನ್ನು ಭಾಷಾ ಪಂಡಿತರು ಮಾಡಬೇಕಿದೆ ಎಂದರು.ಸಾಹಿತ್ಯ ಎನ್ನುವುದು ಜೀವನದ ಪ್ರತಿಬಿಂಬ. ಜೀವನ ನಿರ್ವಹಣೆಯ ಪರಿ. ಇದರಿಂದ ಅಂತರಂಗ ಪರಿಶುದ್ಧವಾಗುತ್ತದೆ. ಹೀಗಾಗಿಯೇ ಸಾಹಿತ್ಯದ ಗಂಧವಿಲ್ಲದ ಮಾನವ ಸಂಸ್ಕೃತಿ ಅಳೆಯಲಾರ. ಸಾಹಿತ್ಯವಿಲ್ಲದ ಜೀವನ ಜೀವವಿಲ್ಲದ ದೇಹದಂತೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಮಾತನಾಡಿ, ಜಾಗತೀಕರಣದ ಪ್ರಭಾವದಿಂದಾಗಿ ಇಂದು ಭಾಷೆ ಕೂಡ ಮಾರಾಟದ ಸರಕಾಗಿ ಮಾನವೀಯತೆ ಮರೆಯಾಗುತ್ತಿದೆ. ಎಲ್ಲ ಭಾಷೆಗಳಿಗಿಂತಲೂ ಮೇರು ಭಾಷೆಯಾಗಿರುವ ಕನ್ನಡ ಭಾಷೆಯ ಕಲಿಕೆಯಿಂದ ಪ್ರೀತಿ, ಅಂತಃಕರಣ ಒಡಮೂಡಲು ಸಾಧ್ಯ ಎಂದು ತಿಳಿಸಿದರು.ಪ್ರಾಚಾರ್ಯ ವಿಶ್ವನಾಥ ಚಿಮಕೋಡ ಅಧ್ಯಕ್ಷತೆ ವಹಿಸಿದ್ದರು. ಡಾ. ಶಾಂತಾ ಮಠ ಕಾರ್ಯಕ್ರಮ ನಿರೂಪಿಸಿದರು. ಡಾ. ಸಂಗಣ್ಣ ತಡಕಲ್ ಸ್ವಾಗತಿಸಿದರು. ಶಾಂತಾ ಭೀಮಸೇನರಾವ ವಂದಿಸಿದರು. ಪ್ರೊ. ಎಚ್.ಕಾಮಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಂತರ ಜರುಗಿದ ಗೋಷ್ಠಿಗಳಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ಕನ್ನಡ ಭಾಷೆಯ ಅವಶ್ಯಕತೆ, ಕನ್ನಡ ಸಾಹಿತ್ಯ ಮತ್ತು ವಾಸ್ತವ ಬದುಕು ವಿಷಯ ಕುರಿತು ಡಾ. ವಿಕ್ರಮ ವಿಸಾಜಿ ಪ್ರಬಂಧ ಮಂಡಿಸಿದರು. ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಓದು, ವೃತ್ತಿಪರತೆ,  ಕನ್ನಡ: ಉನ್ನತ ಶಿಕ್ಷಣದ ಅವಕಾಶಗಳು, ಕನ್ನಡ ಭಾಷೆ, ಸಾಹಿತ್ಯ: ಪಠ್ಯ,ಪರೀಕ್ಷೆ   ಕುರಿತು ಪ್ರೊ. ಕಲ್ಯಾಣರಾವ ಪಾಟೀಲ,  ಡಾ. ಶೈಲಜಾ ಕೊಪ್ಪರ, ಡಾ. ಮೀನಾಕ್ಷಿ ಬಾಳಿ ಪ್ರಬಂಧ ಮಂಡಿಸಿದರು.ಡಾ. ಪ್ರಭು ಖಾನಾಪುರೆ ಅಧ್ಯಕ್ಷತೆ ವಹಿಸಿದ್ದರು. ಡಾ. ಶಾರದಾದೇವಿ ಜಾಧವ, ಡಾ. ಸೂರ್ಯಕಾಂತ ಸುಜ್ಯಾತ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry