ಕನ್ನಡ ಬೆಳವಣಿಗೆಗೆ ಒಡೆಯರ ಕೊಡುಗೆ ಅಪಾರ

ಗುರುವಾರ , ಜೂಲೈ 18, 2019
24 °C

ಕನ್ನಡ ಬೆಳವಣಿಗೆಗೆ ಒಡೆಯರ ಕೊಡುಗೆ ಅಪಾರ

Published:
Updated:

ವಿಜಯಪುರ: ಕನ್ನಡ ನಾಡು-ನುಡಿ, ಸಾಹಿತ್ಯದ ಬೆಳವಣಿಗೆಗೆ ಮೈಸೂರು ಒಡೆಯರ ಕೊಡುಗೆ ಅಪಾರವಾದುದು ಎಂದು ಗುಚ್ಚ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಹಡಪದ್ ತಿಳಿಸಿದರು.

ಇಲ್ಲಿನ ಮಹಾತ್ಮ ಪ್ರೌಢಶಾಲೆ ಆವರಣದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದದ್ದ ಕೃಷ್ಣರಾಜ ಒಡೆಯರ್ ಅವರ ಜನ್ಮದಿನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಏಕೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಪ್ರೋತ್ಸಾಹವಿತ್ತು, ಕನ್ನಡ ಬೆಳವಣಿಗೆಗೆ ಕೃಷ್ಣರಾಜ ಒಡೆಯರ್ ಶ್ರಮಿಸಿದರು ಎಂದು ವಿವರಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಶಿಕ್ಷಕ ಎಂ.ಆರ್. ಶಂಕರರೆಡ್ಡಿ ಸಮಾರಂಭ ಉದ್ಘಾಟಿಸಿದರು.

ಆರ್.ಮುನಿರಾಜು, ಶಿಕ್ಷಕ ನಾಗೇಶ್, ಚಂದ್ರಶೇಖರ್, ಎಂ.ವೆಂಕಟಸ್ವಾಮಿ, ಉಸ್ಮಾನ್ ಸಾಬ್, ಸಿದ್ಧಲಿಂಗಯ್ಯ, ಪರಿಷತ್ತಿನ ಪದಾಧಿಕಾರಿಗಳು, ಬೋಧಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಶಿಕ್ಷಕ ವೈ.ಎಚ್.ಮಂಜುನಾಥ್ ಸ್ವಾಗತಿಸಿದರು. ಈಶ್ವರಪ್ಪ ವಂದಿಸಿದರು. ಕನ್ನಡ ಗೀತೆಗಳ ಗಾಯನ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry