ಕಪ್ಪುಪಟ್ಟಿಗೆ ಹಖಾನಿ ಸೇರಿಸಿ- ಅಮೆರಿಕ ಜನಪ್ರತಿನಿಧಿಗಳ ಒತ್ತಾಯ

ಶನಿವಾರ, ಮೇ 25, 2019
22 °C

ಕಪ್ಪುಪಟ್ಟಿಗೆ ಹಖಾನಿ ಸೇರಿಸಿ- ಅಮೆರಿಕ ಜನಪ್ರತಿನಿಧಿಗಳ ಒತ್ತಾಯ

Published:
Updated:

ವಾಷಿಂಗ್ಟನ್ (ಪಿಟಿಐ): ಭಯೋತ್ಪಾದನಾ ಸಂಘಟನೆಯಾದ ಹಖಾನಿ ಜಾಲವನ್ನು ಕೂಡಲೇ ಭಯೋತ್ಪಾದನೆ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅಮೆರಿಕದ ಪ್ರಮುಖ ಜನಪ್ರತಿನಿಧಿಗಳು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರನ್ನು ಒತ್ತಾಯಿಸಿದ್ದಾರೆ.`ಹಖಾನಿ ಸಂಘಟನೆಯು ಪಾಕಿಸ್ತಾನದ ಸೇನಾ ಗುಪ್ತಚರ ಸಂಸ್ಥೆ (ಐಎಸ್‌ಐ)ಯ ಅಸ್ತ್ರವಾಗಿದೆ~ ಎಂಬ ಅಮೆರಿಕ ಸೇನಾ ಮುಖ್ಯಸ್ಥರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಜನಪ್ರತಿನಿಧಿಗಳು ವಿದೇಶಾಂಗ ಇಲಾಖೆ ಮೇಲೆ ಕಪ್ಪು ಪಟ್ಟಿಗೆ ಒತ್ತಡ ಹಾಕುತ್ತಿದ್ದಾರೆ.`ಹಖಾನಿ ಜಾಲವನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಕಪ್ಪುಪಟ್ಟಿಯಲ್ಲಿ ಸೇರಿಸಬೇಕು ಎಂದು ನಾನು ವಿದೇಶಾಂಗ ಇಲಾಖೆಗೆ ಮನವಿ ಮಾಡುತ್ತೇನೆ~ ಎಂದು ಸೆನೆಟ್ ಗುಪ್ತಚರ ಸಮಿತಿ ಅಧ್ಯಕ್ಷೆ ಡಯಾನೆ ಫೀನ್‌ಸ್ಟೀನ್ ಹೇಳಿದ್ದಾರೆ.`ಕಪ್ಪುಪಟ್ಟಿಯಲ್ಲಿ ಸ್ಥಾನ ಪಡೆಯಲು ಬೇಕಾದ ಎಲ್ಲಾ ಕುಖ್ಯಾತಿಯನ್ನು ಅದು ಗಳಿಸಿದೆ.ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ಹಖಾನಿ ಸಂಘಟನೆ ದಾಳಿ ನಡೆಸುತ್ತಾ ಬಂದಿದೆ. ಅಲ್ಲದೇ ಆಫ್ಘಾನಿಸ್ತಾನದಲ್ಲಿ ಇರುವ ಅಮೆರಿಕ ಮತ್ತು ಮೈತ್ರಿ ಪಡೆಗಳ ಸಿಬ್ಬಂದಿ ಹಾಗೂ ಹಿತಾಸಕ್ತಿಗಳಿಗೆ ನಿರಂತರವಾಗಿ ಬೆದರಿಕೆಯನ್ನು ಒಡ್ಡುತ್ತಿದೆ~ ಎಂದು ಫೀನ್‌ಸ್ಟೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮತ್ತೊಬ್ಬ ಪ್ರಮುಖ ಸೆನೆಟರ್ ಹಾಗೂ  ಸೆನೆಟ್‌ನ ಶಸ್ತ್ರಾಸ್ತ್ರ ಸೇವೆಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಕಾರ್ಲ್ ಲೆವಿನ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಹಖಾನಿ ಸಂಘಟನೆಯನ್ನು ವಿದೇಶಿ ಭಯೋತ್ಪಾದನಾ  ಸಂಘಟನೆ ಎಂದು ಘೋಷಿಸಲು ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಅವರು ಕಾಂಗ್ರೆಸ್ ಸಮ್ಮೇಳನದಲ್ಲಿ ಪ್ರಶ್ನಿಸಿದ್ದಾರೆ.`ಹಖಾನಿ ಉಗ್ರರ ಜಾಲವು ಪಾಕಿಸ್ತಾನದ ಸೇನಾ ಗುಪ್ತಚರ ಸಂಸ್ಥೆಯ ಅಸ್ತ್ರದಂತೆ ವರ್ತಿಸುತ್ತಿದೆ~ ಎಂದು ಅಮೆರಿಕದ ಸೇನಾ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲ್ಲೆನ್ ಆರೋಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry