ಕನ್ನಡ ಸಾಹಿತ್ಯದಲ್ಲಿ ಛೇದ ಉಂಟಾಗಿದೆ

ಶಿವಮೊಗ್ಗ: `ಹಿಂದಿನ ಕನ್ನಡ ಸಾಹಿತ್ಯ ಪರಂಪರೆ ಹಾಗೂ ಆಧುನಿಕ ಕನ್ನಡ ಸಾಹಿತ್ಯ ಪರಂಪರೆ ನಡುವೆ ಛೇದ ಉಂಟಾಗಿದೆ~ ಎಂದು ವಿಮರ್ಶಕ ಪ್ರೊ.ಜಿ.ಎಸ್. ಅಮೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದಲ್ಲಿ ಶನಿವಾರ `ಪ್ರೊ.ತೀ.ನಂ.ಶ್ರೀ. ಸಾಹಿತ್ಯ ವಿಮರ್ಶೆ~ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದಿನದು ಪ್ರಸ್ತುತವಲ್ಲ ಎಂಬುದು ನವ್ಯಕಾರರು ಸೇರಿದಂತೆ ಕೆಲವರ ಅಭಿಪ್ರಾಯವಾಗಿದೆ. ಆದರೆ, ಯಾವುದೇ ಸಾಹಿತ್ಯ ಐತಿಹಾಸಿಕ ಪರಂಪರೆಯ ನೆರವಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ. ನವ್ಯ ಕೃತಿಗಳು ವಿಜೃಂಭಿಸಿದವಾದರೂ ಕಾಲಾಂತರದಲ್ಲಿ ಗಾಂಧಾರ ಕಲೆಗಳಂತೆ ಕಳೆಗುಂದಿವೆ ಎಂದು ತಿಳಿಸಿದರು.
ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಸಿಕ್ಕ ಬೆಲೆ ಭಾರತೀಯ ಕಾವ್ಯ ಮೀಮಾಂಸೆಗೆ ದೊರಕಲಿಲ್ಲ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಮರ್ಶೆ ಎಂಬ ಪದ ಬಳಕೆ ಸರಿಯಲ್ಲ. ಈ ಪದವನ್ನು ಸ್ವೀಕರಿಸುವ ಮೂಲಕ ಭಾರತೀಯ ಕಾವ್ಯ ಮೀಮಾಂಸೆಯನ್ನು ಹೊರಗಿಟ್ಟಂತಾಗಿದೆ. ಕಾವ್ಯದಲ್ಲಿ ರಸಕ್ಕಿಂತ ಹೆಚ್ಚಾಗಿ ವ್ಯಾಪಕವಾದ ತಂತ್ರಗಳು ಬಹಳ ಮುಖ್ಯ ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ತೀ.ನಂ.ಶಂಕರನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಉಪಸ್ಥಿತರಿದ್ದರು.
ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಪ್ರಾಸ್ತಾವಿಕ ಮಾತನಾಡಿದರು. ಎಚ್.ಡಿ. ಉದಯಶಂಕರಶಾಸ್ತ್ರಿ ಸ್ವಾಗತಿಸಿದರು. ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.