ಬುಧವಾರ, ಏಪ್ರಿಲ್ 14, 2021
32 °C

ಕನ್ನಡ ಸಂದೇಶ ಸಾರಿದ ಸ್ಕೇಟಿಂಗ್‌ಪಟುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ:  ಕಪ್ಪು ಡಾಂಬರು ರಸ್ತೆ ಮೇಲೆ ಗುರುವಾರ ಬೆಳಿಗ್ಗೆ ಜರ‌್ರನೆ ಜಾರುವ ಸ್ಕೇಟಿಂಗ್ ಕಟ್ಟಿಕೊಂಡ ಮಕ್ಕಳು ಕನ್ನಡದ ಧ್ವಜ ಹಿಡಿದು ರಾಜ್ಯೋತ್ಸವದ ಸಂದೇಶ ನೀಡುತ್ತ ಸಾಗುತ್ತಿದ್ದರೆ, ಅಕ್ಕಪಕ್ಕದಲ್ಲಿ ಹೋಗುತ್ತಿದ್ದ ಜನರು ಕೆಲವು ನಿಮಿಷ ನಿಂತು ಈ ಮಕ್ಕಳತ್ತ ಗಮನ ಹರಿಸಿದರು.ಕೊಡಗು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿಯ ಜನಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ಸ್ಕೇಟಿಂಗ್ ಜಾಥಾದಲ್ಲಿ ಭಾಗವಹಿಸಿದ್ದ ಮಕ್ಕಳು ವಿಶೇಷ ಗಮನ ಸೆಳೆದರು. ಕುಶಾಲನಗರ ಪಟ್ಟಣದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯಿಂದ ಮಡಿಕೇರಿಗೆ ಒಟ್ಟು 30 ಕಿಲೋಮೀಟರ್ ಸ್ಕೇಟಿಂಗ್ ಮಾಡಿದ ಮಕ್ಕಳು ಜನರ ಮೆಚ್ಚುಗೆ ಗಳಿಸಿದರು.ದಾರಿಯುದ್ದಕ್ಕೂ ಕನ್ನಡ ಭಾಷೆ, ಕರ್ನಾಟಕದ ಹಿರಿಮೆ, ಗರಿಮೆಗಳ ಘೋಷಣೆ ಕೂಗುತ್ತ ಸಾಗಿದರು. ಕೈಯಲ್ಲಿ ಕನ್ನಡ ಧ್ವಜವನ್ನು ಹಿಡಿದ ಮಕ್ಕಳು ಸ್ಕೇಟಿಂಗ್ ಮೂಲಕ ರಸ್ತೆಯಲ್ಲಿ ಸಾಗಿದ ಮಕ್ಕಳಿಗೆ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.ಕುಶಾಲನಗರದಲ್ಲಿ  ಜಾಥಾಕ್ಕೆ ಚಾಲನೆ ನೀಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್, `ಕನ್ನಡ ನಾಡು, ನುಡಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಣ ತೊಟ್ಟಿರುವ ಸ್ಕೇಟಿಂಗ್ ಮಕ್ಕಳ ಪ್ರಯತ್ನ ವಿನೂತನವಾಗಿದೆ~ ಎಂದು ಶ್ಲಾಘಿಸಿದರು.  ಸ್ಕೇಟಿಂಗ್ ತರಬೇತುದಾರ ಜಗದೀಪ್ ಮಾತನಾಡಿದರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಸ್.ಎನ್.ನರಸಿಂಹಮೂರ್ತಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.