ಕನ್ನಡ ಬಳಸಲು-ಕರಪತ್ರ ಹಿಡಿದು ಪ್ರಚಾರ

7

ಕನ್ನಡ ಬಳಸಲು-ಕರಪತ್ರ ಹಿಡಿದು ಪ್ರಚಾರ

Published:
Updated:

ಬೆಂಗಳೂರು: ‘ಕನ್ನಡದಲ್ಲಿಯೇ ಯೋಚಿಸಿ, ಕನ್ನಡದಲ್ಲಿಯೇ ಬರೆಯಿರಿ, ಕನ್ನಡದಲ್ಲಿಯೇ ಮಾತನಾಡಿ, ಕನ್ನಡ ಅಂಕಿಗಳನ್ನೇ ಬಳಸಿ...’ ಸಮ್ಮೇಳನದಲ್ಲಿ ಹೀಗೆ ಕರಪತ್ರ ಹಿಡಿದು ಪ್ರಚಾರ ಮಾಡಿದವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಪಂಡಿತಾರಾಧ್ಯ.1969ರಿಂದಲೇ ಕನ್ನಡ ಅಂಕಿಗಳ ಪರ ಹೋರಾಟ ಆರಂಭಿಸಿದ ಇವರು ದಕ್ಷಿಣ ಭಾರತದಲ್ಲಿ ಕನ್ನಡದ ಅಂಕಿಗಳು ಮಾತ್ರ ಬಳಕೆಯಲ್ಲಿದ್ದು ಇವುಗಳು ನಾಶವಾಗಬಾರದು ಎಂಬ ಕಳಕಳಿ ಹೊಂದಿದವರು. ಸ್ಪಷ್ಟವಾಗಿ ಆದಷ್ಟೂ ಕನ್ನಡ ಪದಗಳಲ್ಲೇ ಮಾತಿಗಿಳಿಯುವ ಇವರು ‘ನುಡಿ’ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ ಸಮಿತಿಯ ಸದಸ್ಯರಲ್ಲೊಬ್ಬರು.ಕನ್ನಡವನ್ನು ಸಾಹಿತ್ಯ ಪರಿಷತ್ತಿಗಾಗಿ ಪಂಪನ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯವನ್ನು ಸಿಡಿ ರೂಪದಲ್ಲಿ ಸಿದ್ಧಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಅಲೆದು ಕನ್ನಡ ಅಂಕಿಗಳ ಅಗತ್ಯತೆ ಕುರಿತು ಖ್ಯಾತನಾಮರ ವಿಡಿಯೊ ಸಂದರ್ಶನ ನಡೆಸಿರುವ ಇವರ ಕೋಟು ಕೂಡ ಕನ್ನಡಮಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry