ಸೋಮವಾರ, ಏಪ್ರಿಲ್ 12, 2021
29 °C

ಕನ್ನಡ ಸಾಹಿತ್ಯ ಮೀಮಾಂಸೆಗೆ ಸಂಸ್ಕೃತ ಭಾಷೆಯ ಪರಿಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕನ್ನಡ ಸಾಹಿತ್ಯ ಮಿಮಾಂಸೆಯ ಲಕ್ಷ್ಯ, ಪ್ರಕ್ರಿಯೆ, ಸಂಭಾಷಣೆಗಳಿಗೆ ಸಂಸ್ಕೃತವು ಪರಿಕರವನ್ನು ಒದಗಿಸಿದ್ದು, ಕನ್ನಡ ಕವಿಗಳು ಸಂಸ್ಕೃತದಲ್ಲಿ ತೊಯ್ದಿದ್ದಾರೆ~ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಹೇಳಿದರು. ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಚಾಮರಾಜಪೇಟೆಯ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾಲಯದ ಪ್ರಥಮ ಎಂ.ಫಿಲ್ ಪದವಿ ತರಗತಿ ಉದ್ಘಾಟನೆ ಮತ್ತು ಡಾ.ಶಾಮಶಾಸ್ತ್ರಿ ಅವರ `ಭಾಷಾತಂತ್ರಮ್~ ಪುಸ್ತಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, `ಪಂಪ, ರನ್ನ ಮುಂತಾದ ಕವಿಗಳ ಮೇಲೆ ಸಂಸ್ಕೃತ ಕವಿಗಳ ಮೇಲೆ ಬಹಳ ಪ್ರಭಾವವನ್ನು ಬೀರಿದ್ದರು. ಕನ್ನಡ ಭಾಷಾಂತರ ಪ್ರಕ್ರಿಯೆಯಲ್ಲಿ ಸಂಸ್ಕೃತದ ಪಾತ್ರವೇನು ಎಂಬುದರ ಬಗ್ಗೆ ಯುವ ಸಂಶೋಧಕರು ಗಮನ ಹರಿಸಬೇಕು~ ಎಂದು ಕರೆ ನೀಡಿದರು. `ಇಂದಿಗೂ ಸಂಸ್ಕೃತದಲ್ಲಿ ಹಲವಾರು ಕಲೆಗಳು ಹಾಗೂ ಶಾಸ್ತ್ರಗಳಿಗೆ ಸಂಬಂಧಿಸಿದ ಮುದ್ರಣವಾಗದ ಗ್ರಂಥಗಳಿದ್ದು, ಅವುಗಳನ್ನು ಶೋಧಿಸಿ, ಸಂಪಾದಿಸಿ, ಪ್ರಕಟಿಸುವ ಕೆಲಸವನ್ನು ಮಾಡಬೇಕು. ವಿದ್ಯಾರ್ಥಿಗಳು, ಮತ್ತು ವಿದ್ವಾಸರು ತಮ್ಮ ಜೀವನವನ್ನು ಹಿಂದಿರುಗಿ ನೋಡಿದಾಗ ಜನ್ಮ ವ್ಯರ್ಥವಾಗಲಿಲ್ಲ ಎಂಬ ಅರಿವು ಮುಡಬೇಕು. ಇದಕ್ಕಾಗಿ ಶಾಸ್ತ್ರ ಪಾಂಡಿತ್ಯ ಹಾಗೂ ಆಧುನಿಕ ಸಂಶೋಧನೆಯ ಪದ್ದತಿಯನ್ನು ರೂಡಿಸಿಕೊಳ್ಳಬೇಕು~ ಎಂದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, `ದಿನನಿತ್ಯದ ಜಡಜೀವನವನ್ನು ದೂರ ಮಾಡಬೇಕಾದರೆ ಗ್ರಂಥಗಳ ಅಧ್ಯಯನ, ಚಿಂತನೆಯನ್ನು ಮಾಡಬೇಕು. ಅಂತರರಾಷ್ಟ್ರೀಯ ಅಧ್ಯಯನದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಾಗಲಿದ್ದು, ಈ ದೆಸೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಸಿದ್ದರಾಗಬೇಕು. ಸಂಸ್ಕೃತ ವಿಶ್ವವಿದ್ಯಾಲಯವು ನೈತಿಕ ಮತ್ತು ಸಕಾರಾತ್ಮಕ ಧೊರಣೆಗಳ ಮೇಲೆ ನಿಂತಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸಂಶೋಧಕರ ಕರ್ತವ್ಯವಾಗಿದೆ~ ಎಂದರು. ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವೈ.ಎಸ್.ಸಿದ್ದೇಗೌಡ, ವಿಶ್ವವಿದ್ಯಾಲಯದ ಭಾಷಾ ನಿಕಾಯ ಡೀನ್ ಪ್ರೊ.ಶ್ರೀನಿವಾಸ ವರಖೇಡಿ, ವಿಶ್ವವಿದ್ಯಾಲಯ ಪ್ರಸಾರಂಗ ಉಪನಿರ್ದೇಶಕ ಪ್ರೊ.ಎಂ.ಕೆ.ಶ್ರೀಧರ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.