ಕಪಾಟು: ದಾರಿ ನೂರಾರುಂಟು

7

ಕಪಾಟು: ದಾರಿ ನೂರಾರುಂಟು

Published:
Updated:

ಪಿಂಗ್ ಕುದುರೆಯ ಬೆನ್ನೇರಿ ಹೊರಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಅದರಲ್ಲೂ ಬಟ್ಟೆ, ಚಪ್ಪಲಿ-ಬೂಟುಗಳ ಖರೀದಿ ಅವ್ಯಾಹತವಾದದ್ದು. ಋತುಮಾನಕ್ಕೆ, ಟ್ರೆಂಡ್‌ಗೆ ತಕ್ಕ ವಸ್ತ್ರ, ಚಪ್ಪಲಿ-ಬೂಟುಗಳನ್ನು ಖರೀದಿಸುವುದು ಫ್ಯಾಷನ್‌ನ ಸಂಕೇತ. ಕೊಳ್ಳುವ ಅಷ್ಟೆಲ್ಲಾ ಬಟ್ಟೆಗಳನ್ನು, ಚಪ್ಪಲಿ-ಬೂಟುಗಳನ್ನು ಎಲ್ಲಿ ಸಂಗ್ರಹಿಸಿ ಇಡುವುದು ಎಂದು ಎಷ್ಟೋ ಮಂದಿ ತಲೆಕೆಡಿಸಿಕೊಳ್ಳುವುದಿಲ್ಲ. ಅವುಗಳ ಸಂಖ್ಯೆ ಏರುತ್ತಾ ಹೋದಂತೆ ಅದಕ್ಕೆ ಪರಿಹಾರ ಏನೆಂದು ಹುಡುಕಲು ಆರಂಭಿಸುತ್ತಾರೆ. ಇನ್ನು ಕೆಲವರು ಸ್ವಲ್ಪ ಹಳೆಯದಾದ ಬಟ್ಟೆ, ಬೂಟು-ಚಪ್ಪಲಿಗಳನ್ನು ದಾನ ಮಾಡಿಬಿಡುತ್ತಾರೆ.ಅಂಥ ದೊಡ್ಡ ಸಂಗ್ರಹವನ್ನು ಅಚ್ಚುಕಟ್ಟಾಗಿ ಕೋಣೆಯಲ್ಲೇ ಇಡಬಹುದು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಷ್ಟೆ. ಈ ಸಂಗ್ರಹ ವ್ಯವಸ್ಥೆಯನ್ನು ಇಂಗ್ಲಿಷ್‌ನಲ್ಲಿ ‘ವಾಕ್ ಇನ್ ಕ್ಲೋಸೆಟ್’ ಎಂದು ಕರೆಯುತ್ತಾರೆ. ಬೂಟು-ಚಪ್ಪಲಿಗಳು, ಸಾಕ್ಸ್‌ಗಳು, ಟವಲ್‌ಗಳು, ಶಾಲುಗಳು, ಒಳ ಉಡುಪುಗಳು, ಜಾಕೆಟ್‌ಗಳು ಇತ್ಯಾದಿಯನ್ನು ವ್ಯವಸ್ಥಿತವಾಗಿ ಈ ಕಪಾಟಿನಲ್ಲಿ ಜೋಡಿಸಿ ಇಡಬಹುದು.ಅಗತ್ಯಗಳ ಅರಿವಿರಲಿ

ಕಪಾಟುಗಳನ್ನು ಸಿದ್ಧಪಡಿಸುವ ಮುನ್ನ ನಿಮ್ಮ ಅಗತ್ಯಗಳೇನು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮೊದಲಿಗೆ, ವಾರ್ಡ್‌ರೋಬ್ ಅನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಯಾವ್ಯಾವ ಬಟ್ಟೆಗಳನ್ನು ಹೇಗೆ ಇಟ್ಟಿದ್ದೀರಿ ಎಂದು ನೋಡಿ. ಉದಾಹರಣೆಗೆ, ಸಾಕ್ಸ್‌ಗಳನ್ನು ಒಂದು ಚೀಲದೊಳಕ್ಕೆ ಸುಮ್ಮನೆ ಹಾಕಿಟ್ಟರೆ ಹೆಚ್ಚು ಸ್ಥಳ ತೆಗೆದುಕೊಳ್ಳುತ್ತದೆ. ಅದೇ, ಸಾಕ್ಸ್‌ಗಳನ್ನು ಸುರುಳಿಯಂತೆ ಸುತ್ತಿ ಇಡಲು ಕಡಿಮೆ ಸ್ಥಳ ಸಾಕು. ಅಂಗಿಗಳನ್ನು ಕೂಡ ಮಡಿಸಿ ಇಟ್ಟರೆ ಹೆಚ್ಚು ಬಟ್ಟೆಗಳನ್ನು ಇಡಬಹುದು. ಅದೇ ಹ್ಯಾಂಗರ್‌ಗಳಿಗೆ ನೇತುಹಾಕಿದರೆ ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ.ಎಲ್ಲೆಲ್ಲಿ ಏನಿಡಬೇಕು?

‘ವಾರ್ಡ್‌ರೋಬ್‌ನಲ್ಲಿ ಕಣ್ಣೋಟಕ್ಕೆ ಸುಲಭವಾಗಿ ಎಟುಕುವಂಥ ಸ್ಥಳದಲ್ಲಿ ಯಾವ ವಸ್ತ್ರಗಳನ್ನು ಹೆಚ್ಚು ಬಳಸುವಿರೋ ಅವನ್ನೇ ಇಡಬೇಕು. ಅದಕ್ಕಿಂತ ಕೆಳಗಿನ ಸ್ಟೆಪ್‌ನಲ್ಲಿ ಅಪರೂಪಕ್ಕೆ ಬಳಸುವ ಬಟ್ಟೆಗಳನ್ನು ಇಡಬೇಕು. ಮೇಲಿನ ಸ್ಟೆಪ್‌ನಲ್ಲಂತೂ ವಿರಳಾತಿ ವಿರಳ ಬಳಕೆಯ ಬಟ್ಟೆಗಳನ್ನು ಇಡಬೇಕು’ ಎಂದು ಟಿಪ್ಸ್ ಕೊಡುತ್ತಾರೆ ಆಂತ್ರಿಕ್ ಡಿಸೈನ್ ಸ್ಟುಡಿಯೊದ ಪಾಲ್ ಆಮ್ಲ. ವಾರ್ಡ್‌ರೋಬ್‌ನಲ್ಲಿ ಇರುವ ಸಂಗ್ರಹವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನಂತರ ನಿಮ್ಮ ಅಗತ್ಯದ ‘ಕ್ಲೋಸೆಟ್’ ವಿನ್ಯಾಸದ ಕುರಿತು ಚಿಂತಿಸಿ.ಕೋಣೆಯ ಯಾವ ಭಾಗದಲ್ಲಿ ಕ್ಲೋಸೆಟ್ ಇರಬೇಕು, ಅದರ ಅಳತೆ ಎಷ್ಟಿರಬೇಕು ಎನ್ನುವುದನ್ನು ಅಗತ್ಯ ಮನಗಂಡು ನಿರ್ಧರಿಸಬೇಕು. ಎಷ್ಟು ಸ್ಟೆಪ್‌ಗಳು ಕ್ಲೋಸೆಟ್‌ನಲ್ಲಿ ಇರಬೇಕು, ಹ್ಯಾಂಗರ್‌ಗೆ ನೇತುಹಾಕುವ ಬಟ್ಟೆಗಳ ಸಂಖ್ಯೆಯನ್ನು ಆಧರಿಸಿ ಅದಕ್ಕೆ ಜಾಗ ಎಷ್ಟಿರಬೇಕು ಎನ್ನುವುದನ್ನು ತೀರ್ಮಾನಿಸಿ. ನಿಮ್ಮ ಬಳಿ ಇರುವ ಚಪ್ಪಲಿ-ಬೂಟುಗಳನ್ನೂ ಲೆಕ್ಕ ಹಾಕಿ. ಮುಂದಿನ ದಿನಗಳಲ್ಲಿ ಸಂಗ್ರಹಕ್ಕೆ ಎಷ್ಟು ಸೇರಬಹುದು ಎಂಬ ಅಂದಾಜೂ ಇರಲಿ. ಎಷ್ಟು ಹಳೆಯ ಚಪ್ಪಲಿ-ಬೂಟುಗಳನ್ನು ಸಾಮಾನ್ಯವಾಗಿ ನೀವು ಸಂಗ್ರಹಿಸಿಟ್ಟುಕೊಳ್ಳುವಿರಿ ಎಂಬ ಸ್ಪಷ್ಟತೆಯೂ ಇರಲಿ. ಆಗ ಅದಕ್ಕೆ ಅನುಗುಣವಾಗಿ ಸ್ಥಳಾವಕಾಶವನ್ನು ಕಪಾಟಿನಲ್ಲಿ ರೂಪಿಸಿಕೊಳ್ಳಲು ಸಾಧ್ಯ.ಅಳತೆ ತಪ್ಪಕೂಡದು

ಕಪಾಟು ಮಾಡುವ ಬಡಗಿಗೆ ಒಂದು ಸೂಚನೆಯನ್ನು ಕೊಡಬೇಕು. ಯಾವುದೇ ‘ಸ್ಟೆಪ್’ ಮಾಡುವಾಗ ಎರಡೆರಡು ಸಲ ಅಳೆಯಬೇಕು. ಮರದ ಅಥವಾ ಪ್ಲೈವುಡ್‌ನ ತುಂಡನ್ನು ಕತ್ತರಿಸುವ ಮೊದಲು ಹೀಗೆ ಎರಡೆರಡು ಬಾರಿ ಅಳೆಯುವುದರಿಂದ ನಿಖರವಾಗಿ ಲಭ್ಯ ಸ್ಥಳಾವಕಾಶವನ್ನು ಬಳಸಿಕೊಳ್ಳಬಹುದು. ಮರಮುಟ್ಟುಗಳ ಬಳಕೆಯಲ್ಲಿ ಆಗಬಹುದಾದ ನಷ್ಟವನ್ನೂ ಇದು ಕಡಿಮೆ ಮಾಡುತ್ತದೆ. ಸಣ್ಣ ಸಣ್ಣ ಅಗತ್ಯಗಳನ್ನೂ ಮನಗಂಡು ಕಪಾಟನ್ನು ವಿನ್ಯಾಸ ಮಾಡಿಸಿ. ಮೊದಲೇ ಇವನ್ನೆಲ್ಲಾ ಲಕ್ಯ್ಷಕ್ಕೆ ತೆಗೆದುಕೊಳ್ಳುವುದರಿಂದ ಮುಂದೆ ಮರುರೂಪಿಸುವ ಖರ್ಚನ್ನು ತಪ್ಪಿಸಬಹುದು. ಕಪಾಟು ಇರುವ ಜಾಗದಲ್ಲಿ ಕೂರಲು ಒಂದು ಕುರ್ಚಿ ಬೇಕೆ, ಬೇಡವೇ ಎನ್ನುವ ಬಗೆಗೂ ಸ್ಪಷ್ಟ ಕಲ್ಪನೆ ಇರಬೇಕು. ಕುರ್ಚಿ ಹಾಕಬೇಕು ಎಂದಾದರೆ, ವಿನ್ಯಾಸ ಬದಲಾಗಬಹುದು.ಇನ್ನಷ್ಟು ಮತ್ತಷ್ಟು

ಕಪಾಟಿನಲ್ಲಿ ಒಂದು ನಿಲುವುಗನ್ನಡಿ ಇರಬೇಕೆಂದು ಬಯಸುವಿರಾದರೆ, ಅದರಿಂದ ಮೂರು ಅಡಿಯಷ್ಟು ಹಿಂದೆ ನಿಲ್ಲಲು ಸ್ಥಳಾವಕಾಶ ಇದೆಯೇ ಎಂದು ಖಾತರಿಪಡಿಸಿಕೊಳ್ಳಿ. ಕೋಣೆಯ ಬಾಗಿಲಿನ ಹಿಂದೆ ಕನ್ನಡಿಯನ್ನು ಅಳವಡಿಸಕೂಡದು. ಇಸ್ತ್ರಿ ಮಾಡುವ ಬೋರ್ಡ್‌ ಇಡಲು ಕಪಾಟಿನಲ್ಲಿ ಸೂಕ್ತ ಜಾಗ ಮಾಡಿದರೆ, ಅದು ಸಾಕಷ್ಟು ಸ್ಥಳವನ್ನು ಉಳಿಸುತ್ತದೆ. ಕಪಾಟನ್ನು ಕಿಟಕಿಯ ಎದುರೋ, ಹತ್ತಿರವೋ ಮಾಡಿಸುವಿರಾದರೆ, ಕಿಟಕಿಯ ಎತ್ತರಕ್ಕಿಂತ ಮೂರು ಅಡಿ ಏರು ಇಂಚಿನಷ್ಟು ಮೇಲ್ಬಾಗದಲ್ಲಿ ಇರುವಂತೆ ಎಚ್ಚರವಹಿಸಿ. ಹೊರಗಿನವರ ಕಣ್ಣಿಗೆ ನಿಮ್ಮ ಕಪಾಟಿನ ವಸ್ತುಗಳು ಬೀಳದಂತೆ ಮಾಡಲು ಇದು ಅಗತ್ಯ.ಮಾರುಕಟ್ಟೆಯಲ್ಲಿ ಆಯ್ಕೆ

ತೆರೆದ ಕಪಾಟುಗಳ ಆಧುನಿಕ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯ. ಅವನ್ನು ನೋಡಿ, ನಿಮ್ಮ ಅಗತ್ಯಕ್ಕೆ ಅವು ಹೊಂದುತ್ತವೆಯೇ ಎಂದು ಪರಿಶೀಲಿಸಿ. ಹಲವು ಬಗೆಯ ‘ಶೆಲ್ಫ್‌’ಗಳನ್ನು ನಿಮ್ಮ ಆಯ್ಕೆಯನ್ನು ಆಧರಿಸಿ ಗಮನಿಸಬಹುದು. ನೋಡಿದೊಡನೆ ಥಟ್ಟನೆ ಕಾಣುವಂಥ ಕಪಾಟುಗಳ ಶೆಲ್ಫ್‌ಗಳ ಆಯ್ಕೆ ಸೂಕ್ತ. ಬೆಲ್ಟ್‌ ಹಾಗೂ ಟೈಗಳನ್ನು ಇಡುವ ರ್‍್ಯಾಕ್‌ಗಳು, ಆಕ್ರಿಲಿಕ್‌ ಅಥವಾ ಗಾಜಿನ ಎಳೆಗಳು (ಡ್ರಾಯರ್‌ಗಳು), ಸಣ್ಣ ತಂತಿಯಲ್ಲಿ ಹೆಣೆದ ಚೀಲಗಳು ಕಪಾಟಿನ ಕೋಣೆಯನ್ನು ಅಲಂಕರಿಸಲು ಸೂಕ್ತ. ನೋಡಲು ಚೆನ್ನಾಗಿ ಕಾಣುವುದಷ್ಟೇ ಅಲ್ಲದೆ, ಇವುಗಳಲ್ಲಿ ಇಟ್ಟ ವಸ್ತುಗಳು ಥಟ್ಟನೆ ನೋಟಕ್ಕೆ ಸಿಗುತ್ತವೆ.ಉದ್ದವೇ ಸೂಕ್ತ

ಅಗಲವಾದ ಕಪಾಟುಗಳನ್ನು ಮಾಡಿಸುವುದಕ್ಕಿಂತ ಹೆಚ್ಚು ಉದ್ದದ ಕಪಾಟುಗಳ ಮೊರೆಹೋಗುವುದರಿಂದ ಸ್ಥಳಾವಕಾಶ ಸದುಪಯೋಗಪಡಿಸಿಕೊಂಡಂತೆ ಆಗುತ್ತದೆ. ಓವರ್‌ಕೋಟ್‌ಗಳು, ಅಪರೂಪಕ್ಕೆ ಬಳಸುವ ಬೂಟುಗಳು–ಜಾಕೆಟ್‌ಗಳನ್ನು ಕಪಾಟಿನ ಮೇಲ್ಭಾಗದ ಶೆಲ್ಫ್‌ಗಳಲ್ಲಿ ಇಡಬಹುದು. ಫ್ರೇಮ್‌ಗಳಿಗೆ ಬಳಸುವ ಹಾರ್ಡ್‌ವೇರ್‌ಗಳು ಗಡುಸಾಗಿ ಇದ್ದಷ್ಟೂ ಬಾಳಿಕೆ ಜಾಸ್ತಿ.

ಕೊಠಡಿಯ ತೇವಾಂಶ ಆವಿಯಾಗುವಂತೆ ಮಾಡುವ ‘ಡಿಹ್ಯುಮಿಡಿಫೈರ್‌’ ಅನ್ನು ಅಳವಡಿಸುವ ವ್ಯವಸ್ಥೆ ಕೂಡ ಇದೆ. ಒಂದು ವೇಳೆ ನೆಲಮಟ್ಟದಿಂದ ಕೆಳಗಿನ ಕೋಣೆಯಲ್ಲಿ ಕಪಾಟು ಇದ್ದರೆ ಈ ಸೌಕರ್ಯ ಇರುವುದು ಉತ್ತಮ. ಇದರಿಂದ ಕಪಾಟಿನ ಬಟ್ಟೆಗಳು, ಬೂಟು–ಚಪ್ಪಲಿಗಳಿಂದ ದುರ್ನಾತ ಹೊರಬರುವುದಿಲ್ಲ. ನಿಗದಿತ ಸಮಯ್ಕಕೆ ತಿರುಗಿ ಒಳಗಿನ ಕೆಟ್ಟ ಗಾಳಿಯನ್ನು ಹೊರಗೆ ಹಾಕುವಂಥ ಕೆಲವು ಫ್ಯಾನ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ. ಮರದ ಅಥವಾ ವಿನೈಲ್‌ನ ನೆಲಹಾಸು ಕಪಾಟು ಇರುವ ಕೋಣೆಯಲ್ಲಿ ಇದ್ದರೆ ಶುಚಿಗೊಳಿಸುವುದು ಸುಲಭ. ಚಳಿಗಾಲದಲ್ಲಿ ಒಂದು ಕಾರ್ಪೆಟ್‌ ಹಾಕುವುದು ಸೂಕ್ತ.ಬೆಳಕು, ವಿಂಗಡಣೆ

ಕಪಾಟು ಇರುವೆಡೆ ಟ್ರ್ಯಾಕ್‌ಲೈಟ್‌ಗಳನ್ನು ಬಳಸಿದರೆ ಬೇಕಾದ ವಸ್ತುವನ್ನು ಬೇಗ ಪತ್ತೆಹಚ್ಚುವುದು ಸಾಧ್ಯ. ಫ್ಲೋರೆಸೆಂಟ್‌ ಲೈಟಿಂಗ್‌ ಸೂಕರ್ಯ ಕೂಡ ಕಪಾಟು ಇರುವ ಸ್ಥಳಕ್ಕೆ ಹೊಂದುತ್ತದೆ. ಬೇಕಾದ ರೀತಿಯಲ್ಲಿ ಕಪಾಟು ಹಾಗೂ ಕೋಣೆಯನ್ನು ಸಿದ್ಧಪಡಿಸಿಕೊಂಡ ಮೇಲೆ ಯಾವುದನ್ನು, ಎಲ್ಲಿ ಜೋಡಿಸಬೇಕೆನ್ನುವ ಸವಾಲು ಎದುರಾಗುತ್ತದೆ. ಬೂಟು–ಚಪ್ಪಲಿಗಳು ಒಂದು ಭಾಗದಲ್ಲಿ ಇರುವುದು ಲೇಸು. ಕೈಚೀಲಗಳಿಗೆ ಒಂದು, ಒಡವೆ–ದುಬಾರಿ ವಸ್ತ್ರಗಳಿಗೆ ಇನ್ನೊಂದು ಹೀಗೆ ಸೂಕ್ತ ರೀತಿಯಲ್ಲಿ ವಸ್ತುಗಳನ್ನು ವಿಂಗಡಿಸಿ, ಜೋಡಿಸಿಕೊಂಡರೆ ಕಪಾಟಿನ ಬಳಕೆ ಸಮರ್ಪಕವಾದೀತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry