ಕನ್ನಡ ಸಮ್ಮೇಳನ: ಹಣ ಸಂಗ್ರಹಿಸಲು ಕ್ರಮ

7

ಕನ್ನಡ ಸಮ್ಮೇಳನ: ಹಣ ಸಂಗ್ರಹಿಸಲು ಕ್ರಮ

Published:
Updated:

ಗಂಗಾವತಿ: ನಗರದಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಹಣಕಾಸಿನ ಕೊರತೆ ಆಗದಂತೆ ಏರ್ಪಾಡು ಮಾಡುತ್ತಿರುವುದಾಗಿ ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷೆ ಹಾಗೂ ಕೊಪ್ಪಳ ಜಿಲ್ಲಾಧಿಕಾರಿ ಡಾ. ತುಳಸಿ ಮದ್ದಿನೇನಿ ಹೇಳಿದರು.ನಗರದ ಎಪಿಎಂಸಿ ಆವರಣದ ಸ್ವಾಗತ ಕಚೇರಿಯಲ್ಲಿ ಸೋಮವಾರ ಹಣಕಾಸು ಸಮಿತಿ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಯಿಂದ ತಲಾ ಹತ್ತು ಸಾವಿರ ರೂಪಾಯಿಯಂತೆ ಜಿಲ್ಲೆಯ 134 ಪಂಚಾಯಿತಿಗಳಿಂದ ರೂ. 13.4 ಲಕ್ಷ ಸಂಗ್ರಹಿಸಲಾಗುವುದು ಎಂದರು. ಪ್ರತಿ ತಾಲ್ಲೂಕು ಪಂಚಾಯಿತಿಯಿಂದ ತಲಾ 25 ಸಾವಿರ, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಒಂದು ದಿನದ ವೇತನ ರೂ. 35 ಲಕ್ಷ, ಜಿಲ್ಲಾ ಪಂಚಾಯಿತಿಯಿಂದ ಐದು ಲಕ್ಷ ರೂಪಾಯಿ ನೀಡಲು ಅವಕಾಶವಿದೆ ಎಂದರು.ಸಮ್ಮೇಳನಕ್ಕೆ ನೀಡಲು ನಗರಸಭೆ 25 ಲಕ್ಷ ಮೀಸಲಿರಿಸಿದೆ ಎಂದರು. ಜಿಲೆಯ ವಿವಿಧ ಕೈಗಾರಿಕಾ ವಲಯದಿಂದ  ದೇಣಿಗೆ ಪಡೆಯಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಹೇಳಿದರು.ಮಂಜುನಾಥ, ಚಂದ್ರಪ್ಪ, ಶಾಸಕ ಪರಣ್ಣ ಮುನವಳ್ಳಿ, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ನಗರಸಭಾ ಅಧ್ಯಕ್ಷ ಬಸಪ್ಪ ನಾಯಕ್, ಪೌರಾಯುಕ್ತ ಎಚ್. ನಿಂಗಪ್ಪ ಕುಮ್ಮಣ್ಣನವರ್ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry