ಬುಧವಾರ, ನವೆಂಬರ್ 20, 2019
26 °C

ಕನ್ನಡ ಸಂಘ ಉದ್ಘಾಟನೆ

Published:
Updated:

ರಾಯಚೂರು: ಬೇರೆ ಬೇರೆ ಭಾಷಿಕರ ಸವಾಲು ಎದುರಿಸಿ ಕನ್ನಡ ಭಾಷೆಯನ್ನು ರಕ್ಷಣೆ ಮಾಡಿ ಆರಾಧಿಸಬೇಕು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಡಾ.ಐ.ಜೆ ಮ್ಯಾಗೇರಿ ಹೇಳಿದರು.ಮಂಗಳವಾರ ಇಲ್ಲಿನ ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಕನ್ನಡ ಸಂಘ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಸಮೃದ್ಧವಾಗಿದೆ. ಕನ್ನಡ ಉಳಿಸಿ ಬೆಳೆಸೋಣ. ಕನ್ನಡ ಮನೆಯಲ್ಲಿ ಬದುಕೋಣ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ಧ ಸಂಸ್ಥೆಯ ಅಧ್ಯಕ್ಷ ಎ ಪಾಪಾರೆಡ್ಡಿ ಮಾತನಾಡಿ, ಮಕ್ಕಳಲ್ಲಿ ನಾಡು, ದೇಶಭಕ್ತಿ ಬೆಳೆಸಬೇಕು ಎಂದು ನುಡಿದರು.

ಟ್ಯಾಗೋರ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ದರೂರ ಬಸವರಾಜ ಪಾಟೀಲ್, ಸಂಸ್ಥೆಯ ಸದಸ್ಯ ಜಿ ಶಿವಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಚಾರ್ಯ ಆಶಾ ಪ್ರೇಮಲತಾ ಸ್ವಾಗತಿಸಿದರು. ರಮೇಶ ಎಚ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಡಾ.ಐ.ಜೆ ಮ್ಯಾಗೇರಿ ಅವರನ್ನು ಸತ್ಕರಿಸಲಾಯಿತು.

ಪ್ರತಿಕ್ರಿಯಿಸಿ (+)