ಬುಧವಾರ, ಮೇ 12, 2021
18 °C

ಕನ್ನಡ ಹೃದಯಕ್ಕೆ ತಟ್ಟುವ ಭಾಷೆ: ವಾಲೀಕಾರ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕನ್ನಡ ಹೃದಯಕ್ಕೆ ತಟ್ಟುವ ಭಾಷೆ, ಇಂಗ್ಲಿಷ್ ಹೊಟ್ಟೆ ತುಂಬುವ ಭಾಷೆ~ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಹೇಳಿದರು.ಇಲ್ಲಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಮಂಗಳ ವಾರ ನಡೆದ ಐಬಿಎಂಆರ್ ಪದವಿ ಕಾಲೇಜಿನ ಜಿಮ್ಖಾನಾ ಚಟುವಟಿಕೆಗಳ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.`ಇಂದು ನಾವು ಅನಿವಾರ್ಯತೆಯಿಂದ ಇಂಗ್ಲಿಷ್ ಕಲಿಯಬೇಕಾಗಿದೆ. ಇದು ಈಗ ಅನಿವಾರ್ಯವೂ ಆಗಿದೆ. ಅದಕ್ಕೆ ವಿದ್ಯಾರ್ಥಿಗಳು ಪರಿಶ್ರಮದಿಂದ ಕನ್ನಡ ಸೇರಿದಂತೆ ಎಲ್ಲ ವಿವಿಧ ಭಾಷೆಗಳನ್ನು ಕಲಿಯಬೇಕು~ ಎಂದು ಕಿವಿಮಾತು ಹೇಳಿದರು.`ವಿದ್ಯಾರ್ಥಿಗಳೇ ಭವಿಷ್ಯದ ಆಶಾಕಿರಣ, ದೇಶದ ಭವಿಷ್ಯ, ದೇಶವನ್ನು ಮುನ್ನಡೆಸಲು ಯುವಕರು ಶಕ್ತಿವಂತರಾಗಿ ಬೆಳೆಯಬೇಕು. ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮಹತ್ವದಲ್ಲಿ. ನಾನು ಕಾಲೇಜಿಗೆ ಸಮಾ ಜಕ್ಕೆ, ದೇಶಕ್ಕೆ ಏನಾದರೂ ವಿಶೇಷವಾದ ಕಾಣಿಕೆ ನೀಡಿರಿ~ ಎಂದು ವಾಲೀಕಾರ ಹೇಳಿದರು.`ವಿದ್ಯಾರ್ಥಿಗಳು ಕನಸು ಕಾಣಬೇಕು, ಹಾಗೂ ಅದನ್ನು ನನಸಾಗಿಸಿಕೊಳ್ಳಲು  ನಿರಂತರವಾಗಿ ಪರಿಶ್ರ ಮಪಡಬೇಕು. ವಿದ್ಯಾರ್ಥಿಗಳ ಕನಸುಗಳು ನನಸಾಗಲು ಸಸಿಗಳಿಗೆ ನೀರು ಹಾಕಿ ಬೆಳೆಸಿದಂತೆ ಶಿಕ್ಷಕರು  ಸಲಹೆ, ಉತ್ತಮ ಮಾರ್ಗದರ್ಶನ ನೀಡಬೇಕು~ ಎಂದರು.ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಅರಸಿ ಬಂದಿದ್ದು ಕನ್ನಡಿಗರಿಗೆಲ್ಲಾ ಹೆಮ್ಮೆಯ ಸಂಗತಿ. ಬೆಳ ಗಾವಿ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಇವರು ಸಾಹಿತ್ಯದ ಉತ್ತುಂಗ ಶಿಖರಕ್ಕೆ ಏರಿದ್ದು ಎಲ್ಲರಿಗೂ ಮಾದರಿ. ವಿದ್ಯಾರ್ಥಿಗಳು ಕಂಬಾ ರರ ಸಾಹಿತ್ಯವನ್ನು ಓದಿ, ಅರಿತುಕೊಂಡು ಅವರ ಆದರ್ಶ, ಪರಿಶ್ರಮವನ್ನು ಅಳವಡಿಸಿಕೊಂಡು ಸಾಧನೆರ ಶಿಖರ ಏರಿ ಎಂದು ಸಲಹೆ ನೀಡಿದರು.`ವಿದ್ಯಾರ್ಥಿ ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ ಮಾಡಿದ ತಪ್ಪುಗಳನ್ನೇ ಪುನರಾವರ್ತನೆ ಆಗದ ಹಾಗೆ ನೋಡಿಕೊಳ್ಳಬೇಕು. ಅಂದಾಗ ಜೀವನದಲ್ಲಿ ಸಾಧನೆ ಮಾಡಬಹುದು~ ಎಂದರು.ದೇಶ ನನ್ನದು ಎಂಬ ಭಾವನೆ ನಿಮ್ಮಲ್ಲಿರಲಿ, ದೇಶಕ್ಕಾಗಿ ದುಡಿಯುತ್ತೇನೆ ಎಂಬ ಮನಸ್ಸು ಮಾಡಿರಿ. ನಿಮ್ಮೆಲ್ಲರ ಭಾವಿ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.ಐಬಿಎಂಆರ್ ಗ್ರೂಪ್‌ನ ಸಂಸ್ಥಾಪಕ ವಿನಯಚಂದ್ರ ಮಹೇಂದ್ರಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸದಾನಂದ ಹಾವಣಗಿ ಅವರು ಜಿಮ್ಖಾನಾ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರಧಾನ ಕಾರ್ಯದರ್ಶಿ ಶುಭೋದಾ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಅನೂಷಾ ಹೆಗಡೆ, ಮುಫೇಜ್ ಮುಲ್ಲಾ, ರಕ್ಷಾ, ಜಗದೀಶ, ಶ್ರವಣ ರಾವ್, ರವೀಂದ್ರ, ವರ್ಷಾ ಮಾಲಿ, ರೋಹಿಣಿ ಬೆಂಗೇರಿ, ಸೋನಾಲಿ ಗೋಖಲೆ, ವಿಕ್ರಂ ಜೋಶಿ, ಯು.ಅಮೇ ಸೇರಿದಂತೆ ಇತರರು ಹಾಜರಿದ್ದರು. ಸಂಸ್ಥೆ ನಿರ್ದೇಶಕ ಡಾ. ರಾಜೇಂದ್ರ ಮಾಳವಾಡೆ ಸ್ವಾಗತಿಸಿದರು.ಎಲ್.ಎನ್. ದೇಸಾಯಿ ಅತಿಥಿಗಳನ್ನು ಪರಿಚಯಿಸಿದರು. ಶ್ರುತಿ ನಾಯ್ಕ ಭರತನಾಟ್ಯ ಪ್ರದರ್ಶಿಸಿದರು. ಶಾಲಿನಿ ಹಾಗೂ ಅಭಿಷೇಕ ನಿರೂಪಿಸಿದರು. ರಾಘವೇಂದ್ರ ಚಿಕ್ಕಲಕಾರ ವಂದಿಸಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.