ಭಾನುವಾರ, ಏಪ್ರಿಲ್ 18, 2021
23 °C

ಕಪ್ಪುರಂಧ್ರದ ರೇಡಿಯೊ ಅಲೆ ಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಐಎಎನ್‌ಎಸ್): ಕಪ್ಪುರಂಧ್ರದಿಂದ ರೇಡಿಯೊ ಅಲೆಗಳು ಹೊಮ್ಮುತ್ತಿರುವುದನ್ನು ವಿಜ್ಞಾನಿಗಳು ಇದೇ ಮೊತ್ತಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.30 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಇಎಸ್‌ಒ 243-49 ಎಂಬ ನಕ್ಷತ್ರಪುಂಜದ ಒಡಲಲ್ಲಿರುವ ಎಚ್‌ಎಲ್‌ಎಕ್ಸ್-1 ಎಂಬ ಮಧ್ಯಮಗಾತ್ರದ ಕಪ್ಪುರಂಧ್ರದಿಂದ ಈ ಸಂಕೇತಗಳು ಚಿಮ್ಮುತ್ತಿವೆ ಎಂದು ಸಿಡ್ನಿ ಸ್ಕೂಲ್ ಆಫ್ ಫಿಸಿಕ್ಸ್‌ನ ಸಂಶೋಧಕರು ತಿಳಿಸಿದ್ದಾರೆ.ಎಚ್‌ಎಲ್‌ಎಕ್ಸ್- 1 ಕಪ್ಪುರಂಧ್ರವು ನಮ್ಮ ಸೂರ್ಯನಿಗಿಂತ ಸುಮಾರು 20,000 ಪಟ್ಟು ಗಾತ್ರದ್ದಾಗಿರಬಹುದು. ಇದೀಗ ಈ ಕಪ್ಪುರಂಧ್ರದಿಂದ ಹೊರಹೊಮ್ಮುತ್ತಿರುವ ರೇಡಿಯೊ ಅಲೆಗಳನ್ನು ಆಧರಿಸಿ ಕಪ್ಪುರಂಧ್ರದ ಗಾತ್ರವನ್ನು ನಿಖರವಾಗಿ ಲೆಕ್ಕಹಾಕಬಹುದು ಎಂದೂ ಅವರು ಹೇಳಿದ್ದಾರೆ.ಆಸ್ಟ್ರೇಲಿಯಾದ ಟೆಲಿಸ್ಕೋಪ್ ಅರೇ ಮತ್ತು ನಾಸಾದ ಸ್ವಿಫ್ಟ್ ಉಪಗ್ರಹಗಳ ನೆರವಿನಿಂದ ಈ ರೇಡಿಯೊ ಅಲೆಗಳನ್ನು ಪತ್ತೆಹಚ್ಚಲಾಗಿದೆ. ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕದ ವಿಜ್ಞಾನಿಗಳು ಕೂಡ ಸಂಶೋಧಕರ ತಂಡದಲ್ಲಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.