ಸೋಮವಾರ, ಜನವರಿ 20, 2020
29 °C

ಕಪಿಲಾ ನದಿಗೆ ಕಾಯಕಲ್ಪ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡಿನ ಶ್ರಿ ನಂಜುಂಡೇಶ್ವರಸ್ವಾಮಿಯ ದರ್ಶನಕ್ಕೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿನ ಕಪಿಲಾ ನದಿಯ ಕಲುಷಿತ ವಾತಾವರಣ ನೋಡಿ  ಬೇಸರವಾಯಿತು. ಇಲ್ಲಿಗೆ ಬರುವ ಭಕ್ತರು ನದಿಯನ್ನು ಅಷ್ಟೂ ಕಲುಷಿತ ಮಾಡುತ್ತಿದ್ದಾರೆ.ಕೊಳಕು ಬಟ್ಟೆಗಳನ್ನು ಒಗೆಯುವುದು, ಮೈಗೆ ಸೋಪು ಹಚ್ಚಿಕೊಂಡು ನದಿಯಲ್ಲಿ ಮುಳುಗು ಹಾಕುವುದು, ಹಳೆಬಟ್ಟೆ, ಪೂಜಾ ಸಾಮಗ್ರಿಗಳು, ಚಪ್ಪಲಿ ಮತ್ತಿತರ ವಸುಗಳನ್ನು ನದಿಗೆ ಎಸೆದು ಕೊಳಕು ಮಾಡುತ್ತಿದ್ದಾರೆ.

 

ಈ ಹಿನ್ನೆಲೆಯಲ್ಲಿ ಭಕ್ತರು ನದಿಯನ್ನು ಚೊಕ್ಕಟವಾಗಿಡಲು ಸಹಕರಿಸಬೇಕು. ಸರ್ಕಾರ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗಂಗಾನದಿಯನ್ನು ಶುದ್ಧೀಕರಿಸಿದಂತೆ ಕಪಿಲಾ ನದಿಯನ್ನೂ ಶುದ್ಧೀಕರಿಸಬೇಕು.ದೇವಾಲಯದ ಪರಿಸರವನ್ನೂ ಇನ್ನಷ್ಟು ಚೊಕ್ಕಟವಾಗಿಡಬೇಕು. ನಂಜನಗೂಡಿನ ಸ್ಥಳೀಯ ಆಡಳಿತ ಮತ್ತು ದೇವಸ್ಥಾನ ಆಡಳಿತ ಮಂಡಳಿಗಳು ಈ ಕುರಿತಂತೆ ಗಮನಹರಿಸಬೇಕು.

ಪ್ರತಿಕ್ರಿಯಿಸಿ (+)